ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಆಯ್ಕೆ ಪಟ್ಟಿಯಲ್ಲಿನ 30 ಅಭ್ಯರ್ಥಿಗಳಿಗೆ ತಹಶೀಲ್ದಾರ್ ಗ್ರೇಡ್ 2 ವೃಂದದ ಗ್ರೂಪ್ ಬಿ ಹುದ್ದೆಗೆ ನೇಮಕ ಮಾಡಿ ಆದೇಶಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ 2011ನೇ ಸಾಲಿನಲ್ಲಿ ಕಂದಾಯ ಇಲಾಖೆಯ ಕರ್ನಾಟಕ ಆಡಳಿತ ಸೇವೆಗೆ ಸೇರಿದ ಗ್ರೂಪ್ ಬಿ ವೃಂದದ ತಹಶೀಲ್ದಾರ್ ಗ್ರೂಪ್-2 ವೃಂದದ ಹುದ್ದೆಗೆ 57 ಮಂದಿ ಆಯ್ಕೆಯಾಗಿದ್ದರು. ಅಕ್ರಮದ ಹಿನ್ನೆಲೆ 2011 ಸಾಲಿನ ನೇಮಕಾತಿಯನ್ನು ಅಸಿಂಧುಗೊಳಿಸಲಾಗಿತ್ತು.
ಆದರೆ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಪಟ್ಟಿಯನ್ನು ಕಾನೂನು ಬದ್ಧಗೊಳಿಸಲು ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕ, 2022ನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿತ್ತು.
ಕರ್ನಾಟಕ ಲೋಕಸೇವಾ ಆಯೋಗ ಮಾ.22, 2014ರಂದು ಹೊರಡಿಸಿದ ಅಂತಿಮ ಆಯ್ಕೆ ಪಟ್ಟಿ ಅನ್ವಯ, ಕಂದಾಯ ಇಲಾಖೆಯ ಸೇವೆಗೆ ಆಯ್ಕೆಯಾಗಿರುವ ಒಟ್ಟು 57 ಉಳಿದ ಮೂಲ ವೃಂದದ ಅಭ್ಯರ್ಥಿಗಳ ಪೈಕಿ 30 ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್‌ನಲ್ಲಿ 56 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕ : ಅರ್ಜಿ ಆಹ್ವಾನ