ETV Bharat / city

ದ್ವಿತೀಯ ಪಿಯು ಪರೀಕ್ಷೆಗೆ ತಯಾರಿ ಹೇಗೆ? ಆರೋಗ್ಯದ ಕಾಳಜಿ ಎಷ್ಟು ಅಗತ್ಯ? ಇಲ್ಲಿದೆ ಉಪಯುಕ್ತ ಟಿಪ್ಸ್! - ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾವಣೆ

ಪರೀಕ್ಷೆ ಎಂದಾಕ್ಷಣ ಹೆದರುವ ಅಗತ್ಯವಿಲ್ಲ. ಸೂಕ್ತ ತಯಾರಿಗಳು ಪರೀಕ್ಷೆಯ ಒತ್ತಡ ಕಡಿಮೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ತಜ್ಞರ ಅಗತ್ಯ ಸಲಹೆಗಳು ಇಲ್ಲಿವೆ..

Karnataka Class 12 exam dates 2022
ಪಿಯುಸಿ ಪ್ರಶ್ನೆ ಪತ್ರಿಕೆ ಬದಲಾವಣೆ
author img

By

Published : Apr 19, 2022, 6:13 PM IST

Updated : Apr 19, 2022, 6:52 PM IST

ಬೆಂಗಳೂರು: ಎಕ್ಸಾಂ! ಇದೊಂದು ಪದ ಕೇಳಿದರೆ ಸಾಕು ಅನೇಕರಿಗೆ ಬೇಡವೆಂದರೂ ಟೆನ್ಶನ್, ಭಯ ಶುರುವಾಗಿ ಬಿಡುತ್ತೆ. ಇದೀಗ ರಾಜ್ಯಾದ್ಯಂತ ಸಾಲುಸಾಲು ಪರೀಕ್ಷೆಗಳು ಶುರುವಾಗುತ್ತಿದ್ದು ಪ್ರಮುಖವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22ರಿಂದ ಆರಂಭವಾಗಲಿದೆ.

ಪರೀಕ್ಷೆ ಅಂದಮೇಲೆ ಸರಿಯಾದ ತಯಾರಿ ಅಗತ್ಯವಿದೆ. ಇದರ ಜೊತೆಗೆ, ಆರೋಗ್ಯದ ಕಾಳಜಿಯೂ ಮುಖ್ಯ. ಹೀಗಾಗಿ ಮಕ್ಕಳ ತಜ್ಞರು ವಿದ್ಯಾರ್ಥಿಗಳ ಪರೀಕ್ಷೆಯ ಸಂಬಂಧ ಒಂದಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ. ಪರೀಕ್ಷೆಗೆ ತಯಾರಿ ಹೇಗಿರಬೇಕು? ಯಾವ ರೀತಿ ಉತ್ತರ ಬರೆಯಬೇಕು? ಪರೀಕ್ಷಾ ಕೊಠಡಿಯೊಳಗೆ ಬಂದ ಕೂಡಲೆ ಮಾಡಬೇಕಾದ್ದೇನು? ಪರೀಕ್ಷಾ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಉಪಯುಕ್ತ ಸಲಹೆಗಳು ಹೀಗಿವೆ.

1. ಭಯ ಬೇಡ ಸೂಕ್ತ ತಯಾರಿ ಬೇಕು: ಪರೀಕ್ಷಾ ಕೇಂದ್ರಕ್ಕೆ ಹೋಗುವ ಹಿಂದಿನ ದಿನವೇ ಪರೀಕ್ಷೆಗೆ ಬೇಕಿರುವ ಹಾಲ್ ಟಿಕೆಟ್, ಕಾಲೇಜು ಐಡಿ ಕಾರ್ಡ್, ಪೆನ್​ಗಳೂ ಸೇರಿದಂತೆ ಎಲ್ಲ ಸಾಮಗ್ರಿಗಳು ನಿಮ್ಮಲ್ಲಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪರೀಕ್ಷೆಯ ಮುನ್ನಾದಿನ ಚೆನ್ನಾಗಿ ನಿದ್ದೆ ಮಾಡುವುದು ಹಾಗೂ ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ತಲುಪುವುದು ಒಳ್ಳೆಯದು.

