ಬೆಂಗಳೂರು: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಬ್ರಾಂಡೆಡ್ ವಾಚ್ ಕಳ್ಳತನ ಮಾಡಿ ಪರಾರಿಯಾಗಿದ್ದ ಲಾಂಡ್ರಿ ಕೆಲಸ ಮಾಡುತ್ತಿದ್ದ ಕೆಲಸಗಾರನನ್ನ ಸದಾಶಿವನಗರ ನಗರ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ಜಯಂತ್ ಬಂಧಿತ ಆರೋಪಿ.
ಎಂಬಿ ಪಾಟೀಲ್ ಮನೆಯಲ್ಲಿ ಕಳೆದ ತಿಂಗಳು 85 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಲಕ್ಷ ಲಕ್ಷ ಬೆಲೆಯ 6 ಬ್ರಾಂಡೆಡ್ ವಾಚ್ಗಳನ್ನು ಕದ್ದು ಲಾಂಡ್ರಿ ಕೆಲಸ ಮಾಡ್ತಿದ್ದ ಜಯಂತ್ ದಾಸ್ ಒಡಿಶಾಗೆ ಪರಾರಿಯಾಗಿದ್ದ. ಮಾಹಿತಿ ತಿಳಿದ ಬಳಿಕ ಮಾಜಿ ಗೃಹ ಸಚಿವರು ತಮ್ಮ ಅಡುಗೆಯವರ ಮೂಲಕ ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ದೂರಿನನ್ವಯ ಸದಾಶಿವನಗರ ಪೊಲೀಸರು ಆರೋಪಿ ಜಯಂತ್ ಬಂಧಿಸಿ ಕರೆ ತಂದಿದ್ದಾರೆ.
ಸದ್ಯ ಐದು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಜಯಂತ್ ದಾಸ್ ಕಳೆದ ಐದು ವರ್ಷದಿಂದ ಎಂಬಿ ಪಾಟೀಲ್ ಮನೆಯಲ್ಲಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.
(ಇದನ್ನೂ ಓದಿ: ನಿಪ್ಪಾಣಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ನಾಲ್ವರ ಬಂಧನ, 41 ಬೈಕ್ ಜಪ್ತಿ)