ETV Bharat / city

ಸಮ್ಮರ್ ಸಂಭ್ರಮಿಸಲು ರಸ್ತೆಗಿಳಿಯಲಿರುವ ಸಾರಿಗೆ ನಿಗಮದ ಎಲ್ಲಾ ಪ್ರತಿಷ್ಠಿತ ಬಸ್‌ಗಳು

author img

By

Published : Apr 15, 2022, 3:29 PM IST

ಏಪ್ರಿಲ್ 14 ರಿಂದ 17ರವರೆಗೆ ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರಯುಗಾದಿ, ಗುಡ್ ಫ್ರೈಡೇ, ಹೋಲಿ ಸ್ಯಾಟರ್‍ಡೇ ಮುಂತಾದ ಸಾಲು ಸಾಲು ಸಾರ್ವತ್ರಿಕ ರಜೆ ಮತ್ತು ವಾರಾಂತ್ಯದ ರಜೆಗಳು ಇವೆ. ಈ ಹಿನ್ನೆಲೆಯಲ್ಲಿ ರಾಜ್ಯದೊಳಗೆ ಮತ್ತು ಅಂತಾರಾಜ್ಯ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 200 ಬಸ್‌ಗಳು ಕಾರ್ಯಾಚರಿಸಲಿವೆ..

Transport started to celebrate the summer
ಬೇಸಿಗೆ ಕಾರ್ಯಾಚರಣೆಗಿಳಿದ ಸಾರಿಗೆ ಬಸ್​

ಬೆಂಗಳೂರು : ಬೇಸಿಗೆ ಕಾರ್ಯಾಚರಣೆಯೆಂದರೆ ಸಾರಿಗೆ ವಿಭಾಗಕ್ಕೆ ಸುಗ್ಗಿಯ ಕಾಲದಷ್ಟೇ ಸಂಭ್ರಮ. ಆದರೆ, ಕೋವಿಡ್‍ನಿಂದಾಗಿ ಕಳೆದ ಮೂರು ವರ್ಷಗಳಿಂದ ಬೇಸಿಗೆ ಕಾರ್ಯಾಚರಣೆಯನ್ನು ಸಂಭ್ರಮಿಸಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ವಾತಾವರಣ ತಿಳಿಯಾಗಿದ್ದು, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಹಾಗೂ ಸಮಾರಂಭಗಲೂ ಗರಿಗೆದರಿವೆ.

ಸಾರ್ವಜನಿಕ ಪ್ರಯಾಣಿಕರು ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಶುರು ಮಾಡಿದ್ದಾರೆ. ಏಪ್ರಿಲ್ 14 ರಿಂದ 17ರವರೆಗೆ ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರಯುಗಾದಿ, ಗುಡ್ ಫ್ರೈಡೇ, ಹೋಲಿ ಸ್ಯಾಟರ್‍ಡೇ ಮುಂತಾದ ಸಾಲು ಸಾಲು ಸಾರ್ವತ್ರಿಕ ರಜೆ ಮತ್ತು ವಾರಾಂತ್ಯದ ರಜೆಗಳು ಇವೆ. ಈ ಹಿನ್ನೆಲೆಯಲ್ಲಿ ರಾಜ್ಯದೊಳಗೆ ಮತ್ತು ಅಂತಾರಾಜ್ಯ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 200 ಬಸ್‌ಗಳು ಕಾರ್ಯಾಚರಿಸಲಿವೆ. ಈ ಕುರಿತು ಕೆಎಸ್ಆರ್​ಟಿಸಿ ಪ್ರಕಟಣೆ ಹೊರಡಿಸಿದೆ.

ಎಲ್ಲೆಲ್ಲಿಗೆ? :

