ETV Bharat / city

ಬೆಂಗಳೂರು: ಬಿಎಸ್‌ಎಫ್‌ ಕ್ಯಾಂಪ್​ನ 51 ಯೋಧರಲ್ಲಿ ಕೋವಿಡ್‌ ಸೋಂಕು ದೃಢ

author img

By

Published : Sep 21, 2021, 5:01 PM IST

ಬಿಎಸ್ಎಫ್ ಕ್ಯಾಂಪ್‌ನ 683 ಯೋಧರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು 51 ಯೋಧರ ವರದಿ ಪಾಸಿಟಿವ್ ಬಂದಿದೆ.

ಬಿಎಸ್‌ಎಫ್‌ ಕ್ಯಾಂಪ್​ನಲ್ಲೂ ಕೊರೊನಾ ಆರ್ಭಟ
ಬಿಎಸ್‌ಎಫ್‌ ಕ್ಯಾಂಪ್​ನಲ್ಲೂ ಕೊರೊನಾ ಆರ್ಭಟ

ಬೆಂಗಳೂರು: ಬಿಎಸ್ಎಫ್ (ಗಡಿ ಭದ್ರತಾ ಪಡೆ) ಕ್ಯಾಂಪ್‌ನಲ್ಲೂ ಕೋವಿಡ್ ಅಬ್ಬರ ಶುರುವಾಗಿದ್ದು, ಮೇಘಾಲಯದಿಂದ ಬೆಂಗಳೂರಿಗೆ ಬಂದ ಒಟ್ಟು 51 ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಯೋಧರು ತರಬೇತಿಗಾಗಿ ಕಾರಹಳ್ಳಿ ಮತ್ತು ಯಲಹಂಕ ಕ್ಯಾಂಪ್​ಗೆ 15 ದಿನಗಳ ಹಿಂದೆ ಬಂದಿದ್ದರು. ಮೊದಲಿಗೆ ಯಲಹಂಕದ ಎಸ್ಟಿಸಿ ಕ್ಯಾಂಪ್‌ನ 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರಹಳ್ಳಿ ಕ್ಯಾಂಪ್​ಗೆ ಬಂದಿದ್ದವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಮತ್ತೆ 20 ಸಿಬ್ಬಂದಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ.

ಒಟ್ಟಾರೆ ಬಳಿಕ 683 ಯೋಧರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು 51 ಯೋಧರ ವರದಿ ಪಾಸಿಟಿವ್ ಬಂದಿದೆ. ಇವರು ಸೆಪ್ಟೆಂಬರ್ 11 ನೇ ತಾರೀಖಿನಂದು ಮೇಘಾಲಯದಿಂದ ಇಲ್ಲಿಗೆ ಬಂದಿದ್ದರು. ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.