ಬೆಂಗಳೂರು: ನೀರಿನ ಸಂಪ್ ಸ್ವಚ್ಛತೆಗಾಗಿ ಬಂದಿದ್ದ ಕಾರ್ಮಿಕರಿಬ್ಬರಲ್ಲಿ ಓರ್ವ ಸಾವನ್ನಪ್ಪಿದ್ರೆ, ಇನೋರ್ವ ಅಸ್ವಸ್ಥಗೊಂಡಿರುವ ಘಟನೆ ನಗರದ ಇನ್ಫೆಂಟ್ರಿ ರಸ್ತೆಯ ಎಸ್ ಎಸ್ ಬಿಜಿಎಸ್ ಟ್ರಸ್ಟ್ ಆವರಣದಲ್ಲಿ ನಡೆದಿದೆ.
ಲಿಂಗಾರಾಜುಪುರದ ಸಿದ್ದಪ್ಪ (28) ಮೃತ ಕಾರ್ಮಿಕ. ಸಿದ್ದಪ್ಪ ಹಾಗೂ ಮಲ್ಲಣ್ಣ ಇಂದು ನಗರದ ಇನ್ಫೆಂಟ್ರಿ ರಸ್ತೆಯ ಬಳಿ ಮಳೆ ಕೊಯ್ಲು ಸಂಸ್ಕೃರಿಸಿದ ನೀರಿನ ಸಂಪ್ವೊಂದರ ಸ್ವಚ್ಛತೆಗಾಗಿ ಬಂದಿದ್ದರು. ಈ ವೇಳೆ ಉಸಿರಾಟದ ತೊಂದರೆಯುಂಟಾಗಿ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಮಿಸಿದ ಕರ್ಮಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಇಬ್ಬರು ಕಾರ್ಮಿಕರನ್ನು ಹರಸಾಹಸ ಪಟ್ಟು ಮೇಲೆತ್ತಿದ್ದಾರೆ.
ಬಳಿಕ ಅಸ್ವಸ್ಥಗೊಂಡವರನ್ನ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಿದ್ದಪ್ಪ ಮೃತಪಟ್ಟಿದ್ರೆ, ಮಲ್ಲಣ್ಣನಿಗೆ ಚಿಕಿತ್ಸೆ ನೀಡಲಾಗ್ತಿದೆ.