ETV Bharat / city

ಈವರೆಗಿನ ಅತಿ ಹೆಚ್ಚು ; ರಾಜ್ಯದಲ್ಲಿ ಒಂದೇ ದಿನ 4,764 ಹೊಸ ಕೇಸ್!! - ಕರ್ನಾಟಕ ಕೊರೊನಾ ಸುದ್ದಿ

ಕಳೆದ 10 ದಿನಗಳಿಗೆ ಹೋಲಿಸಿದ್ರೆ, ಸಾವಿನ ಸಂಖ್ಯೆ ಕಡಿಮೆ ಆಗಿದೆ‌‌. ಇಂದು 55 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,519ಕ್ಕೆ ಏರಿದೆ..

positive cases
author img

By

Published : Jul 22, 2020, 7:46 PM IST

ಬೆಂಗಳೂರು : ರಾಜ್ಯದಲ್ಲಿಂದು ಇಂದು ಒಂದೇ ದಿನ ಹಳೆಯ ದಾಖಲೆಯನ್ನು ಮುರಿದು 4,764 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 75,833 ಕ್ಕೇರಿದೆ. ಜುಲೈ ತಿಂಗಳಲ್ಲಿ ಇದೇ ಗರಿಷ್ಠ ಸಂಖ್ಯೆಯಾಗಿದೆ.

ಇನ್ನು, ಸೋಂಕಿತರ ಸಂಖ್ಯೆ ಆಕಾಶದೆತ್ತರಕ್ಕೆ ಏರುತ್ತಿದ್ದರೆ, ಇತ್ತ ಸಾವಿನ ಪ್ರಮಾಣ ಒಂದು ಮಟ್ಟಿಗೆ ಕಡಿಮೆ ಆಗುತ್ತಿದೆ. ಕಳೆದ 10 ದಿನಗಳಿಗೆ ಹೋಲಿಸಿದ್ರೆ, ಸಾವಿನ ಸಂಖ್ಯೆ ಕಡಿಮೆ ಆಗಿದೆ‌‌. ಇಂದು 55 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,519ಕ್ಕೆ ಏರಿದೆ.

positive cases
ರಾಜ್ಯದಲ್ಲಿ ಒಂದೇ ದಿನ 4,764 ಹೊಸ ಕೇಸ್!

75,833 ಖಚಿತ ಪ್ರಕರಣಗಳಲ್ಲಿ ಈವರೆಗೆ 27,239 ಮಂದಿ ಗುಣಮುಖರಾಗಿದ್ದಾರೆ.‌ ಉಳಿದಂತೆ 47,069 ಸಕ್ರಿಯ ಪ್ರಕರಣಗಳು ಬಾಕಿ ಇದ್ದು, 618 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಸೋಂಕಿತರ ಸಂಪರ್ಕದಲ್ಲಿ 1,26,560 ಸಂಪರ್ಕಿತರು ನಿಗಾದಲ್ಲಿದ್ದಾರೆ‌‌.

ಕೇಂದ್ರ ಸರ್ಕಾರಕ್ಕೆ ಶಾಕ್ ಕೊಟ್ಟ ಕರ್ನಾಟಕದ ಸೋಂಕಿತರ ಸಂಖ್ಯೆ...

positive cases
ಕೇಂದ್ರಕ್ಕೆ ಶಾಕ್!

ಕರ್ನಾಟಕದ ಸೋಂಕಿತರ ಸಂಖ್ಯೆ ಕೇಂದ್ರ ಸರ್ಕಾರಕ್ಕೆ ಶಾಕ್‌ ಕೊಟ್ಟಿದೆ. ಜುಲೈನಲ್ಲಿ ಕೇಂದ್ರ ಸರ್ಕಾರ ಹಾಕಿದ್ದ ಲೆಕ್ಕಾಚಾರವನ್ನೇ ಕೊರೊನಾ ಬುಡಮೇಲು ಮಾಡಿದೆ. ಆಕ್ಸಿಜನ್ ಪೂರೈಕೆ ವಿಚಾರಕ್ಕೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಜುಲೈ 31ರ ವೇಳೆಗೆ 53,860 ಪ್ರಕರಣ ಆಗಬಹುದು ಅಂತಾ ಕೇಂದ್ರ ಸರ್ಕಾರ ಹೇಳಿತ್ತು. ಜುಲೈನಲ್ಲಿ ಶುರುವಾದ ಸೋಂಕಿತರ ಪ್ರಮಾಣ ಕೇಂದ್ರಕ್ಕೆ ಶಾಕ್ ಕೊಟ್ಟಿದೆ. ಜುಲೈ ಅಂತ್ಯಕ್ಕೆ 53,860 ಪ್ರಕರಣ ಆಗಬಹುದು ಎಂದು ಸರ್ಕಾರ ಹೇಳಿತ್ತು. ಆದರೆ, ಇದೀಗ ಜುಲೈ 22ರ ವೇಳೆಗೆ 75,833ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ನಿರೀಕ್ಷೆಗೂ ಮೀರಿ 21,973 ಪ್ರಕರಣ ಹೆಚ್ಚಳವಾಗಿದೆ. ಈ ಮೂಲಕ ಕರ್ನಾಟಕದ ಕೊರೊನಾ ಪ್ರಕರಣ ಕೇಂದ್ರದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ.

ಇನ್ನೊಂದೆಡೆ ಜುಲೈ 1ರಿಂದ ಶುರುವಾದ ರಾಜ್ಯದ ಕೊರೊನಾ ಪ್ರಕರಣದ ಸಾವಿರದ ದಾಖಲೆ ಇಂದು 4 ಸಾವಿರ ಗಟಿ ದಾಟಿದೆ. ಕೇವಲ ಐದು ದಿನಗಳ ಅಂತರದಲ್ಲೇ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ. ಅದರ ಅಂಕಿ-ಅಂಶ ನೋಡುವುದಾದ್ರೆ..

ತಿಂಗಳು - ಪ್ರಕರಣ

ಜುಲೈ 1 - 1,272

ಜುಲೈ 5 - 1,925

ಜುಲೈ 10 - 2,313

ಜುಲೈ15 - 3,176

ಜುಲೈ 18 - 4,537

ಜುಲೈ 22 - 4,764

ETV Bharat Logo

Copyright © 2024 Ushodaya Enterprises Pvt. Ltd., All Rights Reserved.