ಬೆಂಗಳೂರು: ಕೋವಿಡ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ನಗರದ ಕೋವಿಡ್ ಹಾಟ್ ಸ್ಪಾಟ್ಗಳ ಒಟ್ಟು 19 ವಾರ್ಡ್‌ಗಳನ್ನು ನಿಯಂತ್ರಿತ ವಲಯಗಳೆಂದು ವಿಭಾಗ ಮಾಡಲಾಗಿದೆ. ಆರು ವಲಯಗಳಿಗೆ ಕಮಾಂಡರ್ಗಳ ನೇಮಕ ಮಾಡಲಾಗಿದ್ದು, ಪಟ್ಟಿ ಹೀಗಿದೆ.
- ಪೂರ್ವ ವಲಯ - ಕಂಟೈನ್ ಮೆಂಟ್ ಉಸ್ತುವಾರಿ - ಕಮಾಂಡರ್ ಡಾ. ಮಹೇಶ್ - ಜನರಲ್ ಮ್ಯಾನೇಜರ್ - ಬೆಸ್ಕಾಂ
- ಪಶ್ಚಿಮ ವಲಯ - ಅಭಿಜಿನ್ ಬಿ - ಎಂಡೋಮೆಂಟ್ ಇಲಾಖೆ
- ದಕ್ಷಿಣ ವಲಯ - ವೀರಭದ್ರ ಅಂಚಿನಲ್- ಕುಮಾರ ಕೃಪ ಗೆಸ್ಟ್ ಹೌಸ್ - ವಿಶೇಷ ಅಧಿಕಾರಿ
- ಮಹದೇವಪುರ - ಎಸ್ ನಾಗರಾಜ್ - ಕೆಎಸ್ ಟಿಡಿಸಿ - ಜನರಲ್ ಮ್ಯಾನೇಜರ್
- ಆರ್ ಆರ್ ನಗರ - ಸಂಗಪ್ಪ - ಎಸ್ ಟಿ ವೆಲ್ಫೇರ್ ಡಿಪಾರ್ಟ್ಮೆಂಟ್- ನಿರ್ದೇಶಕ
- ಬೊಮ್ಮನಹಳ್ಳಿ - ಬಾಳಪ್ಪ ಹಂಡಿಗುಡ್ - ಭೂಸ್ವಾಧೀನಾಧಿಕಾರಿ - ಬಿಎಂಆರ್ ಸಿಎಲ್
- 19 ವಾರ್ಡ್ ಸಂಪೂರ್ಣ ಕೆಂಟೈನ್ಮೆಂಟ್ ಝೋನ್
ದಕ್ಷಿಣ ವಲಯದ -ಜೆ.ಪಿ.ನಗರ, ಗುರಪ್ಪನಪಾಳ್ಯ, ಶಾಕಾಂಬರಿನಗರ, ಹೊಸಹಳ್ಳಿ, ಬಾಪೂಜಿನಗರ, ಕರಿಸಂದ್ರ, ಸುಧಾಮನಗರ, ಪೂರ್ವ ವಲಯ- ರಾಮಸ್ವಾಮಿ ಪಾಳ್ಯ, ಪುಲಕೇಶಿನಗರ, ಮಾರುತಿಸೇವಾನಗರ, ರಾಧಾಕೃಷ್ಣದೇವಸ್ಥಾನವಾರ್ಡ್, ಪಶ್ವಿಮ ವಲಯ -ಶಿವನಗರ, ಕೆ.ಆರ್.ಮಾರುಕಟ್ಟೆ, ಪಾದರಾಯನಪುರ, ಆರ್.ಆರ್.ನಗರ ವಲಯದ -ಆರ್.ಆರ್.ನಗರ ವಾರ್ಡ್.
ಮಹದೇವಪುರವಲಯ- ಹೂಡಿ, ಹೊರಮಾವು ವಾರ್ಡ್, ಬೊಮ್ಮನಹಳ್ಳಿಯ ಬೇಗೂರು ವಾರ್ಡ್‌ಗಳನ್ನು ಕಂಟೈನ್ಮೆಂಟ್ ವಾರ್ಡ್ ಎಂದು ಘೋಷಣೆ ಮಾಡಲಾಗಿದೆ.
