ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 'ಜನಗಣತಿ-2021'ರ ಪೂರ್ವತಯಾರಿ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಬಿಬಿಎಂಪಿ ಆಯುಕ್ತರು ಹಾಗೂ ಜನಗಣತಿ ನೋಡಲ್ ಅಧಿಕಾರಿ ಬಿ ಹೆಚ್ ಅನಿಲ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.
ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದ್ದು, ಮನೆಗಣತಿ ಹಾಗೂ ಮನೆಪಟ್ಟಿ 2020 ಏಪ್ರಿಲ್ 15 ರಿಂದ ಮೇ 29 ರವರೆಗೆ ನಡೆಯಲಿದೆ. ಫೆಬ್ರವರಿ 9 ರಿಂದ ಫೆಬ್ರವರಿ 28 ರವರೆಗೆ ಜನಗಣತಿ ನಡೆಯಲಿದೆ. ಜನಗಣತಿಯ ಪರಿಷ್ಕರಣೆ ಸುತ್ತು (ಬಿಟ್ಟೋದವರ ಪಟ್ಟಿಯನ್ನು ಸೇರಿಸಲು) 2021 ಮಾರ್ಚ್ 1 ರಿಂದ ಮಾರ್ಚ್ 5 ರವೆರೆಗೆ ನಡೆಯಲಿದೆ ಎಂದರು.
'Census - 2021 houselist, Census- 2021 household, Census- 2021 NRP ಈ ಮೂರು ಮೊಬೈಲ್ ಆ್ಯಪ್ಗಳನ್ನು ಬಿಡುಗಡೆ ಮಾಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 2021ರ ಜನಗಣತಿಯನ್ನು 19,289 ಶಿಕ್ಷಕರು ಮಾಡಲಿದ್ದಾರೆ.
ಜನಗಣತಿಯನ್ನು ಮೂರು ವಿಧಗಳಲ್ಲಿ ಮಾಡಬಹುದಾಗಿದ್ದು, ಎಣಿಕೆದಾರರು ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆಮನೆಗೆ ತೆರಳಿ ಮಾಡುವುದು, ಪೇಪರ್ ಮೂಲಕ ಮಾಡುವುದು ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಸ್ವತಃ ಮನೆಯವರೇ ಮಾಹಿತಿಯನ್ನು ನಮೂದಿಸಬಹುದಾಗಿದೆ.