ETV Bharat / city

ಎಟಿಎಂನಿಂದ 32 ಲಕ್ಷ ಎಗರಿಸಿದ್ದ ಖದೀಮರು: ಗಡ್ಡ, ನಡಿಯೋ ಸ್ಟೈಲ್ ನೋಡಿ ಕಳ್ಳರಿಗೆ ಬೇಡಿ ಹಾಕಿದ ಪೊಲೀಸರು - ಬೆಂಗಳೂರು ಎಟಿಎಂ ಸುದ್ದಿ

ಎಟಿಎಂಗೆ ಹಣ ಹಾಕುವ ಸಿಬ್ಬಂದಿಯೇ ಎಟಿಎಂಗೆ ಕನ್ನ ಹಾಕಿ ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ. ಗಡ್ಡ, ಸ್ಟೈಲ್​ ನೋಡಿ ಖದೀಮರಿಗೆ ಬೇಡಿ ಹಾಕಿದ ಪೊಲೀಸರು.

ಎಟಿಎಂ ದರೋಡೆ
ಎಟಿಎಂ ದರೋಡೆ
author img

By

Published : Aug 21, 2020, 2:44 AM IST

Updated : Aug 21, 2020, 4:18 AM IST

ಬೆಂಗಳೂರು: ಅಪರಾಧ ಎಸಗುವ ಮುನ್ನ ಎಷ್ಟೇ ಚಾಣಕ್ಯತನ ತೋರಿಸಿದರೂ ಸಣ್ಣ ಸುಳಿವು ಬಿಟ್ಟಿರುತ್ತಾರೆ ಎಂಬ ಮಾತು ಜನಜನಿತ. ಹಾಗೆಯೇ ಕಂಪನಿಯ ಸಿಬ್ಬಂದಿಯೇ ಎಟಿಎಂಗಳಿಗೆ ಹಾಕಬೇಕಿದ್ದ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ಸಿಕ್ಕಿಬಿದ್ದಿದ್ದಾನೆೆ.

ಕಳ್ಳರು ಚಾಪೆ ಕೆಳಗೆ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ ಅನ್ನೋದು ಈ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ. ಎಟಿಎಂ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸಿಬ್ಬಂದಿಗಳೇ ಇಲ್ಲಿ ಕಳ್ಳರು. ಎಟಿಎಂಗಳಿಗೆ ಹಣ ಹಾಕದೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಕಂಪೆನಿಯ ಕಸ್ಟೋಡಿಯನ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಗೌರಿಬಿದನೂರು ಮೂಲದ ಕಿರಣ್ ಹಾಗೂ ಅಶ್ವತ್ ಬಂಧಿತ‌ ಖದೀಮರು.
ಬಂಧಿತ ಅಶ್ವತ್ಥ್
ಬಂಧಿತ ಅಶ್ವತ್ಥ್

ಏನಿದು ಪ್ರಕರಣ:

ಸಿಎಂಎಸ್ ಇನ್ಪೋ ಸಿಸ್ಟಮ್ ಪ್ರೈವೇಟ್ ಕಂಪೆನಿಯಲ್ಲಿ ಒಂದೂವರೆ ವರ್ಷಗಳಿಂದ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ಸೂರ್ಯ ಇದೇ ತಿಂಗಳು 7ರಂದು ರಾಜಾಜಿನಗರ ತಮ್ಮ ಶಾಖಾ ಕಚೇರಿಯಿಂದ 37 ಲಕ್ಷ ಹಾಗೂ ಮತ್ತೊಂದು ಬ್ರಾಂಚ್ ನಿಂದ 2.20 ಕೋಟಿ ಹಣ ಪಡೆದುಕೊಂಡು ಐಟಿಪಿಎಲ್ ರೋಡ್ ಕೆನೆರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಇಂಡಿಕ್ಯಾಷ್​​ಗಳಲ್ಲಿ ಹಣ ಹಾಕಿದ ಬಳಿಕ‌ ಹಲಸೂರಿನ ಬಜಾರ್ ಸ್ಟ್ರೀಟ್ ಹಾಗೂ ಸಿಎಂಎಚ್ ರಸ್ತೆಯ ಲಕ್ಷ್ಮೀಪುರ ಕೆನಾರ ಬ್ಯಾಂಕ್​ಗಳಿಗೆ ಕ್ರಮವಾಗಿ 6 ಲಕ್ಷ ಹಾಗೂ 12 ಲಕ್ಷ ರೂಪಾಯಿ ಹಾಕಿ ತಮ್ಮ‌‌ ಕೆಲಸ ಮುಗಿಸಿದ್ದ.