![appointment-of-commander-for-regulated-zones-in-bangalore](https://etvbharatimages.akamaized.net/etvbharat/prod-images/6864818_bng2.jpg)
![appointment-of-commander-for-regulated-zones-in-bangalore](https://etvbharatimages.akamaized.net/etvbharat/prod-images/6864818_bng.jpg)
- ಕಂಟೈನ್ಮೆಂಟ್ ಮೂರು ಮಾದರಿಯಲ್ಲಿ ವಿಭಾಗಿಸಲಾಗಿದೆ.
ಅಪಾರ್ಟ್‌ಮೆಂಟ್ ಕಂಟೈನ್ಮೆಂಟ್
ಪ್ರದೇಶ ಕಂಟೈನ್ಮೆಂಟ್
ಕ್ಲಸ್ಟರ್ ಕಂಟೈನ್ಮೆಂಟ್
- ಅಪಾರ್ಟ್‌ಮೆಂಟ್ ಕಂಟೈನ್ಮೆಂಟ್
ಕೊರೋನಾ ಸೋಂಕಿ ವ್ಯಕ್ತಿ ಹಾಗೂ ಸಂಪರ್ಕಿತರು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರೆ, ಆ ಅಪಾರ್ಟ್‌ಮೆಂಟ್ ಅನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಮಾಡಲಾಗುವುದು. ಆ ಅಪಾರ್ಟ್‌ಮೆಂಟ್ ನಲ್ಲಿರುವ ಯಾರೊಬ್ಬರನ್ನೂ ಹೊರಗೆ ಬಿಡುವುದಿಲ್ಲ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅಗತ್ಯ ವಸ್ತು ಪೂರೈಕೆಗೆ ಸಮೀಪದ ಮೆಡಿಕಲ್ ಶಾಪ್, ಹಣ್ಣು, ತರಕಾರಿ, ದಿನಸಿ ಅಂಡಿಗಳ ಫೋನ್ ನಂಬರ್‌ಗಳನ್ನು ನೀಡಲಾಗುತ್ತದೆ. ಅಗತ್ಯ ವಸ್ತುಗಳನ್ನು ಫೋನ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ.
- ಪ್ರದೇಶ ಕಂಟೈನ್ಮೆಂಟ್
ಸಾಮಾನ್ಯ ಪ್ರದೇಶದ ಮನೆಯಲ್ಲಿ ವಾಸಿಸುವ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಆ ಮನೆಯ ೧೦೦ ಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆ, ಕಟ್ಟಡಗಳನ್ನು ಕಂಟೈನ್ಮೆಂಟ್ ಮಾಡಲಾಗುತ್ತದೆ. ಯಾರೊಬ್ಬರಿಗೂ ಆ ಪ್ರದೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ. ಅಲ್ಲಿನ ನಿವಾಸಿಗಳನ್ನು ಹೊರಗೆ ಹೋಗುವುದಕ್ಕೆ ಬಿಡುವುದಿಲ್ಲ. ಬಡವರಿಗೆ, ಕೂಲಿಕಾರರಿಗೆ, ವಲಸಿಗರಿಗೆ ಬಿಬಿಎಂಪಿಯಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತದೆ. ಉಳಿದವರಿಗೆ ಸಮೀಪದ ದಿನಸಿ, ತರಕಾರಿ, ಹಣ್ಣು, ಔಷಧಿ ಅಂಗಡಿಗಳ ಫೋನ್ ನಂಬರ್ ನೀಡಲಾಗುತ್ತದೆ. ಅಗತ್ಯ ವಸ್ತುಗಳನ್ನು ಫೋನ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ.
