ETV Bharat / city

ಖುಷಿಗಾಗಿ ವೇಗದ ಸವಾರಿ : ಐಷಾರಾಮಿ ಕಾರು ವಶ - ಐಷಾರಾಮಿ ಕಾರು ವೇಗದ ಸವಾರಿ ಪ್ರಕರಣ

ಐಷಾರಾಮಿ ವಾಹನವನ್ನು ನಿರ್ಲಕ್ಷ್ಯದಿಂದ ವೇಗವಾಗಿ ಸವಾರಿ ಮಾಡಿ ಜನರಿಗೆ ಮತ್ತು ವಾಹನ ಸವಾರರಿಗೆ ಭೀತಿ ಹುಟ್ಟಿಸಿದ್ದ ಚಾಲಕನ್ನು ಹೈಗ್ರೌಂಡ್ಸ್ ಸಂಚಾರ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಪ್ರಕರಣ ದಾಖಲಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

porsche 911GT3
ಐಷಾರಾಮಿ ಕಾರು
author img

By

Published : Jul 28, 2020, 11:33 PM IST

ಬೆಂಗಳೂರು : ಐಷಾರಾಮಿ ಕಾರು ಚಾಲಕನೊಬ್ಬ ‌ಹೈಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯ ಬಳಿಯ ‌ಬಿಡಿಎ ಬ್ರಿಡ್ಜ್ ಕಡೆಯಿಂದ ಅತಿವೇಗವಾಗಿ ಬರುವುದಲ್ಲದೆ, ವಾಹನದ ಕರ್ಕಶ ಶಬ್ದದೊಂದಿಗೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾನೆ. ಇದಲ್ಲದೆ, ಇತರೆ ವಾಹನಸವಾರರು ಭಯ ಬೀಳುವ ಕಾರು ಚಲಾಯಿಸಿದ್ದಾನೆ.

ಈ ವಿಚಾರವಾಗಿ ಹೈಗ್ರೌಂಡ್ಸ್ ಸಂಚಾರ ಪೊಲೀಸರು, ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಪರಾರಿಯಾಗಿದ್ದ ಕಾರು ಚಾಲಕನನ್ನ ಪತ್ತೆ ಮಾಡಿದ್ದಾರೆ. ಇನ್ನು ಕಾರು ಚಾಲಕನ ಹೆಸರು ಹರಿ ಬಿನ್ ದೇವರಾಜು. ಖುಷಿಗಾಗಿ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸದ್ಯ ಪೊಲೀಸರು ಆರೋಪಿ ಬಳಿ ಇದ್ದ ಐಶಾರಾಮಿ (porsche 911GT3) ಕಾರನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ಹಿಂದೆ ನಗರದಲ್ಲಿ ಶ್ರೀಮಂತರ ಮಕ್ಕಳು ನಿರ್ಲಕ್ಷ್ಯವಾಗಿ ಕಾರು ಸವಾರಿ ಮಾಡಿ ಅಮಾಯಕ ಜನರ ಜೀವಕ್ಕೆ ಹಾನಿ‌ಮಾಡಿದ್ದ ಸಂಗತಿಗಳು ನಡೆದ ಹಿನ್ನೆಲೆ ಪೊಲೀಸರು ಇಂತಹ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.