ETV Bharat / city

ಅಮೂಲ್ಯ ದೇಶದ್ರೋಹ ಪ್ರಕರಣ: ಜೆಡಿಎಸ್​ ಸದಸ್ಯ ಇಮ್ರಾನ್ ವಿಚಾರಣೆ

author img

By

Published : Feb 23, 2020, 10:42 AM IST

ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ವಿರೋಧಿಸಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಮೂಲ್ಯಾ ಲಿಯೋನ್ ದೇಶದ್ರೋಹ ಕೂಗು ಕೂಗಿದ ಕಾರಣ ಬೆಂಗಳೂರಿನ ಪಾದರಾಯನಪುರ ವಾರ್ಡ್​​ನ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಅವರನ್ನು ವಿಶೇಷ ತನಿಖಾ

-case-jds-member-imran-trial
ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ

ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ್ ದೇಶದ್ರೋಹ ಕೂಗು ಕೂಗಿದ ಕಾರಣ ಬೆಂಗಳೂರಿನ ಪಾದರಾಯನಪುರ ವಾರ್ಡ್​​ನ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ಅವರನ್ನು ವಿಶೇಷ ತನಿಖಾ ತಂಡ ಮತ್ತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ನಿನ್ನೆ ಸುಮಾರು 8 ಗಂಟೆಗಳ ಕಾಲ ಉಪ್ಪಾರಪೇಟೆ ಠಾಣೆಯಲ್ಲಿ ಎಸಿಪಿ ಮಹಾಂತರೆಡ್ಡಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿತ್ತು‌. ಆದರೆ ಇನ್ನು ಹೆಚ್ಚಿನ ವಿಚಾರಣೆ ಅಗತ್ಯತೆ ಇರುವ ಕಾರಣ. ಇಂದೂ ಕೂಡ ವಿಚಾರಣೆಗೆ ಹಾಜರಾಗುವಂತೆ ತನಿಖಾ ತ‌ಂಡ ತಿಳಿಸಿದೆ. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಫೌಂಡೇಷನ್ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಕಾರ್ಪೋರೇಟರ್ ಪೊಲೀಸರ ಬಳಿ ಅನುಮತಿ ಪಡೆದಿದ್ದರು.

ಆದರೆ ಪ್ರತಿಭಟನೆಯ ಮೊದಲೇ ಅಮುಲ್ಯ ಲಿಯೋನ್ ದೇಶದ್ರೋಹ ಘೋಷಣೆ ಕೂಗಿದ ಕಾರಣ ಈ ಪ್ರಕರಣದಲ್ಲಿ ಕಾರ್ಪೋರೆಟರ್ ಪಾತ್ರವೆನು ಅನ್ನೋದ್ರ ತನಿಖೆ ನಡೆಸಲಿದ್ದಾರೆ. ಮತ್ತೊಂದೆಡೆ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ನಂತ್ರ ಇಮ್ರಾನ್ ಪಾಷಾ ಮಾತಾಡಿ ಆಕೆಯನ್ನು ಕಾರ್ಯಕ್ರಮಕ್ಕೆ ನಾವು ಕರೆದಿಲ್ಲ. ಆಕೆಯೇ ಬಂದು ಮಾತಾಡಿದ್ದು ಎಂದಿದ್ದರು. ಹೀಗಾಗಿ ಎಲ್ಲಾ ದಿಕ್ಕಿನಲ್ಲಿ ಪೊಲಿಸರು ಮಾಹಿತಿ ಕಲೆ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.