- ಕ್ಲಸ್ಟರ್ ಕಂಟೈನ್ಮೆಂಟ್
ಒಂದೇ ಸ್ಥಳದಲ್ಲಿ ಅಧಿಕ ಸಂಖ್ಯೆಯ ಕೊರೋನಾ ಸೋಂಕಿತರು ಪತ್ತೆಯಾದರೆ ಆ ಪ್ರದೇಶವನ್ನು ಕ್ಲಸ್ಟರ್ ಕಂಟೈನ್ಮೆಂಟ್ ಎಂದು ಪರಿಗಣಿಸಲಾಗುತ್ತದೆ. ಆ ಪ್ರದೇಶ 100 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸೀಲ್ ಮಾಡಲಾಗುತ್ತದೆ. ಆ ಪ್ರದೇಶ ಪ್ರವೇಶಿಸಲು ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ. ಅಲ್ಲಿನ ನಿವಾಸಿಗಳನ್ನು ಹೊರಗೆ ಹೋಗುವುದಕ್ಕೆ ಬಿಡುವುದಿಲ್ಲ. ಬಡವರಿಗೆ, ಕೂಲಿಕಾರರಿಗೆ, ವಲಸಿಗರಿಗೆ ಬಿಬಿಎಂಪಿಯಿಂದ ದಿನಸಿ ಕಿಟ್ ವಿತರಣೆ ಮಾಡಲಾಗುತ್ತದೆ. ಉಳಿದವರಿಗೆ ಸಮೀಪದ ದಿನಸಿ, ತರಕಾರಿ, ಹಣ್ಣು, ಔಷಧಿ ಅಂಗಡಿಗಳ ಫೋನ್ ನಂಬರ್ ನೀಡಲಾಗುತ್ತದೆ. ಅಗತ್ಯ ವಸ್ತುಗಳನ್ನು ಫೋನ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ.
- ಎ,ಬಿ,ಸಿ ಪಟ್ಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ 35 ವಾರ್ಡ್ ಗಳನ್ನು ಎ, ಬಿ ಹಾಗೂ ಸಿ ಎಂದು ವಿಭಜಿಸಲಾಗಿದೆ. 28 ದಿನಗಳಿಂದ ಕೊರೋನಾ ಸೋಂಕು ಕಾಣಿಸಿಕೊಳ್ಳದ ವಾರ್ಡ್‌ಗಳನ್ನು "ಸಿ" ಪಟ್ಟಿಗೆ, ಇನ್ನೇನು ಕೊರೊನಾ ಸೋಂಕು ಕಾಣಿಸಿಕೊಂಡು 28 ದಿನ ಮುಕ್ತಾಯಗೊಳ್ಳುವುದಕ್ಕೆ ಕೆಲವೇ ದಿನ ಬಾಕಿ ಇರುವ ವಾರ್ಡ್‌ಗಳನ್ನು "ಬಿ’ ಪಟ್ಟಿಗೆ ಹಾಗೂ ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ವಾರ್ಡ್‌ಗಳನ್ನು "ಎ’ ಪಟ್ಟಿಗೆ ಸೇರಿಸಲಾಗಿದೆ. ಮಾಹಿತಿ ಪ್ರಕಾರ 19 ವಾರ್ಡ್‌ಗಳು ಎ ಪಟ್ಟಿವೆಯಲ್ಲಿವೆ. 9 ವಾರ್ಡ್‌ಗಳು ಬಿ ಪಟ್ಟಿಯಲ್ಲಿವೆ. ಇನ್ನೂ 7 ವಾರ್ಡ್‌ಗಳು ಸಿ ಪಟ್ಟಿವೆಯಲ್ಲಿವೆ.
ಕಂಟೈನ್ಮೆಂಟ್ ಜವಾಬ್ದಾರಿಯ ನಿರ್ವಹಣೆ ಬಿಬಿಎಂಪಿ ಎಂಟು ವಲಯಗಳಿಗೆ ಸರ್ಕಾರದ ವಿವಿಧ ಇಲಾಖೆ 24 ಮಂದಿ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳೊಂದಿಗೆ ಸ್ಥಳೀಯ ವಾರ್ಡ್ ಇಂಜಿನಿಯರ್, ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.