  • ಕೇರಳ ರಾಜ್ಯದ ಎರ್ನಾಕುಲಂ, ಕಣ್ಣೂರು, ಕೊಟ್ಟಾಯಂ, ತ್ರಿಶೂರು, ಪಾಲಕ್ಕಾಡ್, ತ್ರಿವೇಂಡ್ರಮ್, ಕ್ಯಾಲಿಕಟ್, ಕಾಸರಗೋಡು ಮತ್ತು ಇತರೆ ಸ್ಥಳಗಳು
  • ತಮಿಳುನಾಡು ರಾಜ್ಯದ ಕೊಯಬತ್ತೂರು, ಕೊಡೈಕೆನಾಲ್, ತಂಜಾವುರು, ಮಧುರೈ, ಊಟಿ, ಸೇಲಂ, ತಿರುಚಿ, ವಿಳ್ಳುಪುರಂ
  • ಆಂದ್ರಪದೇಶ ಹಾಗೂ ತೆಲಂಗಾಣ ರಾಜ್ಯಗಳ ಮಂತ್ರಾಲಯ, ವಿಜಯವಾಡ, ಹೈದರಾಬಾದ್, ನೆಲ್ಲೂರು ಗೋವಾದ ಪಣಜಿ
  • ಮಹಾರಾಷ್ಟ್ರದ ಶಿರಡಿ ಮತ್ತು ಪಾಂಡಿಚೇರಿ ಸ್ಥಳಗಳಿಗೆ ವಿಶೇಷ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಹೆಚ್ಚುವರಿ ಕಾರ್ಯಾಚರಣೆಯನ್ನು ಪ್ರಯಾಣಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ರಾಜಹಂಸ, ನಾನ್‍ಎಸಿ ಸ್ಲೀಪರ್ ವಾಹನಗಳನ್ನು ಶಾಂತಿನಗರ ಬಸ್ ನಿಲ್ದಾಣದಿಂದ ಆಚರಣೆಗೊಳಿಸಲಾಗುತ್ತಿದೆ. ಅಂತೆಯೇ, ವೋಲ್ವೋ, ವೋಲ್ವೋ ಮಲ್ಟಿ ಆಕ್ಸಲ್, ಸ್ಕ್ಯಾನಿಯಾ, ಎಸಿ ಸ್ಲೀಪರ್ ವಾಹನಗಳನ್ನು (ಐರಾವತ/ಐರಾವತ ಕ್ಲಬ್ ಕ್ಲಾಸ್/ಅಂಬಾರಿ ಡ್ರೀಮ್ ಕ್ಲಾಸ್) ಘಟಕ-4ರ ಬಿಟಿಎಸ್ ಸರ್ವೀಸ್ ರಸ್ತೆ ಶಾಂತಿನಗರದಿಂದ ಪ್ರಾರಂಭಗೊಳಿಸಲಾಗುತ್ತಿದೆ.

ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದು, ಹೆಚ್ಚುವರಿ ಕಾರ್ಯಾಚರಣೆಯನ್ನು ವಿಭಾಗದಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಈ ಸಂಭ್ರಮಾಚಾರಣೆಯನ್ನು ಪ್ರಯಾಣಿಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ನಿಗಮವೂ ತನ್ನ ಪ್ರಯಾಣಿಕರಿಗೆ ಧನ್ಯವಾದಗಳನ್ನು ತಿಳಿಸಲು ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಹಿರಿಯ ನಾಗರಿಕರಿಗೆ ಗುಲಾಬಿ ಹೂವು & ಲೇಖನಿಯನ್ನು, ಪುಟಾಣಿ ಮಕ್ಕಳಿಗೆ ಸಿಹಿ ಚಾಕೊಲೇಟ್‌ಗಳನ್ನು ವಿತರಿಸುವ ಮೂಲಕ ವಿಭಾಗದ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತಿದೆ.

ಹೆಲ್ಪ್‌ಡೆಸ್ಕ್ ಮೂಲಕ ಸಾರ್ವಜನಿಕ ಪ್ರಯಾಣಿಕರಿಗೆ ವಿಶೇಷ ಕಾರ್ಯಾಚರಣೆಯ ಕುರಿತ ಸೂಕ್ತ ಮಾಹಿತಿ ಒದಗಿಸುವ ವ್ಯವಸ್ಥೆ ಇರಲಿದೆ. ಧ್ವನಿವರ್ಧಕಗಳ ಮೂಲಕ ಆಯಾಯ ಸ್ಥಳಗಳಿಗೆ ತೆರಳುವ ವಾಹನಗಳ ಮಾಹಿತಿ ಒದಗಿಸಲಾಗುತ್ತೆ.

ಇದನ್ನೂ ಓದಿ: ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ: ಏ.15ರಿಂದ ಪ್ರಕ್ರಿಯೆ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.