ಬೆಂಗಳೂರು: ಅಮೆಜಾನ್ ಕಂಪನಿ ಹೆಸರಲ್ಲಿ ವಂಚಿಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ವಿ ಬಂಧಿತ ಆರೋಪಿ. ಈತ ವ್ಯಕ್ತಿಯೊಬ್ಬರ ಬಳಿ ನಿಮ್ಮ ಅಂಗಡಿಯ ಒಂದು ಭಾಗವನ್ನು ಅಮೆಜಾನ್ ಕಂಪನಿಗೆ ಸಂಬಂಧಿಸಿದ ಗೋಡೌನ್ ಮಾಡುತ್ತೇವೆ, ಬಾಡಿಗೆಗೆ ಕೊಡಿ ಎಂದಿದ್ದ. ಬಳಿಕ ಅದಕ್ಕೆ ಆ್ಯಪ್ ಮೂಲಕ ಕೆವೈಸಿ ಮಾಡಬೇಕು ಎಂದು ಮಾಲೀಕರ ಮೊಬೈಲ್ ಪಡೆದಿದ್ದ. ಬಳಿಕ ಲೋನ್ ಪಡೆಯುವ ಪೋಸ್ಟ್ ಪೇ ಎಂಬ ಆ್ಯಪ್ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿ ವಂಚಿಸಿದ್ದಾನೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಬಂಧಿತ ಆರೋಪಿ ಆ್ಯಪ್ ಮೂಲಕ ನಲವತ್ತು ಸಾವಿರ ಹಾಗೂ ಪೇಟಿಯಮ್ ಮೂಲಕ ಒಂಬತ್ತು ಸಾವಿರ ಸಾಲ ಪಡೆದು ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ. ಸಾಲ ಕಟ್ಟುವಂತೆ ನೋಟಿಸ್ ಬಂದಾಗ ಕೃತ್ಯ ಎಸಗಿರುವುದು ಬಯಲಿಗೆ ಬಂದಿದೆ.
ಆರೋಪಿ ಪ್ರದೀಪ್ ಅಮೆಜಾನ್ ಕಂಪನಿಯಲ್ಲಿ ಸೆಲ್ಲರ್ ಮತ್ತು ಬೋರ್ಡಿಂಗ್ ಎಕ್ಸಿಕ್ಯುಟಿವ್ ಅಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಕಂಪನಿಯ ಹೆಸರಲ್ಲೇ ವಂಚನೆ ಮಾಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿ, ಆತನ ಬಳಿಯಿದ್ದ ಮೂವತ್ತು ಸಾವಿರ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