ಬಂಧಿತ ಕಿರಣ್
ಬಂಧಿತ ಕಿರಣ್

‌ಹಣ ಹಾಕಿದ ಒಂದೇ ದಿನದ ಬಳಿಕ ಎಟಿಎಂನಲ್ಲಿ ಹಣ ಇರಲಿಲ್ಲ. ಈ ಸಂಬಂಧ ಕಂಪನಿಯ ಮಾಲೀಕ‌ ಸುಬ್ರಮಣ್ಯ ಎಂಬುವರು‌ ಮತ್ತೆ ಸೂರ್ಯನಿಗೆ ಕಳುಹಿಸಿ ಹಣ ಇಲ್ಲದಿರುವ ಬಗ್ಗೆ ಖಾತ್ರಿಪಡಿಸಿಕೊಂಡಿದ್ದರು‌. ಬಳಿಕ ಸುಮಾರು 32 ಲಕ್ಷ ಹಣ ಕಳ್ಳತನವಾಗಿದೆ ಎಂದು ತಮ್ಮ‌ ಕಂಪೆನಿಯ ಸಿಬ್ಬಂದಿ ವಿರುದ್ಧವೇ ಮಾಲೀಕರು ದೂರು ನೀಡಿದ್ದರು.

ಪಾಸ್ ವರ್ಡ್ ಹಾಕಿ ಲಕ್ಷ-ಲಕ್ಷ ದೋಚಿದ‌ ಖದೀಮ: ಸೂರ್ಯ ಕೆಲಸ‌ ಮಾಡುವ ಮುನ್ನ‌ ಆರೋಪಿ ಕಿರಣ್ ಇದೇ ರೂಟ್​ನಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಈತನ‌ ರೂಟ್ ಬದಲಾಯಿಸಿಕೊಂಡಿದ್ದ. ಆದರೆ ಈ ರೂಟಿನಲ್ಲಿ ಬರುವ ಎಲ್ಲಾ ಎಟಿಎಂಗಳ ಪಾಸ್ ವರ್ಡ್ ಅರಿತಿದ್ಧ. ಅಂತೆಯೇ ಹಲಸೂರಿನ ಎರಡು ಎಟಿಎಂಗಳಲ್ಲಿ ಹಣ ಹಾಕಿದ ಅರ್ಧಗಂಟೆಯಲ್ಲಿ ಒಟ್ಟು 32,28,500 ಲಕ್ಷ ರೂಪಾಯಿ ಎಗರಿಸಿ ಸುಮ್ಮನಾಗಿದ್ದ. ಈ ಕೃತ್ಯಕ್ಕೆ ಅಶ್ವತ್ ಸಾಥ್ ಕೊಟ್ಟಿದ್ದ.

ಹಲಸೂರು ಪೊಲೀಸ್ ಠಾಣೆ

ನಡಿಯೋ ಸ್ಟೈಲ್, ಗಡ್ಡ ನೋಡಿ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರು: ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ‌ಗೆ ಇಳಿದ‌ ಹಲಸೂರು‌ ಇನ್ಸ್​ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತಂಡ, ಕಿರಣ್ ಸೇರಿದಂತೆ ಎಲ್ಲಾ ಕಸ್ಟೋಡಿಯನ್​ಗಳನ್ನು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ‌‌ ಕಿರಣ್ ಏನೂ ಮಾಡದವನಂತೆ‌ ನಾಟಕವಾಡಿದ್ದ. ‌ಇನ್ನೊಂದೆಡೆ ಹೆಲ್ಮೆಟ್, ಮಾಸ್ಕ್ ಧರಿಸಿಕೊಂಡು ಎಟಿಎಂಯೊಳಗೆ ಹೋಗಿ ಹಣ ಎಗರಿಸುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧಾರದ ಮೇಲೆ‌ ತನಿಖೆ ಕೈಗೊಂಡ ಪೊಲೀಸರಿಗೆ ದೃಶ್ಯದಲ್ಲಿ‌ ಆರೋಪಿ ನಡೆಯುವ ಶೈಲಿ, ಗಡ್ಡ ಬಿಟ್ಟ ರೀತಿ ಎಲ್ಲವೂ ಕಿರಣ್​ಗೆ ಹೋಲುತಿತ್ತು. ಈ ಸಂಬಂಧ ಕಿರಣ್​​ನನ್ನು ಕರೆಯಿಸಿ ಪೊಲೀಸ್ ಶೈಲಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

ಸಾಲಗಾರರ ಹಾವಳಿ‌ಗೆ ಬೇಸತ್ತಿದ್ದ ಆರೋಪಿ:ಗೌರಿಬಿದನೂರು ಮೂಲದ‌‌ ಕಿರಣ್, ಊರಿನಲ್ಲಿ ಸಾಲ‌ ಮಾಡಿಕೊಂಡಿದ್ದ. ಊರಿನಲ್ಲಿ ಸ್ವಪ್ರತಿಷ್ಠೆಗಾಗಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಸಾಲ‌ ಮಾಡಿ ದುಂದುವೆಚ್ಚ ಮಾಡುತ್ತಿದ್ದ. ಕೊಟ್ಟಿದ್ದ ಹಣವನ್ನು ನೀಡದ ಪರಿಣಾಮ ಸಾಲಗಾರರು ಈತನ ಬೆನ್ನು ಬಿದ್ದಿದ್ದರು. ಅದೇ ಊರಿನ ಅಶ್ವತ್​ನನ್ನು ಕರೆಯಿಸಿಕೊಂಡು ಸಂಚು ರೂಪಿಸಿ, ‌ಕೃತ್ಯ ಎಸಗಿದ್ದ. ಸದ್ಯ ಬಂಧಿತರಿಂದ 24 ಲಕ್ಷ ಹಣ ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.

Last Updated : Aug 21, 2020, 4:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.