ETV Bharat / city

ಕುತೂಹಲ..ಬಾಲಕಿ ಮನವಿಗೆ ಯಾವ ರೀತಿ ಸ್ಪಂದಿಸ್ತಾರೆ ಸಿಎಂ?, ಬೆಂಗಳೂರಿನ ರಸ್ತೆಗಳಿಗೆ ರಿಪೇರಿ ಭಾಗ್ಯ ಸಿಗುತ್ತಾ? - ರಸ್ತೆ ಗುಂಡಿಗಳ ಸಮಸ್ಯೆ ಪರಿಹಾರಕ್ಕೆ ಬಾಲಕಿ ಮನವಿ

ಪುಟ್ಟ ಬಾಲಕಿಯೊಬ್ಬಳು ವಿಡಿಯೋ ಮಾಡಿ, ಸಿಎಂ ತಾತ ನಮ್ಮ ಬೆಂಗಳೂರಲ್ಲಿ ರಸ್ತೆಗಳೇ ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಅದರಿಂದ ಸುಮಾರು ಜನ ಸತ್ತೋಗ್ತಾ ಇದ್ದಾರೆ. ಅವರು ಸತ್ರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ, ನೀವೇ ಹೇಳಿ ತಾತ. ಆ ಗುಂಡಿಗಳನ್ನ ಬೇಗ ಮುಚ್ಚಿಸಿ ಅವರ ಜೀವಗಳನ್ನ ಉಳಿಸಿ ತಾತ. ನಮ್ಮ ಅಪ್ಪ-ಅಮ್ಮ ಕೊಟ್ಟಿರೂ ಪಾಕೆಟ್​ ಮನಿಯನ್ನು ಕೂಡ ಕೊಡುವೆ. ಪ್ಲೀಸ್​ ತಾತ ಆ ಗುಂಡಿಗಳನ್ನು ಮುಚ್ಚಿಸಿ ಎಂದು ಮುಖ್ಯಮಂತ್ತಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದು, ಸಿಎಂ ಯಾವ ಪ್ರತಿಕ್ರಿಯೆ ನೀಡ್ತಾರೆ ಅಂತ ಕಾಯ್ದು ನೋಡ್ಬೇಕಿದೆ.

a-kid-request-cm-bommai-to-repair-bengaluru-potholes
ಬೊಮ್ಮಾಯಿಗೆ ಬಾಲಕಿ ಮನವಿ
author img

By

Published : Oct 26, 2021, 8:18 PM IST

Updated : Oct 26, 2021, 10:27 PM IST

ಬೆಂಗಳೂರು: ಬಿಬಿಎಂಪಿ ಕೋಟ್ಯಂತರ ರೂ. ಪ್ರತಿ ವರ್ಷ ವೆಚ್ಚಮಾಡಿದರೂ, ಮಳೆ ಬಂದಾಗ ಯಮಸ್ವರೂಪಿ ಗುಂಡಿಗಳು ಬಾಯ್ತೆರೆಯುತ್ತಿವೆ. ಇನ್ನೆಷ್ಟೋ ಕಡೆ ಡಾಂಬರ್​ ರಸ್ತೆಗಳೇ ಮಾಯವಾಗಿ ಕೇವಲ ಜಲ್ಲಿಕಲ್ಲು, ಧೂಳಿನಿಂದ ತುಂಬಿಹೋಗಿವೆ. ಜನರು, ವಿವಿಧ ಸಂಘಟನೆಗಳು ರಸ್ತೆಗುಂಡಿ ಸರಿಪಡಿಸಿ ಎಂದು ಸರ್ಕಾರವನ್ನು ಟೀಕಿಸಿದ್ದಾರೆ. ವ್ಯಂಗ್ಯರೂಪದಲ್ಲಿ ನವರಾತ್ರಿ ಸಮಯದಲ್ಲಿ ರಸ್ತೆಗುಂಡಿ ಪೂಜೆಯನ್ನೂ ಆಪ್ ಪಕ್ಷ ಹಾಗೂ ಹಲವಾರು ಸಂಘಟನೆಗಳೂ ಮಾಡಿವೆ. ಆದರೂ ಹದಗೆಟ್ಟ ರಸ್ತೆ ಸ್ಥಿತಿ ಬದಲಾಗಿಲ್ಲ.

