ಬೆಂಗಳೂರು : ರಾಜಧಾನಿಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದೇ ವಾರದಲ್ಲಿ 4,01,44,840 ರೂ. ದಂಡ ವಸೂಲಿ ಮಾಡಿದ್ದಾರೆ.
ಬೆಂಗಳೂರಿನ 44 ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಿಯಮಗಳ ಉಲ್ಲಂಘನೆ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಟ್ರಾಫಿಕ್ ಪೊಲೀಸರು 73,687 ಪ್ರಕರಣ ದಾಖಲಿಸಿದ್ದಾರೆ.
ಫೆಬ್ರವರಿ 7 ರಿಂದ 13ನೇ ತಾರೀಖುವರೆಗೂ ನಡೆದ ಕಾರ್ಯಾಚರಣೆಯ ವಿವರ ಇದಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.