ETV Bharat / city

ರಾಜ್ಯ ರಸ್ತೆಗಳ ಪರಿಸ್ಥಿತಿ ಅಧೋಗತಿ - ಕಳಪೆ ಕಾಮಗಾರಿ

ಫೇಸ್​ಬುಕ್‌ನಲ್ಲಿ ಕಪಲ್ ಚಾಲೆಂಜ್ ಹೀಗೆ ವಿವಿಧ ಚಾಲೆಂಜ್‌ಗಳು ಸದ್ದು ಮಾಡುತ್ತಿವೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಮಾತ್ರ ಗುಂಡಿ ಬಿದ್ದ ರಸ್ತೆಗಳ ಫೋಟೋಗಳನ್ನು ಶೇರ್​ ಮಾಡಿ ಚಾಲೆಂಜ್​ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

a report on Road damages
ಬಲಿಗಾಗಿ ಕಾದು ಕುಳಿತಿರುವ ರಸ್ತೆಯಲ್ಲಿರುವ ಗುಂಡಿಗಳು
author img

By

Published : Oct 2, 2020, 7:01 PM IST

Updated : Dec 31, 2020, 8:33 PM IST

ಬೆಂಗಳೂರು: ರಸ್ತೆಗಳ ಅಭಿವೃದ್ಧಿಗೆಂದೇ ರಾಜ್ಯ ಸರ್ಕಾರ ಇಂತಿಷ್ಟು ಕೋಟಿಯೆಂದು ಮೀಸಲಿಟ್ಟಿರುತ್ತದೆ. ಆದರೆ, ರಸ್ತೆ ನಿರ್ಮಾಣ, ಡಾಂಬರೀಕರಣ ಹೆಸರಲ್ಲಿ ಪೋಲು ಮಾಡುತ್ತಿದೆ ಎಂಬ ಆರೋಪಗಳಿವೆ. ಕಾಲಕಾಲಕ್ಕೆ ಅನುದಾನ ಬಿಡುಗಡೆಯಾದರೂ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಡೇಂಜರ್​​ ಸ್ಪಾಟ್​​ಗಳಾಗಿ ಹೊರಹೊಮ್ಮುತ್ತಿವೆ.

ಕಳಪೆ ಕಾಮಗಾರಿ ಕಾರಣ ನಗರ ಪ್ರದೇಶದಲ್ಲಿ ರಸ್ತೆಗಳು ಗುಂಡಿಮಯವಾಗಿ ಪರಿವರ್ತನೆಗೊಂಡಿದ್ದು, ಅಪಘಾತಗಳು ಜರುಗಿ ಅಪಾರ ಸಾವು - ನೋವು ಸಂಭವಿಸುತ್ತಿವೆ. ಇತ್ತ ಗ್ರಾಮೀಣ ಪ್ರದೇಶಗಳ ರಸ್ತೆಗಳ ದುಃಸ್ಥಿತಿ ಊಹೆಗೂ ನಿಲುಕದ್ದು. ಮಳೆ ಬಂದರೆ ಸಾಕು ಇಲ್ಲಿನ ರಸ್ತೆಗಳು ಈಜುಕೊಳಗಳಾಗುತ್ತವೆ. ಒಟ್ಟಿನಲ್ಲಿ ರಸ್ತೆಗಳು ಬಾಯ್ತೆರೆದು ಬಲಿಗಾಗಿ ಕಾದು ಕುಳಿತಿರುತ್ತಿವೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರತಿನಿಧಿಗಳ ಪ್ರಣಾಳಿಕೆ ಪಟ್ಟಿಯಲ್ಲಿ ಮೊದಲನೆಯದ್ದೇ ರಸ್ತೆಗಳ ಅಭಿವೃದ್ಧಿ. ಆದರೆ, ಅಭಿವೃದ್ಧಿ ವಿಷಯಕ್ಕೆ ಬಂದರೆ ಅದೇ ಕೊನೆಯ ಸ್ಥಾನದಲ್ಲಿರುತ್ತವೆ. ಇದು ರಾಜ್ಯದ ಜನರು ಕೊಟ್ಟ ಫಲಿತಾಂಶ. ಅಧಿಕಾರಕ್ಕೆ ಬಂದಾಗ ಇರುವ ಹದಗೆಟ್ಟ ರಸ್ತೆಗಳು ಅಧಿಕಾರದಿಂದ ಕೆಳಗಿಳಿಯುವವರೆಗೂ ಹಾಗೆಯೇ ಇರುತ್ತವೆ. ಚೂರು ಬದಲಾಗಿರಲ್ಲ. ಮಹಾನಗರಗಳಲ್ಲಿ ಹದಗೆಟ್ಟು ಹೋದ ಭೀಕರ ರಸ್ತೆಗಳಿಂದ ಅಪಘಾತ ಪ್ರಕರಣಗಳ ಇನ್ನೂ ಸಂಖ್ಯೆ ಹೆಚ್ಚುತ್ತಲೇ ಇದೆ.