ಸಿಎಂ ಬೊಮ್ಮಾಯಿಗೆ ಬಾಲಕಿ ಮನವಿ

ಸಿಎಂ ತಾತಾ ರಸ್ತೆ ಸರಿಮಾಡ್ಸಿ ಪ್ಲೀಸ್​​: ಬಾಲಕಿ ಇದೀಗ ಎರಡನೇ ತರಗತಿ ಓದುತ್ತಿರುವ ಎಲ್. ಧವನಿ ಎಂಬ ಬಾಲಕಿ 1.13 ನಿಮಿಷಗಳ ವಿಡಿಯೋ ಮಾಡಿ ''ಸಿಎಂ ತಾತ ನಮ್ಮ ಬೆಂಗಳೂರಲ್ಲಿ ರಸ್ತೆಗಳೇ ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಅದರಿಂದ ಸುಮಾರು ಜನ ಸತ್ತೋಗ್ತಾ ಇದ್ದಾರೆ. ಅವರು ಸತ್ತರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ, ನೀವೇ ಹೇಳಿ ತಾತ. ನಾನು ಕೂಡಾ ಹೊರಗಡೆ ಹೋಗಿರುವ ನಮ್ಮ ಅಪ್ಪ ಎಷ್ಟೊತ್ತಿಗೆ ಬರ್ತಾರೋ ಅಂತಾ ಕಾಯ್ತಾ ಇರ್ತೀನಿ. ಆ ಗುಂಡಿಗಳನ್ನ ಬೇಗ ಮುಚ್ಚಿಸಿ ಅವರ ಜೀವಗಳನ್ನ ಉಳಿಸಿ ತಾತ. ನಂಗೆ ಚಾಕೋಲೇಟ್​ ತಗೋ ಅಂತಾ ನಮ್ಮ ಅಪ್ಪ - ಅಮ್ಮ ಕೊಟ್ಟಿರೂ ಪಾಕೆಟ್​ ಮನಿಯನ್ನು ಕೂಡ ಕೊಡುವೆ. ಪ್ಲೀಸ್​ ತಾತ ಆ ಗುಂಡಿಗಳನ್ನು ಮುಚ್ಚಿಸಿ'' ಎಂದು ಮನವಿ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಸರ್ಕಾರ ಇದಕ್ಕಾದರೂ ಸ್ಪಂದಿಸುತ್ತಾ, ರಸ್ತೆಗಳ ಸ್ಥಿತಿ ಉತ್ತಮವಾಗುತ್ತಾ ಎಂಬ ಕುತೂಹಲ ಮೂಡಿದೆ.

ನಗರದ ಹೆಗ್ಗನಹಳ್ಳಿ ನಿವಾಸಿಯಾದ ಧವನಿ, ಒಂದು ವರ್ಷಗಳ ಹಿಂದೆ ಅಪ್ಪ-ಅಮ್ಮನ ಜೊತೆ ರಸ್ತೆ ಗುಂಡಿಯಿಂದಾಗಿ ಬಿದ್ದು ಏಟು ಮಾಡಿಕೊಂಡಿದ್ದಳು. ಧವನಿಗೆ ಡಿಹೈಡ್ರೆಡ್ ಸಮಸ್ಯೆ ಇದ್ದು, ಹೀಗಾಗಿ ನೀರು ಹೆಚ್ಚು ಕುಡಿಯುವಂತೆ ಪೋಷಕರ ಒತ್ತಾಯಿಸಿ, ಇದಕ್ಕೆ ಒಂದು ಗ್ಲಾಸ್ ನೀರು ಕುಡಿದರೆ ಒಂದು ರೂಪಾಯಿ ನೀಡುವುದಾಗಿ ಪೋಷಕರು ಹೇಳಿದ್ದರು.

ಅಂತೆಯೇ ದಿನಕ್ಕೆ 5-6 ಲೀಟರ್ ನೀರು ಕುಡಿಯಲು ಶುರು ಮಾಡಿದ್ದ ಧವನಿ, ಇದರಿಂದಲೇ ಅಂದಾಜು 700 ರೂಪಾಯಿ ಕೂಡಿಟ್ಟಿದ್ದಳು. ಈ ಹಣವನ್ನು ರಸ್ತೆ ಗುಂಡಿ ಮುಚ್ಚಲು ಸಿಎಂಗೆ ನೀಡಲು ನಿರ್ಧರಿಸಿ ವಿಡಿಯೋ ಮಾಡಿದ್ದಾಳೆ. ಇದಕ್ಕೆ ಸಿಎಂ ಕೊಡುವ ಪ್ರತಿಕ್ರಿಯೆ ಬಗ್ಗೆ ಎಲ್ಲರೂ ಕುತೂಹಲ ಹೊಂದಿದ್ದಾರೆ.

