ETV Bharat / city

ಒಂದಂಕಿ ಲಾಟರಿ ಪ್ರಕರಣ: ಅಧಿಕಾರಿಗಳ ವಿರುದ್ಧದ ಕ್ರಮಕ್ಕೆ ಹೈಕೋರ್ಟ್ 6 ವಾರ ತಡೆ - ಒಂದಂಕಿ ಲಾಟರಿ ಪ್ರಕರಣದಲ್ಲಿ ಸುಳ್ಳು ಪ್ರಕರಣ ದಾಖಲು

ಒಂದಂಕಿ ಲಾಟರಿ ಪ್ರಕರಣದಲ್ಲಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಸಲ್ಲಿಸಿದ್ದ ಚಾರ್ಜ್‌ಶೀಟ್​ ಮತ್ತದರ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ.

high-court
ಹೈಕೋರ್ಟ್
author img

By

Published : Feb 20, 2020, 9:40 PM IST

ಬೆಂಗಳೂರು: ಒಂದಂಕಿ ಲಾಟರಿ ಪ್ರಕರಣದಲ್ಲಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ 9 ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಸಲ್ಲಿಸಿದ್ದ ಚಾರ್ಜ್‌ಶೀಟ್​ ಮತ್ತದರ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ.

ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ ಶೀಟ್​ ಮತ್ತು ನ್ಯಾಯಾಲಯದ ಮುಂದಿನ ಕಾನೂನು ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಮತ್ತು ವಿಚಾರಣಾ ಪ್ರಕ್ರಿಯೆಗೆ ಕೂಡಲೇ ತಡೆ ನೀಡಬೇಕೆಂದು ಕೋರಿ ಆರೋಪ ಎದುರಿಸುತ್ತಿರುವ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ನ್ಯಾ. ಬಿ.ಎ. ಪಾಟೀಲ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಆರೋಪಿ ಅಧಿಕಾರಿಗಳ ಪರ ವಾದಿಸಿದ ಹಿರಿಯ ವಕೀಲ ಸಿ.ಹೆಚ್. ಜಾಧವ್ ಅವರು, ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಚಾರ್ಜ್‌ಶೀಟ್​ ಸಲ್ಲಿಸಿದ್ದಾರೆ. ಹೀಗಾಗಿ, ಕಾನೂನು ಪ್ರಕ್ರಿಯೆ ಪೂರೈಸದೇ ಸಲ್ಲಿಸಿರುವ ಚಾರ್ಜ್‌ಶೀಟ್​ ಮತ್ತದರ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಬೇಕೆಂದು ಕೋರಿದರು.

ಅರ್ಜಿದಾರರ ಪರ ವಕೀಲರು ಮಾಡಿದ ಮನವಿ ಪುರಸ್ಕರಿಸಿದ ಪೀಠ, 6 ವಾರಗಳ ಕಾಲ ತಡೆಯಾಜ್ಞೆ ನೀಡಿ ಆದೇಶಿಸಿತು. ಸದ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಆರೋಪಿತ ಪೊಲೀಸ್ ಅಧಿಕಾರಿಗಳಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಆರೋಪ ಎದುರಿಸುತ್ತಿರುವ ಅಧಿಕಾರಿಗಳು

  • ನಿವೃತ್ತ ಐಜಿಪಿ ಬಿ.ಎ. ಪದ್ಮನಯನ
  • ಇನ್ಸ್​ಪೆಕ್ಟರ್‌ಗಳಾದ ಬಿ.ಎಂ. ಕನಕಲಕ್ಷ್ಮಿ (ಸದ್ಯ ಬಾಣಸವಾಡಿ ಸಂಚಾರ ಠಾಣೆ)
  • ಜಿ.ಟಿ.ಸ್ವಾಮಿ (ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ ಇನ್ಸ್​ಪೆಕ್ಟರ್‌)
  • ಸಿ.ಆರ್‌. ರಂಗನಾಥ್ (ನಿವೃತ್ತ)
  • ಎಂ.ಜೆ ಲೋಕೇಶ್ (ಕೆ.ಆರ್‌.ಪುರಂ ಸಂಚಾರ ಠಾಣೆ)
  • ಬಿ.ಎನ್​​.ಶ್ರೀಕಂಠ (ಕೆಜಿಎಫ್‌ ರಾಬರ್ಟ್​ಸನ್ ಪೇಟೆ)
  • ಆರ್‌.ರವಿಪ್ರಕಾಶ್ (ಮೈಕೋ ಲೇಔಟ್​ ಠಾಣೆ)
  • ಬಿ.ಎಂ.ತಿಪ್ಪೇಸ್ವಾಮಿ (ಕಾಮಾಕ್ಷಿಪಾಳ್ಯ ಠಾಣೆ)
  • ಹೆಡ್‌ ಕಾನ್ಸ್‌ಟೆಬಲ್​ ಬಿ.ಎಸ್‌. ವೇಣುಗೋಪಾಲ್‌ (ಕೆಜಿಎಫ್‌ ಸೈಬರ್ ಕ್ರೈಂ ಠಾಣೆ)
  • ಕಾನ್ಸ್‌ಟೆಬಲ್ ಡಿ.ರವಿಕುಮಾರ್ (ಪ್ರಸ್ತುತ ಕಲಬುರಗಿ ಪೊಲೀಸ್ ತರಬೇತಿ ಶಾಲೆ ಪಿಎಸ್‌ಐ)

ಪ್ರಕರಣದಲ್ಲಿ ಆರೋಪಿತರಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಅಲೋಕ್ ಕುಮಾರ್ ಅವರ ಹೆಸರನ್ನು ಚಾರ್ಜ್‌ಶೀಟ್​ನಿಂದ ಕೈಬಿಡಲಾಗಿದ್ದು, ಪರೋಕ್ಷವಾಗಿ ಕ್ಲೀನ್ ಚಿಟ್​ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.