ರಸ್ತೆಗಳು ಕಿತ್ತು ಹೋಗಿ ಸಂಚಾರಕ್ಕೆ ಕಿರಿಕಿರಿ ಉಂಟಾದರೆ ಈ ನಗರಗಳ ಸಹವಾಸವೇ ಬೇಡ ಎಂದು ನಗರವಾಸಿಗಳು ಬೇಸರ ವ್ಯಕ್ತಪಡಿಸಿದರೆ, ಇತ್ತ ಹಳ್ಳಿ ಅಯ್ಯೋ ದಿನಾ ಇದ್ದಿದ್ದೇ ಅಂತಾ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಬೈಯುತ್ತಾರೆ. ಗುಂಡಿ ಬಿದ್ದ ಜಾಗಗಳಿಗೆ ತೇಪೆ ಹಾಕುವ ಕಾರ್ಯಕ್ಕೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಇನ್ನು ಹಳ್ಳಿಗಳ ರಸ್ತೆಗಳಲ್ಲಿ ತೇಪೆ ಎಂಬ ಮಾತೇ ಇಲ್ಲ. ಗುಂಡಿಗಳು ರಸ್ತೆಯಲ್ಲಿ ಇವೆಯೋ ಅಥವಾ ರಸ್ತೆಗಳೇ ಗುಂಡಿಯಲ್ಲಿ ಇವೆಯೋ ಎಂಬತಾಗಿರುತ್ತವೆ. ಅಂತಹ ತಳಕು-ಬಳಕು ರಸ್ತೆ​ಗಳಲ್ಲಿ ಒಂದು ಕಿಲೋ ಮೀಟರ್​​ ಪ್ರಯಾಣಕ್ಕೆ ಸುಮಾರು ಗಂಟೆಗಳ ಕಾಲ ಬೇಕಾಗುತ್ತದೆ.

ಕಳಪೆ ಕಾಮಗಾರಿ ನಡೆಸುವ ಕಾರಣ ಧಾರಾಕಾರ ಮಳೆ ಸುರಿದರೆ ರಸ್ತೆಗಳು ಕಿತ್ತು ಹೋಗುತ್ತಿವೆ. ಹೆಚ್ಚು ಭಾರ ಹೊತ್ತೊಯ್ಯುವ ವಾಹನಗಳಿಂದ, ವಿವಿಧ ಕಾಮಗಾರಿಗಳಿಗಾಗಿ ರಸ್ತೆಗಳ ಅಗೆತ, ನಗರ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಗುಡ್ಡಗಳ ಕುಸಿತದಿಂದ, ಪ್ರವಾಹ ಉಂಟಾದರೆ ರಸ್ತೆಗಳು ಸಂಚಾರಕ್ಕೆ ಉಪಯೋಗಕ್ಕೆ ಬಾರದಂತೆ ಬದಲಾಗುತ್ತವೆ. ಹಾಗೆಯೇ ರಸ್ತೆ ಅಗಲೀಕರಣ ಸಮಯದಲ್ಲೂ ಹಾಳಾಗಿ ಹೋಗುತ್ತಿವೆ. ಇನ್ನು ಕೆಲವೆಡೆ ರಸ್ತೆಯ ತುಂಬಾ ಧೂಳೇ ತುಂಬಿರುತ್ತದೆ. ಒಮ್ಮೆ ಸಂಚರಿಸಿದರೆ ಸಾಕಪ್ಪ ಸಾಕು ಎನ್ನವಷ್ಟರ ಮಟ್ಟಿಗೆ ಹದಗೆಟ್ಟಿರುತ್ತವೆ.

ಬಲಿಗಾಗಿ ಕಾದು ಕುಳಿತಿರುವ ರಸ್ತೆಯಲ್ಲಿರುವ ಗುಂಡಿಗಳು

ಗಣಿ ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳೇ ಹೆಚ್ಚು. ತಗ್ಗು ಹಾಗೂ ಧೂಳಿನಿಂದ ಕೂಡಿದ ರಸ್ತೆಗಳಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಸಾರ್ವಜನಿಕರು ಸಂಚರಿಸಲು ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರು ಕಥೆ ಹೇಳೋದೆ ಬೇಡ. ಅಷ್ಟರ ಮಟ್ಟಿಗೆ ರಸ್ತೆಗಳು ಕಿತ್ತು ಹೋಗಿವೆ. ಇತ್ತ ಹಾಸನ, ಕೊಪ್ಪಳ, ತುಮಕೂರಿನಲ್ಲೂ ಅದೇ ಪರಿಸ್ಥಿತಿ.

ಫೇಸ್​ಬುಕ್‌ನಲ್ಲಿ ಕಪಲ್ ಚಾಲೆಂಜ್ ಹೀಗೆ ವಿವಿಧ ಚಾಲೆಂಜ್‌ಗಳು ಸದ್ದು ಮಾಡುತ್ತಿವೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಮಾತ್ರ ಗುಂಡಿ ಬಿದ್ದ ರಸ್ತೆಗಳ ಫೋಟೋಗಳನ್ನು ಶೇರ್​ ಮಾಡಿ ಚಾಲೆಂಜ್​ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ಮೈಸೂರು ಅರಮನೆ ಸುತ್ತಮುತ್ತಲಿರುವ ರಸ್ತೆಗಳು ಹಾಗೂ ನಗರ ಸಂಪರ್ಕಿಸುವ ರಸ್ತೆಗಳಿಗೆ ತೇಪೆ ಹಾಕಲಾಗುತ್ತಿದೆ. ರಸ್ತೆಗಳ ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಜಾಯಿಷಿ ನೀಡುವ ಬದಲಿಗೆ ಕೂಡಲೇ ರಸ್ತೆ ದುರಸ್ತಿ ಮಾಡಲಿ.

Last Updated : Dec 31, 2020, 8:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.