ETV Bharat / city

ರೂಪಾಂತರಿ AY4.2 ವೈರಸ್​​ ಭೀತಿ: ಮತ್ತೆ ಕಠಿಣ ಕ್ರಮ ಜಾರಿಗೆ ನಿರ್ಧರಿಸಿದ ಬಿಬಿಎಂಪಿ

AY4.2 ರೂಪಾಂತರಿ ವೈರಸ್ ತಡೆಯುವ ಉದ್ದೇಶದಿಂದ ಬಿಬಿಎಂಪಿ, ಆರೋಗ್ಯ ಇಲಾಖೆ ಮತ್ತು ತಜ್ಞರ ಅಭಿಪ್ರಾಯ ಪಡೆದು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ.

coronavirus
coronavirus
author img

By

Published : Oct 27, 2021, 2:16 PM IST

ಬೆಂಗಳೂರು: ನಗರದಲ್ಲಿ ಸದ್ಯಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು ಜನರು ಕೊ‌ಂಚ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಇದೀಗ ಹೊಸ ರೂಪಾಂತರಿ ವೈರಸ್​​ AY4.2 ನಿಂದಾಗಿ ಮತ್ತೆ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಈಗಿನಿಂದಲೇ AY4.2 ರೂಪಾಂತರಿ ವೈರಸ್ ತಡೆಯುವ ಉದ್ದೇಶದಿಂದ ಬಿಬಿಎಂಪಿ, ಆರೋಗ್ಯ ಇಲಾಖೆ ಮತ್ತು ತಜ್ಞರ ಅಭಿಪ್ರಾಯ ಪಡೆದು ಕಠಿಣ ಕ್ರಮಗಳನ್ನ ಜಾರಿಗೊಳಿಸಲು ನಿರ್ಧರಿಸಿದೆ. ಜಿನೋಮ್​ ಸೀಕ್ವೆನ್ಸಿಂಗ್​​ ಟೆಸ್ಟ್‌ನಲ್ಲಿ ನಗರದಲ್ಲಿ ಒಟ್ಟು 3 ರೂಪಾಂತರಿ ಪ್ರಕರಣಗಳು​ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 7 ಕೇಸ್ ದೃಢಪಟ್ಟಿದೆ. ಹೀಗಾಗಿ ಆರಂಭದಲ್ಲೇ ರೂಪಾಂತರಿ ವೈರಸ್‌ನ ತಡೆಗೆ ಬಿಬಿಎಂಪಿ ಪ್ಲಾನ್ ಮಾಡಿದೆ.

ಹೊಸ ರೂಪಾಂತರಿ ತಡೆಗೆ ಬಿಬಿಎಂಪಿ ಕೈಗೊಂಡ ಕ್ರಮಗಳು:

  • ಹೆಚ್ಚು ಮಾದರಿಗಳನ್ನು ಪಡೆದು ಜಿನೋಮ್​​ ಸೀಕ್ವೆಂನ್ಸಿಂಗ್​​​ ಟೆಸ್ಟ್​ಗೆ ಒಳಪಡಿಸುವುದು.
  • ನಿತ್ಯದ ಕೇಸ್​ಗಳು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ, ಸಂಪರ್ಕಿತರ ಸಂಖ್ಯೆ ಮೇಲೆ ಹದ್ದಿನ ಕಣ್ಣಿಡುವುದು.
  • AY4.2 ಸಬ್​ ವೇರಿಯಂಟ್​​ ಬಗ್ಗೆ ಹೆಚ್ಚಿನ ಅಧ್ಯಯನಕ್ಕೊಳಪಡಿಸೋದು.
  • ಹೊಸ ರೂಪಾಂತರಿ ವೈರಸ್​ ಕಾಣಿಸಿಕೊಂಡಿರುವ ಸೋಂಕಿತರ ಸಂಪರ್ಕಿತರನ್ನು ಐಸೋಲೇಶನ್​​ ಮಾಡುವುದು.
  • ರೂಪಾಂತರಿ ವೈರಸ್​ಗಳ ಅಧ್ಯಯನಕ್ಕೆ ಹೆಚ್ಚು ಒತ್ತು.
  • ಕೇಂದ್ರ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
  • ಮಾಸ್ಕ್​​​, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು.
  • ಜನ ಗುಂಪು ಸೇರದಂತೆ ನೋಡಿಕೊಳ್ಳಲು ಮಾರ್ಷಲ್​ಗೆ ಸೂಚನೆ.
  • ಪ್ರತಿಯೊಬ್ಬ ಅರ್ಹರಿಗೂ ಶೀಘ್ರದಲ್ಲೇ ವ್ಯಾಕ್ಸಿನೇಶನ್​​ ಹಾಕುವುದು.
  • ರೂಪಾಂತರಿ ವೈರಸ್​ ಪತ್ತೆಯಾಗಿರುವ ಲ್ಯಾಬ್​​ ತಜ್ಞರೊಂದಿಗೆ ನಿರಂತರ ಚರ್ಚೆ.
  • ಸರ್ಕಾರ ಸೂಚಿಸಿದ್ರೆ ಅಂತಾರಾಜ್ಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್​ಗೆ ತಯಾರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.