ETV Bharat / city

ಸರ್ವಪಕ್ಷ ಸಭೆ ಮುಕ್ತಾಯ.. ಎಸ್​​​​​ಟಿಗೆ ಶೇ 7, ಎಸ್​​ಸಿಗೆ ಶೇ 17ರಷ್ಟು ಮೀಸಲು: ನಾಳೆನೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ - ಎಸ್​ಸಿ 15 ರಿಂದ 17 ಕ್ಕೆ ಹೆಚ್ಚಳ

ನ್ಯಾ. ನಾಗಮೋಹನ್ ದಾಸ್ ವರದಿ ಬಗ್ಗೆ ಚರ್ಚೆ ಮಾಡಿದ್ದೇವೆ. ಎಸ್​​ಸಿ 15 ರಿಂದ 17ಕ್ಕೆ ಹೆಚ್ಚಳ, ಎಸ್​ಟಿ 3 ರಿಂದ 7ಕ್ಕೆ ಹೆಚ್ಚಳ ಮಾಡಲು ತೀರ್ಮಾನ ಆಗಿದೆ. ನಾಳೆನೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

basavaraj bommai
ಸರ್ವಪಕ್ಷ ಸಭೆ ಮುಕ್ತಾಯ.. ಎಸ್​​​​​ಟಿಗೆ ಶೇ 7ರಷ್ಟು ಮೀಸಲು
author img

By

Published : Oct 7, 2022, 2:23 PM IST

Updated : Oct 7, 2022, 3:21 PM IST

ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಮುಖವಾಗಿ ಎಸ್​​​​​ಟಿ ಸಮುದಾಯಕ್ಕೆ ಈಗಿರುವ ಶೇ. 3 ರಷ್ಟಿರುವ ಮೀಸಲಾತಿಯನ್ನು ಶೇ. 7ಕ್ಕೆ ಏರಿಕೆ ಮಾಡಲು ಸರ್ವಪಕ್ಷ ಸಭೆಯಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಸರ್ವ ಪಕ್ಷ ಸಭೆ ಬಳಿಕ ಸಿಎಂ ಈ ವಿಷಯ ತಿಳಿಸಿದ್ದಾರೆ.

ಇನ್ನುಳಿದಂತೆ ಸಭೆ ಪ್ರಮುಖ ನಿರ್ಧಾರಗಳು ಇಂತಿವೆ: ನ್ಯಾ. ನಾಗಮೋಹನ್ ದಾಸ್ ವರದಿ ಬಗ್ಗೆ ಚರ್ಚೆ ಮಾಡಿದ್ದೇವೆ. ಎಸ್​ಸಿ 15 ರಿಂದ 17ಕ್ಕೆ ಹೆಚ್ಚಳ, ಎಸ್​ಟಿ 3 ರಿಂದ 7ಕ್ಕೆ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ವರದಿಗೆ ಅವಧಿಯ ವಿಸ್ತರಣೆಯನ್ನು ನಾವೇ ಮಾಡಿದ್ದೇವೆ.

ವರದಿ ಬಳಿಕ ಸುಪ್ರೀಂಕೋರ್ಟ್ ಕೆಲ ತೀರ್ಪು ಬಂತು, ಇಂದಿರಾ ಸಹಾನಿ ಕೇಸ್ ಅನ್ವಯ ಯಾವ ರೀತಿ ಮಾಡಬೇಕೆಂದು 7 ಶಿಫಾರಸನ್ನು ನಾಗಮೋಹನ್ ದಾಸ್ ವರದಿ ನೀಡಿದೆ. ಈ ವಿಚಾರವಾಗಿ ಸಂವಿಧಾನ ಮತ್ತು ಕಾನೂನಾತ್ಮಕ ವಿಚಾರ ಇರುವುದರಿಂದ ಕೆಲ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಸಭೆ ಬಳಿಕ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಾಳೆನೇ ಸಚಿವ ಸಂಪುಟ ಸಭೆ ಕರೆದು ಅಂತಿಮ ಕಾರ್ಯಾದೇಶ ಮಾಡುತ್ತೇವೆ. ಈಗಿರುವ ಯಾವುದೇ ಸಮುದಾಯದ ಮೀಸಲಾತಿಯನ್ನು ಕಡಿಮೆ ಮಾಡುವುದಿಲ್ಲ. ನಾಗಮೋಹನ್ ದಾಸ್ ವರದಿ ಯಂತೆ ಶೇ 50ಕ್ಕಿಂತ ಮೇಲೆ ಇರುವುದು ಆ ರೀತಿ ಮಾಡುತ್ತೇವೆ. ಇನ್ನು ಹಲವು ಸಮುದಾಯದ ಬೇಡಿಕೆ ಇದೆ ಎಲ್ಲದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದರು.

ಸಮುದಾಯದ ಒಳಗೆ ಇರುವವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ ಎಂಬ ಕೂಗು ಇದೆ. ಅದಕ್ಕೂ ಕೂಡ ಎಲ್ಲರ ಜೊತೆ ಚರ್ಚೆ ಮಾಡಿ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡದೆ ಅಂತಿಮ ತೀರ್ಮಾನ ಮಾಡ್ತೇವೆ. ಎಸ್ಟಿ ಎಸ್ಸಿ ಒಳಸಮುದಾಯದ ಮೀಸಲಾತಿಯ ಬಗ್ಗೆಯೂ ನ್ಯಾಯ ಸಮ್ಮತವಾಗಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನು ಓದಿ:ಎಸ್​ಸಿ ಎಸ್​​ಟಿ ಮೀಸಲಾತಿ ಹೆಚ್ಚಿಸಲು ಸರ್ಕಾರ ಒಪ್ಪಿಗೆ: ಸರ್ವಪಕ್ಷ ಸಭೆಯಲ್ಲಿ ನಿರ್ಧಾರ

Last Updated : Oct 7, 2022, 3:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.