ಬೆಂಗಳೂರು/ದೇವನಹಳ್ಳಿ: ಎಂಬಿಬಿಎಸ್ ಮಾಡಲು ಫಿಲಿಪೈನ್ಸ್ಗೆ ತೆರಳಿದ್ದ ಮಗನನ್ನು ನೋಡಲು ತಿರುಪತಿ ತಿಮ್ಮಪ್ಪನಿಗೆ ತಾಯಿಯೊಬ್ಬಳು ಹರಕೆ ಹೂತ್ತಿದ್ದರು. ಆರು ತಿಂಗಳ ನಂತರ ಇಂದು ಊರಿಗೆ ಮರಳಿದ ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದ ಘಟನೆ ಕಂಡು ಬಂದಿತು.
ಬೆಂಗಳೂರಿನ ಕೋರಮಂಗಲದ ಜಯಶ್ರೀ ಬಾಲಾಜಿ ಎನ್ನುವವರ ಮಗ ಸಚಿನ್ ಬಾಲಾಜಿ ಮೂರು ವರ್ಷಗಳ ಹಿಂದೆ ಎಂಬಿಬಿಎಸ್ ಓದಲು ಫಿಲಿಪೈನ್ಸ್ಗೆ ಹೋಗಿದ್ದ. ಡಿಸೆಂಬರ್ನಲ್ಲಿ ರಜೆಯ ಮೇಲೆ ಬೆಂಗಳೂರಿಗೆ ಬಂದು ಹೋಗಿದ್ದ. ಆರು ತಿಂಗಳ ನಂತರ ಇಂದು ಮಗ ಬೆಂಗಳೂರಿಗೆ ಬಂದಿದ್ದು, ಮಗನನ್ನು ನೋಡಿ ತಾಯಿ ಆನಂದಬಾಷ್ಪ ಸುರಿಸಿದರು.
ಮಾರ್ಚ್ 18ರಂದು ಸಚಿನ್ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ ಆಗಿತ್ತು. ಆದರೆ ಲಾಕ್ಡೌನ್ನಿಂದ ಟಿಕೆಟ್ ರದ್ದಾಗಿತ್ತು. ಕೊನೆಗೆ ಮಗ ಕ್ಷೇಮವಾಗಿ ಬರಲೆಂದು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಮಗನ ಬರುವಿಕೆಗಾಗಿ ಎದುರು ನೋಡುತ್ತಿದ್ದೆ. ಇದೀಗ ಮಗ ರಾಜ್ಯಕ್ಕೆ ಬಂದಿದ್ದು ನನಗೆ ಸಂತಸ ತಂದಿದೆ ಎಂದು ಜಯಶ್ರೀ ಬಾಲಾಜಿ ತಿಳಿಸಿದರು.