ETV Bharat / city

ಹೆಂಡ್ತಿ ಇದ್ದರೂ ನಾದಿನಿ ಮೇಲೆ ಕಣ್ಣಾಕಿ ಅಪಹರಿಸಿದ್ದ ಭೂಪನ ಬಂಧನ - ಹೆಂಡತಿಯ ತಂಗಿಯ ಮೇಲೆ ಕಣ್ಣಾಕಿದ್ದವ ಅರೆಸ್ಟ್​

ಭಾವನ ಬೇಡಿಕೆಯನ್ನು ನಾದಿನಿ ನಿರಾಕರಿಸಿದ್ದಳು. ಇದರಿಂದ ಕಂಗೆಟ್ಟಿದ್ದ ಆರೋಪಿ ದೇವರಾಜ್​ ನಾದಿನಿಯನ್ನು ಹೇಗಾದರೂ ಮಾಡಿ ಮದುವೆ ಮಾಡಿಕೊಳ್ಳಬೇಕು ಎಂಬ ಹಠದಿಂದ ಕಳೆದ ಶನಿವಾರ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಹೆಂಡತಿಯ ತಂಗಿಯನ್ನು ತನ್ನ ಸಹಚರರ ಜೊತೆ ಕಾರಿನಲ್ಲಿ ಅಪಹರಿಸಿದ್ದಾನೆ.

bangalore
ಬಂಧನ
author img

By

Published : Jan 24, 2022, 11:21 AM IST

ಬೆಂಗಳೂರು: ಹೆಂಡತಿ ಇದ್ದರೂ ನಾದಿನಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಲ್ಲದೇ ಹೆಂಡತಿ ತಂಗಿಯನ್ನು ಕಿಡ್ನ್ಯಾಪ್​ ಮಾಡಿದ್ದ ಕಿರಾತಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದೇವರಾಜ್​ ಪ್ರಮುಖ ಆರೋಪಿ, ಸಹಚರ ನವೀನ್​ಕುಮಾರ್​ ಬಂಧಿತರು.

ಕೊಡಿಗೆಹಳ್ಳಿ ನಿವಾಸಿಯಾದ ದೇವರಾಜ್​ ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ. ಇದೀಗ ಹೆಂಡತಿಯ ತಂಗಿ(ನಾದಿನಿ)ಯ ಮೇಲೆ ಕಣ್ಣಾಕಿದ್ದ ಆರೋಪಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದನಂತೆ.

ಭಾವನ ಬೇಡಿಕೆಯನ್ನು ನಾದಿನಿ ನಿರಾಕರಿಸಿದ್ದಳು. ಇದರಿಂದ ಕಂಗೆಟ್ಟಿದ್ದ ಆರೋಪಿ ದೇವರಾಜ್​ ನಾದಿನಿಯನ್ನು ಹೇಗಾದರೂ ಮಾಡಿದ ಮದುವೆ ಮಾಡಿಕೊಳ್ಳಬೇಕು ಎಂಬ ಹಠದಿಂದ ಕಳೆದ ಶನಿವಾರ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಹೆಂಡತಿಯ ತಂಗಿಯನ್ನು ತನ್ನ ಸಹಚರರ ಜೊತೆ ಕಾರಿನಲ್ಲಿ ಅಪಹರಿಸಿದ್ದಾನೆ. ಈ ಕುರಿತು ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಣೆಯಾಗಿದ್ದ ಬಸ್ ಮಾಲೀಕ ಶವವಾಗಿ ಪತ್ತೆ: ಸಾಲಬಾಧೆಯಿಂದ ಆತ್ಮಹತ್ಯೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.