ETV Bharat / city

ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಧಿಕೃತ: ಪಾಲಿಕೆಗೆ ಸೃಷ್ಟಿಯಾಗಿದೆ ಹೊಸ ತಲೆನೋವು - ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಂತಿಮ ವರದಿ ಪ್ರಕಟ

ವಾರ್ಡ್ ಮರು ವಿಂಗಡಣೆ ಅಂತಿಮವಾಗುತ್ತಿದ್ದಂತೆ ವಾರ್ಡ್ ಮೀಸಲು ತಲೆನೋವು ಬಿಬಿಎಂಪಿ ಅಧಿಕಾರಿಗಳಿಗೆ ಎದುರಾಗಿದೆ.

BBMP
ಬಿಬಿಎಂಪಿ
author img

By

Published : Jul 16, 2022, 1:23 PM IST

ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅಂತಿಮ ವರದಿಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ. ಇದರಿಂದ ಪಾಲಿಕೆಗೆ ಹೊಸ ತಲೆ ನೋವು ಸೃಷ್ಟಿಯಾಗಿದೆ. ಸುಪ್ರೀಂಕೋರ್ಟ್ ನೀಡಿದ್ದ ಗಡುವು (ಜು.22ರ) ಹತ್ತಿರ ಬಂದಿದೆ. ಸದ್ಯ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣವಾಗಿದೆ.‌ ಮುಖ್ಯವಾಗಿ ಮೀಸಲು ನಿಗದಿ ಈ ಕುರಿತು ಕೋರ್ಟ್​ನಲ್ಲಿ ಮತ್ತಷ್ಟು ಕಾಲಾವಕಾಶ ಕೋರುವ ಸಾಧ್ಯತೆಗಳಿವೆ.

ಜನಸಂಖ್ಯೆ ಅನುಗುಣವಾಗಿ ಈಗ 198 ವಾರ್ಡ್​ಗಳನ್ನು 243 ವಾರ್ಡ್​ಗಳಾಗಿ ಪರಿವರ್ತನೆ ಮಾಡಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ಅದನ್ನು ಪರಿಹರಿಸಲು 15 ದಿನ ಕಾಲಾವಕಾಶ ಕೊಡಲಾಗಿತ್ತು. ಇದೇ ರೀತಿ ಮೀಸಲು ಪಟ್ಟಿಗೂ ಇಷ್ಟೇ ಕಾಲ ಬೇಕಾಗುತ್ತದೆ. ಅಷ್ಟರೊಳಗೆ ಸುಪ್ರೀಂ ನೀಡಿದ್ದ ಗಡುವು ಅಂತ್ಯವಾಗಲಿದೆ.

ಅದಲು ಬದಲಾದ ವಾರ್ಡ್​ಗಳ ಹೆಸರು: 243 ವಾರ್ಡ್​ಗಳಲ್ಲಿ 28 ವಾರ್ಡ್​ಗಳ ಗಡಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಅಲ್ಲದೇ ಕೆಲವೊಂದು ವಾರ್ಡ್​ಗಳ ಹೆಸರು ಅದಲು ಬದಲಾಗಿದೆ. ಆಂಧ್ರಹಳ್ಳಿ ವಾರ್ಡ್ ದೊಡ್ಡ ಬಿದ್ರಕಲ್ಲು ವಾರ್ಡ್​ ಮಾಡಲಾಗಿದೆ. ಕೆಂಗೇರಿ ಉಪ ನಗರ, ಹೆಮ್ಮಗೆಪುರ ಹಿಂದೆ ತಲಘಟ್ಟಪುರ ವಾರ್ಡ್ ಆಗಿತ್ತು. ಒಟ್ಟು 24 ವಾರ್ಡ್​ಗಳ ಹೆಸರು ಅದಲು ಬದಲಾಗಿದೆ.

ಮಾಜಿ ಮೇಯರ್ ಗಂಗಾಂಬಿಕೆ ಆಕ್ಷೇಪಣೆ ತಿರಸ್ಕಾರ: ಈ ವೇಳೆ ಕೆಲವೊಂದು ಆಕ್ಷೇಪಣೆಗೆ ಸರ್ಕಾರ ಸೊಪ್ಪು ಹಾಕಿಲ್ಲ. ಜಯನಗರ ವಾರ್ಡ್ ಅಶೋಕ ಸ್ಥಂಭ ಮಾಡಿದ್ದಕ್ಕೆ ಮಾಜಿ ಮೇಯರ್ ಗಂಗಾಂಬಿಕೆ ವಿರೋಧಿಸಿದ್ದರು. ಅಲ್ಲದೇ, ಭೈರಸಂದ್ರ ವಾರ್ಡ್ ಗಡಿ ಬದಲಾವಣೆ ಒತ್ತಾಯಿಸಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಇದಕ್ಕೆ ಪಾಲಿಕೆ ಹಾಗೂ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಬಿಬಿಎಂಪಿ ವಾರ್ಡ್ ವಿಂಗಡಣೆ: ಸಂಘ ಸಂಸ್ಥೆಗಳಿಂದ 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಅರ್ಜಿ ಸಲ್ಲಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.