ETV Bharat / city

ಕಸದ ಲಾರಿಗಳ ಅನಾಹುತ ಪ್ರಕರಣಗಳಲ್ಲಿ ಚಾಲಕರ ತಪ್ಪಿಲ್ಲ; ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ - ಲಾರಿಗಳು 40 ಕೀಲೊಮೀಟರ್ ವೇಗ ಮೀರಿ ಚಲಿಸದಂತೆ ವ್ಯವಸ್ಥೆ

ಲಾರಿಗಳು 40 ಕೀಲೊಮೀಟರ್ ವೇಗ ಮೀರಿ ಚಲಿಸದಂತೆ ವ್ಯವಸ್ಥೆ ಆಗಬೇಕು. ಬಿಬಿಎಂಪಿ ಅಧಿಕಾರಿಗಳ ಮೂಲಕ ಮದ್ಯಪಾನ ಸೇವನೆ ಬಗ್ಗೆ ಆಲ್ಕೊಮೀಟರ್ ಮೂಲಕ ಚೆಕ್ ಮಾಡುವ ವ್ಯವಸ್ಥೆ ಮಾಡಲು ಹೇಳಿದ್ದೇವೆ ಎಂದು ಸಂಚಾರ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

bbmp contrectors association president subramanya reaction about accident
ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ
author img

By

Published : May 16, 2022, 4:22 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಸದ ಲಾರಿಗಳಿಂದ ಅನಾಹುತ ಪ್ರಕರಣಗಳಲ್ಲಿ ನಮ್ಮ ಚಾಲಕರ ತಪ್ಪಿಲ್ಲ. ನಮ್ಮ ಕಸದ ಲಾರಿಗಳಿಂದ ಅಪಘಾತ ನಡೆದಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದರೆ, ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಸುಖಾಸುಮ್ಮನೆ ಬಿಬಿಎಂಪಿ ಕಸ ಗುತ್ತಿಗೆದಾರರನ್ನು ಗುರಿ ಮಾಡಲಾಗುತ್ತಿದೆ. ನಮ್ಮ ಲಾರಿ ಜಪ್ತಿ ಮಾಡಿದರೆ ಬಿಡಿಸಿಕೊಳ್ಳಲು ಪೊಲೀಸರೇ ಲಂಚ ಪಡೆಯುತ್ತಾರೆ. ಲಕ್ಷ ರೂಪಾಯಿ ಕೊಡದೇ ನಮ್ಮ ಲಾರಿಗಳನ್ನು ಬಿಡುವುದಿಲ್ಲ ಎಂದು ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ತಿಳಿಸಿದರು.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿ, ಥಣಿಸಂಧ್ರದ ಘಟನೆಯಲ್ಲೂ ನಮ್ಮ‌ ಚಾಲಕನ ತಪ್ಪಿರಲಿಲ್ಲ. ಆ ಡೆಲಿವರಿ ಬಾಯ್ ಮದ್ಯದ ಅಮಲಿನಲ್ಲಿ ಇರುವುದು ಪೊಲೀಸರಿಗೂ ಗೊತ್ತಾಗಿದೆ. ಆದರೆ, ಇನ್ಶೂರನ್ಸ್ ಸಿಗಲಿ ಎಂದೂ ಪೊಲೀಸರು ಆ ವಿಚಾರ ಕೈ ಬಿಡುವಂತೆ ಹೇಳಿದ್ದರು. ಮಾನವೀಯತೆ ದೃಷ್ಟಿಯಿಂದ ಹೋಗಲಿ ಬಿಡಿ ಎಂದಿದ್ದೆವು. ಆದರೆ, ಮರು ಕ್ಷಣವೇ ನಮ್ಮ ಚಾಲಕನಿಗೆ ಹೆವೀ ವೈಕಲ್ಸ್ ಬ್ಯಾಡ್ಜ್ ಇಲ್ಲ ಎಂದು ಹೇಳಲಾಯಿತು. ಅದನ್ನು ನಾವು ಸಾಬೀತು ಮಾಡುತ್ತೇವೆ ಎಂದರು.

ಅಧಿಕಾರಿಗಳಿಂದ ಕಿರುಕುಳ: ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಕೊಡುವ ಕಿರುಕಳಕ್ಕೆ ನಮ್ಮ ಸಿಬ್ಬಂದಿ ಕೆಲಸ ಬಿಟ್ಟು‌ ಹೋಗುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ಕಸದ ಲಾರಿಗಳ ಅನಾಹುತ ಪ್ರಕರಣಗಳಲ್ಲಿ ಚಾಲಕರ ತಪ್ಪಿಲ್ಲ

ಕಸದ ಲಾರಿಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ: ಕಸದ ಲಾರಿಗಳಿಂದ ಮಾರಣಾಂತಿಕ ಅಪಘಾತ ಹಿನ್ನಲೆ ವಿಚಾರವಾಗಿ ಸಂಚಾರ ಆಯುಕ್ತ ರವಿಕಾಂತೆಗೌಡ ಸ್ಷಷ್ಟನೆ ನೀಡಿದ್ದಾರೆ. ಲಾರಿಗಳು 40 ಕೀಲೊಮೀಟರ್ ವೇಗ ಮೀರಿ ಚಲಿಸದಂತೆ ವ್ಯವಸ್ಥೆ ಆಗಬೇಕು. ಬಿಬಿಎಂಪಿ ಅಧಿಕಾರಿಗಳ ಮೂಲಕ ಮದ್ಯಪಾನ ಸೇವನೆ ಬಗ್ಗೆ ಆಲ್ಕೊಮೀಟರ್ ಮೂಲಕ ಚೆಕ್ ಮಾಡಿಸಬೇಕು ಎಂದಿದ್ದಾರೆ.

ಲಾರಿಗಳು 40 ಕೀಲೊಮೀಟರ್ ವೇಗ ಮೀರಿ ಚಲಿಸದಂತೆ ವ್ಯವಸ್ಥೆ

ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಮಾಡಿದ್ದಾರೆ. ಸಂಚಾರ ತರಬೇತಿ ಶಾಲೆಯಲ್ಲಿ ಬಿಬಿಎಂಪಿ ಕಸದ ಲಾರಿ ಚಾಲಕರಿಗೆ ತರಬೇತಿ ನೀಡಲಾಗ್ತಿದೆ. ಯಾವ ರೀತಿ ವಾಹನಗಳ ಚಾಲನೆ ಮಾಡಬೇಕು. ಎಲ್ಲಿ ವಾಹನ ನಿಲ್ಲಿಸಬೇಕು. ಎಲ್ಲವನ್ನೂ ದೃಶ್ಯ ಹಾಗೂ ಶ್ರವಣ ಸಂವಹನ ಮೂಲ ಕಲಿಸಲಾಗುತ್ತಿದೆ. ಆದಷ್ಟು ಬೇಗ ಸ್ಫೀಡ್ ಗವರ್ನರ್ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಆ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದತ್ತಪೀಠದಲ್ಲಿ ಮಾಂಸಾಹಾರ ಸೇವನೆ ಅಕ್ಷಮ್ಯ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಸಿ.ಟಿ. ರವಿ ಆಗ್ರಹ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.