ರಸ್ತೆ ದುರಸ್ತಿ ಮಾಡಿದ್ದ ಸುಳ್ಯ ವಿದ್ಯಾರ್ಥಿಗಳು: ಇನ್ನೊಂದೆಡೆ ಸುಳ್ಯದಲ್ಲೂ ರಸ್ತೆ ದುರಸ್ತಿಗೆ ಎರಡನೇ ತರಗತಿ ವಿದ್ಯಾರ್ಥಿಗಳು ಹಾರೆ ಹಿಡಿದು ದುರಸ್ತಿಗೆ ಮುಂದಾದ ಚಿತ್ರ ಕೂಡಾ ವೈರಲ್ ಆಗಿದ್ದು, ತಕ್ಷಣವೇ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸಮಸ್ಯೆ ನಿವಾರಿಸುವಂತೆ ತಾಕೀತು ಮಾಡಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ನಾಪತ್ತೆ: ಆದರೆ, ಬೆಂಗಳೂರಿನ ಪ್ರತಿ ಡಾಂಬರ್​ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಹಾಗೇ ಇವೆ. ದ್ವಿಚಕ್ರ ವಾಹನ ಸವಾರರನ್ನು ಬಲಿಪಡೆಯಲು ಕಾದು ಕುಳಿತಿವೆ. ರಸ್ತೆಗುಂಡಿಗೆ ಬಿದ್ದರೂ ಅಪಾಯ, ತಪ್ಪಿಸಲು ಹೋಗಿ ಅಡ್ಡಾದಿಡ್ಡಿ ವಾಹನ ಓಡಿಸಿದರೂ ಅಪಾಯ ಎದುರಾಗಿದೆ. ಬಿಬಿಎಂಪಿ ಇಷ್ಟಾದರೂ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳು ಸಂಪರ್ಕಕ್ಕೇ ಸಿಗುತ್ತಿಲ್ಲ.

ಕ್ರಮ ಕೈಗೊಳ್ಳುವ ವಿಚಾರ ಕೇವಲ ಹೇಳಿಕೆಗೇ ಸೀಮಿತವಾಗಿದ್ದು, ನಗರದ ಪ್ರಮುಖ ಪ್ರದೇಶ ಸೇರಿದಂತೆ ಹೊರವಲಯಗಳ ರಸ್ತೆಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚು ಕಾಣುತ್ತಿವೆ. ಇಷ್ಟೇ ಅಲ್ಲದೇ ಜಲಮಂಡಳಿಯ ಮ್ಯಾನ್ ಹೋಲ್​​​ಗಳೂ ರಸ್ತೆ ಸಮನಾಂತರಕ್ಕೆ ಇರದೆ, ರಸ್ತೆಯ ಮೇಲೆ ಬಂದು, ಅಥವಾ ರಸ್ತೆ ಸಮತಟ್ಟಿಗಿಂತ ಆಳದಲ್ಲಿದ್ದು, ವಾಹನಗಳು ಆಯತಪ್ಪಿ ಬೀಳುವಂತೆ ಮಾಡ್ತಿವೆ. ಇನ್ನೆಷ್ಟೋ ನಗರದ ಹೊರವಲಯದ ರಸ್ತೆಗಳು ಡಾಂಬಾರನ್ನೇ ಕಂಡಿಲ್ಲ, ಕೆಸರಿನ ರಸ್ತೆಗಳಾಗಿವೆ.

ಸಾವು, ಗಾಯ ಮಾಮೂಲಿ: ಇನ್ನು ಜನರ ಕಣ್ಣೊರೆಸಲು ಪಾಲಿಕೆ ಗುಂಡಿಮುಚ್ಚುವ ಪ್ರಯತ್ನ ನಡೆಸಿದರೂ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮತ್ತೆ ಮತ್ತೆ ಕಿತ್ತು ಬರುತ್ತಿವೆ, ಅಲ್ಲಲ್ಲೇ ಗುಂಡಿ ನಿರ್ಮಾಣವಾಗುತ್ತಿವೆ. ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ತುಂಬುವುದರಿಂದ ವಾಹನ ಸವಾರರು ತಿಳಿಯದೇ ಈ ಗುಂಡಿಗಳಿಂದಾಗಿ ಆಯತಪ್ಪಿ ಬೀಳುವ ಘಟನೆಗಳು, ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಕಳೆದ ತಿಂಗಳು ರಸ್ತೆಗುಂಡಿಯಿಂದಲೇ ಮೂವರು ಸಾವನ್ನಪ್ಪಿದ್ದಾರೆ.

ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲೇ ವಾರ್ಷಿಕವಾಗಿ 46.10 ಕೋಟಿ ರೂ ಖರ್ಚು ಮಾಡುತ್ತಿದೆ. ಇದಲ್ಲದೇ ರಸ್ತೆ ಅಭಿವೃದ್ಧಿ, ಡಾಂಬರೀಕರಣ ಹೆಸರಿನಲ್ಲಿ 2015-16 ರಿಂದ ಈವರೆಗೆ 20060 ಕೋಟಿ ರೂ ವೆಚ್ಚ ಮಾಡಲಾಗಿದೆ.

Last Updated : Oct 26, 2021, 10:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.