ETV Bharat / city

ರಾಜ್ಯದಲ್ಲಿಂದು 7,184 ಜನರಿಗೆ ಸೋಂಕು ದೃಢ: 71 ಸೋಂಕಿತರು ಬಲಿ - ಕೊರೊನಾ ವೈರಸ್​ ಪರಿಣಾಮ

ನಾಡ ಹಬ್ಬದ ಸಡಗರದ ಮಧ್ಯಯೂ ಕೊರೊನಾ ತನ್ನ ಸ್ಥಾನ ಕಾಪಾಡಿಕೊಂಡಿದ್ದು, ಇಂದು ರಾಜ್ಯದಲ್ಲಿ 7,184 ಜನರಿಗೆ ಕೋವಿಡ್​ ಸೋಂಕು ತಗುಲಿರುವುದು ಖಚಿತವಾಗಿದೆ. ಅಲ್ಲದೇ ಮಹಾಮಾರಿಗೆ ರಾಜ್ಯದಲ್ಲಿ 71 ಮಂದಿ ಬಲಿಯಾಗಿದ್ದಾರೆ.

7184-corona-cases-found-in-the-state-today
ಕರ್ನಾಟಕ ಕೊರೊನಾ ವರದಿ
author img

By

Published : Oct 17, 2020, 7:57 PM IST

ಬೆಂಗಳೂರು: ರಾಜ್ಯದಲ್ಲಿಂದು 7,184 ಮಂದಿಗೆ ಕೋವಿಡ್​​ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 7,58,574ಕ್ಕೆ ಏರಿಕೆಯಾಗಿದೆ.

ಇತ್ತ 8,893 ಸೋಂಕಿತರು ಗುಣಮುಖರಾಗಿದ್ದು 6,37,481 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಇಂದು ಕೊರೊನಾಗೆ 71 ಮಂದಿ ಸೋಂಕಿತರು ಬಲಿಯಾಗಿದ್ದು ಸಾವಿನ ಸಂಖ್ಯೆ 10,427ಕ್ಕೆ ಏರಿಕೆ ಆಗಿದೆ. 19 ಮಂದಿ ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಇನ್ನು ರಾಜ್ಯದಲ್ಲಿ 1,10,647 ಸಕ್ರಿಯ ಪ್ರಕರಣಗಳಿವೆ. 940 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಕಳೆದ 14 ದಿನಗಳಲ್ಲಿ ಸೋಂಕಿತರ ಸಂಪರ್ಕದಲ್ಲಿ ಬಂದ ಪ್ರಾಥಮಿಕವಾಗಿ 5,65,978 ಮಂದಿ, 5,15,853 ಮಂದಿ ದ್ವಿತೀಯ ಸಂಪರ್ಕಿತರಿದ್ದಾರೆ. 7 ದಿನಗಳಲ್ಲಿ 1,08,109 ಜನರು ಹೋಂ ಕ್ವಾರೆಂಟೈನ್​ನಲ್ಲಿ ಇದ್ದಾರೆ. ಇಂದು 1,01,016 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, 7,184 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಇಂದು ವಿಮಾನ ನಿಲ್ದಾಣದಿಂದ ಬಂದ 504 ಜನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ.‌ ಕಳೆದ 24 ಗಂಟೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಪ್ರಮಾಣ ಶೇ 7.7ರಷ್ಟಿದೆ. ಶೇಕಡಾ 0.98 ನಷ್ಟು ಸಾವಿನ ಪ್ರಮಾಣ ಇದೆ.

ಸಿಲಿಕಾನ್​ ಸಿಟಿಯಲ್ಲಿಂದು 3,371 ಕೊರೊನಾ ಸೋಂಕಿರತು ಪತ್ತೆ

ಬೆಂಗಳೂರು ನಗರದಲ್ಲಿಂದು 3,371 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,04,005 ಕ್ಕೆ ಏರಿಕೆಯಾಗಿದೆ. ಇಂದು 4,251 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 2,35,734 ಮಂದಿ ಚೇತರಿಸಿಕೊಂಡಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 64,770 ಕ್ಕೆ ಏರಿಕೆಯಾಗಿದೆ. ಇಂದು ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ. ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಒಟ್ಟು 3,500 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.