ETV Bharat / city

ವಿಶ್ವವಿಖ್ಯಾತ ಬೆಂಗಳೂರು ಹೂವಿನ ಕರಗಕ್ಕೆ ಕ್ಷಣಗಣನೆ: ಈ ಎಲ್ಲ ಮಾರ್ಗಗಳಲ್ಲಿ ಕರಗ ಸಂಚಾರ ಇರಲಿದೆ.. - ಬೆಂಗಳೂರು ಕರಗ ಉತ್ಸವ

ಏಪ್ರಿಲ್ 8 ರಿಂದ ಶುರುವಾಗಿರುವ ಈ ಸಂಭ್ರಮವು ಏಪ್ರಿಲ್ 16 ರಂದು ಅಂದರೆ ಇಂದು ಚೈತ್ರ ಪೂರ್ಣಿಮೆ ದಿನದಂದು ಹೂವಿನ ಕರಗ ನಡೆಯಲಿದ್ದು, 7ನೇ ಬಾರಿಗೆ ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕೇಂದ್ರ ಬಿಂದುವಾಗಿರುವ ಹೂವಿನ ಕರಗಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ..

countdown-for-the-world-famous-bangalore-karaga
ವಿಶ್ವವಿಖ್ಯಾತ ಬೆಂಗಳೂರು ಹೂವಿನ ಕರಗಕ್ಕೆ ಕ್ಷಣಗಣನೆ
author img

By

Published : Apr 16, 2022, 5:57 PM IST

Updated : Apr 16, 2022, 7:02 PM IST

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೆಮ್ಮೆಯ ವಿಶ್ವ ವಿಖ್ಯಾತ ಐತಿಹಾಸಿಕ‌ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗದ ಪ್ರಮುಖ ಆಕರ್ಷಣೆಯೇ ಹೂವಿನ ಕರಗ ಹೊತ್ತ ಪೂಜಾರಿ ರಾಜ ಬೀದಿಗಳಲ್ಲಿ ವೀರಕುಮಾರರೊಂದಿಗೆ ಸಂಚಾರ ಮಾಡುವುದು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಸರಳವಾಗಿ ದೇವಸ್ಥಾನದೊಳಗೆ ಎಲ್ಲ ಕಾರ್ಯಗಳು ನಡೆದಿತ್ತು.

ವಿಶ್ವವಿಖ್ಯಾತ ಬೆಂಗಳೂರು ಹೂವಿನ ಕರಗಕ್ಕೆ ಕ್ಷಣಗಣನೆ

ಅದ್ದೂರಿಯಾಗಿ ಇಡೀ ತಿಗಳರ ಸಮುದಾಯ ಮಾತ್ರವಲ್ಲದೇ ದೇಶ-ವಿದೇಶದಿಂದಲ್ಲೂ ಭಾಗಿಯಾಗಿ ಜಾತ್ರೆಯಂತೆ ಆಚರಿಸುತ್ತಿದ್ದ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿತ್ತು. ಸದ್ಯ ಮೂರನೇ ಅಲೆಯಲ್ಲಿ ಕೊರೊನಾ‌ ತೀವ್ರತೆ ಕಡಿಮೆ ಆಗುತ್ತಿರುವ ದೃಷ್ಟಿಯಿಂದ ಬೆಂಗಳೂರು ಕರಗ ಮಹೋತ್ಸವವನ್ನ ಸಾರ್ವಜನಿಕವಾಗಿ ನಡೆಸಲು ಪಾಲಿಕೆ ಅನುಮತಿ ಕೊಟ್ಟಿದೆ.

ವಿಶ್ವವಿಖ್ಯಾತ ಕರಗ ಮಹೋತ್ಸವವೂ 8 ದಿನಗಳ ಉತ್ಸವವಾಗಿದ್ದು, ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇಂದು ರಾತ್ರಿ 12 ಗಂಟೆಗೆ ಕರಗ ಶಕ್ತ್ಯೋತ್ಸವ ನಡೆಯಲಿದೆ.

ಕರಗ ಹೊರುವ ಜ್ಞಾನೇಂದ್ರ : 8 ದಿನಗಳ ಉತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದು. ಏಪ್ರಿಲ್ 8ರಿಂದ ಶುರುವಾಗಿರುವ ಈ ಸಂಭ್ರಮವು ಏಪ್ರಿಲ್ 16ರಂದು ಅಂದರೆ ಇಂದು ಚೈತ್ರ ಪೂರ್ಣಿಮೆ ದಿನದಂದು ಹೂವಿನ ಕರಗ ನಡೆಯಲಿದ್ದು, 7ನೇ ಬಾರಿಗೆ ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ.

ಎಲ್ಲೆಲ್ಲಿ ಕರಗ ಸಂಚಾರ?: ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಕರಗವೂ ಅಣ್ಣಯ್ಯಪ್ಪ ಗರಡಿ, ಎಸ್ಪಿ ರೋಡ್, ಕುಂಬಾರಪೇಟೆ, ಅವಿನ್ಯು ರೋಡ್, ಕೋಟೆ ಆಂಜನೇಯ ಸ್ವಾಮಿ ಟೆಂಪಲ್ ರೋಡ್ ಕಾಟನ್ ಪೇಟೆ ಮೇನ್ ರೋಡ್, ಮಸ್ತಾನ್ ಸಾಬ್ ದರ್ಗಾ ರೋಡ್, ಬಳೆಪೇಟೆ ರೋಡ್, ಅಣ್ಣಮ್ಮ ದೇವಸ್ಥಾನದಿಂದ ಹೊರಟು ಕಬ್ಬನ್ ಪೇಟೆ ಸುತ್ತಿ ಅಲ್ಲಿಂದ ಸೂರ್ಯೋದಯಕ್ಕೂ ಮುನ್ನವೇ ಮತ್ತೆ ಧರ್ಮರಾಯ ಸ್ವಾಮಿ ದೇವಸ್ಥಾನ ಗರ್ಭಗುಡಿ ಸೇರಲಿದೆ.

ಇದನ್ನೂ ಓದಿ: ಬೆಂಗಳೂರು ಕರಗ ಉತ್ಸವ : ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

Last Updated : Apr 16, 2022, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.