ಬನ್ನೇರುಘಟ್ಟ: ಹೆರಿಗೆಯಾದ ಕೆಲವೇ ಹೊತ್ತಿನಲ್ಲಿ ನವಜಾತ ಶಿಶುವನ್ನು ರಸ್ತೆ ಬದಿ ಬಟ್ಟೆಯಲ್ಲಿ ಸುತ್ತಿ ಎಸೆದು ಹೋದ ಘಟನೆ ಬೆಂಗಳೂರು- ಬನ್ನೇರುಘಟ್ಟ ಮುಖ್ಯ ರಸ್ತೆಯ ವೀವರ್ಸ್ ಕಾಲನಿಯಲ್ಲಿ ನಡೆದಿದೆ. ರಕ್ತಸಿಕ್ತವಾಗಿದ್ದ ಮಗುವಿನ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಹಸುಗೂಸನ್ನು ರಕ್ಷಿಸಿ ಮಾನವೀಯತೆ ಮೆರೆದರು.
ಶನಿವಾರ ಮುಂಜಾನೆ 5.45ರ ಸುಮಾರಿಗೆ ವಿವರ್ಸ್ ಕಾಲೋನಿಯ 5ನೇ ಕ್ರಾಸ್ನ ರಸ್ತೆ ಬದಿಯಲ್ಲಿ ಅಳು ಕೇಳಿಸಿಕೊಂಡ ನಿವಾಸಿಗಳು ಬಂದು ನೋಡಿದಾಗ ಮಗು ಪತ್ತೆಯಾಗಿದೆ. ಬಳಿಕ ಚೂಡರತ್ನ ಎಂಬುವರು ತಕ್ಷಣ ಮಗುವನ್ನು ಮನೆಯೊಳಗೆ ಕರೆದುಕೊಂಡು ಹೋಗಿ, ಸ್ನಾನ ಮಾಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕೋಣನಕುಂಟೆ ಪೊಲೀಸರು ಶಿಶುವನ್ನು ವಶಕ್ಕೆ ಪಡೆದರು.
ಇಂದು ಮಳೆಯಿರದ ಹಾಗು ರಸ್ತೆಯಲ್ಲಿ ನಾಯಿಗಳ ಓಡಾಟವಿಲ್ಲದ ಕಾರಣ ಮಗು ಉಳಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಣ್ಣು ಶಿಶುವಾಗಿದ್ದು, ಅನೈತಿಕ ಸಂಬಂಧಕ್ಕೆ ಅಥವಾ ಅಪ್ರಾಪ್ತೆಗೆ ಜನಿಸಿದ ಮಗುವಾಗಿದ್ದರಿಂದ ತಾಯಿ ಬಿಟ್ಟು ಹೋಗಿರಬೇಕೆಂಬ ಅನುಮಾನ ಮೂಡಿದೆ.
ಇದನ್ನೂ ಓದಿ: ಬಿಸಿಲಿ ಧಗೆಯಿಂದ ಪ್ರಾಣಿಗಳ ಸಂರಕ್ಷಣೆ; ಸೀತಾಫಲ, ಕಲ್ಲಂಗಡಿ ವಿತರಣೆ, ನೀರು ಸಿಂಪಡಣೆ