2. ಮತ್ತೊಮ್ಮೆ ಚೆಕ್‌ ಮಾಡಿ: ಪರೀಕ್ಷೆ ಸಮಯದಲ್ಲಿ ಉತ್ತರಗಳನ್ನು ಬರೆದ ನಂತರ ಅದನ್ನು ಮತ್ತೊಮ್ಮೆ ನೋಡುವುದೊಳಿತು. ಹಾಲ್ ಟಿಕೆಟ್ ನಂಬರ್ ಸರಿಯಾಗಿ ನಮೂದಿಸಲಾಗಿದೆಯೇ, ಗುರುತುಗಳು ಸರಿಯಾಗಿ ಮಾಡಲಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

3. ಆಹಾರ ಕ್ರಮ ಹೀಗಿರಲಿ: ಪರೀಕ್ಷೆ ಬರೆಯುವ ಮಕ್ಕಳು ಆರೋಗ್ಯದ ಕಾಳಜಿವಹಿಸುವ ಅಗತ್ಯವಿದೆ. ಆದಷ್ಟು ಪೌಷ್ಟಿಕಾಹಾರ, ಹಣ್ಣು, ತರಕಾರಿ ಸೇವಿಸುವುದು ಉತ್ತಮ. ಬೇಸಿಗೆ ಹೆಚ್ಚಿರುವುದರಿಂದ ನೀರು, ಹಣ್ಣಿನ ರಸ ಕುಡಿಯಿರಿ. ಕಾರ್ಬೋನೇಟ್ ಡ್ರಿಂಕ್ಸ್‌, ಕಾಫಿಯಿಂದ ದೂರ ಇದ್ದಷ್ಟು ಒಳ್ಳೆಯದೇ.

4. 20-20-20 ನಿಯಮ ಪಾಲಿಸಿ: ವಿದ್ಯಾರ್ಥಿಗಳು ಸಿಕ್ಕ ಸಮಯದಲ್ಲಿ ಒಂದಷ್ಟು ವ್ಯಾಯಾಮ ಮಾಡುವುದು ಒಳ್ಳೆಯದು‌. ಪರೀಕ್ಷೆಗಾಗಿ ಓದುತ್ತಾ ಒಂದೇ ಕಡೆ ಕುಳಿತುಕೊಳ್ಳುವ ಬದಲು ಓಡಾಡುತ್ತಾ ಓದುವುದನ್ನು ಮಾಡಬಹುದು. ಎಲೆಕ್ಟ್ರಿಕ್ ಡಿವೈಸ್ ಬಳಕೆ ಮಾಡಿದರೆ 20-20-20 ಫಾರ್ಮುಲಾ ಹಾಕಿಕೊಳ್ಳಿ. ಇದರಿಂದ ಕಣ್ಣುಗಳ ಮೇಲಾಗುವ ಡ್ಯಾಮೇಜ್ ತಪ್ಪಿಸಬಹುದು. ಈ 20-20-20 ಎಕ್ಸಸೈಜ್ ಅಂದರೆ, ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ ದೂರದಲ್ಲಿರುವ ವಸ್ತುಗಳನ್ನು ನೋಡುವುದು, ಹಸಿರು ನೋಡುವುದರಿಂದ ಕಣ್ಣುಗಳಿಗಾಗುವ ಹಾನಿ ತಪ್ಪಿಸಬಹುದು.

ನಿಮ್ಮ ಓದಿನ ಕ್ರಮ ಹೀಗಿರಲಿ..

  • ಟೈಮ್ ಟೇಬಲ್ ಹಾಕಿಕೊಳ್ಳಿ.
  • ಓದಿಗೆ ಭಂಗ ಮಾಡುವ ವಸ್ತುಗಳಾದ ಮೊಬೈಲ್, ಟಿವಿ, ಕಂಪ್ಯೂಟರ್​ನಿಂದ ದೂರವಿರಿ.
  • ಓದಿನ ನಡುವೆ ವಿರಾಮ ತೆಗೆದುಕೊಳ್ಳಿ.
  • ಸರಿಯಾಗಿ ನಿದ್ದೆ ಮಾಡಿ.
  • ನೀವು ಓದಿದ್ದನ್ನು ನೀವೇ ಮೌಲ್ಯಮಾಪನ ಮಾಡಿಕೊಳ್ಳಿ
  • ಒತ್ತಡಕ್ಕೆ ಒಳಗಾಗದಿರಿ.

ಇದನ್ನೂ ಓದಿ: ದಲಿತ ವಿದ್ಯಾರ್ಥಿಗೆ ಬೆಲ್ಟ್​, ಕೇಬಲ್​ನಿಂದ ಥಳಿಸಿ, ಕಾಲು ನೆಕ್ಕಿಸಿದರು! ವಿಡಿಯೋ

Last Updated : Apr 19, 2022, 6:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.