ETV Bharat / city

ದೇಶದಲ್ಲಿ ಚಿನ್ನದ ಬೇಡಿಕೆ ಶೇ 2.6ರಷ್ಟು ಹೆಚ್ಚಳ: ವಿಶ್ವ ಚಿನ್ನ ಪರಿಷತ್‌ ವರದಿ - ಚಿನ್ನದ ಬೇಡಿಕೆ

ವಿಶ್ವ ಚಿನ್ನ ಪರಿಷತ್ ಭಾರತೀಯ ಚಿನ್ನ ಬೇಡಿಕೆಯ ಚಾಲಕರು ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಈ ವರದಿ 1990ರಿಂದ 2020ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದೆ.

2.6 percent Gold Demand increased
ಚಿನ್ನದ ಬೇಡಿಕೆ ಶೇ. 2.6ರಷ್ಟು ಹೆಚ್ಚಳ
author img

By

Published : Oct 20, 2021, 9:42 AM IST

ಬೆಂಗಳೂರು: ವಿಶ್ವ ಚಿನ್ನ ಪರಿಷತ್ ಭಾರತೀಯ ಚಿನ್ನ ಮಾರುಕಟ್ಟೆಯ ಆಳ-ವಿಸ್ತೃತ ವಿಶ್ಲೇಷಣೆ ಸರಣಿಯ ಮೊದಲ ಕಂತಾದ ಭಾರತೀಯ ಚಿನ್ನ ಬೇಡಿಕೆಯ ಚಾಲಕರು ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.

ಎಕೊನೋಮೆಟ್ರಿಕ್‌ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990ರಿಂದ 2020ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ. ಈ ವರದಿ ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾಶಾಸ್ತ್ರ, ಸಾಮಾಜಿಕ, ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.

ಜನರ ಆರ್ಥಿಕತೆ ಇದಕ್ಕೆ ಪೂರಕ:

ಎಕನಾಮಿಕ್‌ ವಿಶ್ಲೇಷಣೆಯ ಪ್ರಕಾರ, ಆದಾಯದ ಹೆಚ್ಚಳವೇ ದೀರ್ಘಾವಧಿಯಲ್ಲಿ ಚಿನ್ನದ ಬೇಡಿಕೆಯ ಏರಿಕೆಗೆ ಕಾರಣ. ಇದಕ್ಕೆ ದೇಶದ ಜನರ ಆರ್ಥಿಕತೆ ಕೂಡ ಪೂರಕವಾಗಿದೆ. ಆದರೂ, ಇಳಿಮುಖವಾಗುತ್ತಿರುವ ಕುಟುಂಬಗಳ ಉಳಿತಾಯ ಮತ್ತು ಕೃಷಿ ಆದಾಯದಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಅಲ್ಪಾವಧಿಯ ಸವಾಲುಗಳನ್ನು ಎದುರಿಸುತ್ತಿದೆ. ಪ್ರಸ್ತುತ ನೀತಿ ತಯಾರಕರು ಚಿನ್ನದ ಬೇಡಿಕೆಯನ್ನು ಆಮದುಗಳ ದೃಷ್ಟಿಕೋನದಿಂದ ಮಾತ್ರ ನೋಡುತ್ತಾರೆ. ಹೆಚ್ಚುವರಿಯಾಗಿ, ಜನರ ನಂಬಿಕೆ ಗಳಿಸಲು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಉದ್ಯಮದ ಪ್ರಯತ್ನಗಳು ಹೆಚ್ಚು ಒಗ್ಗಟ್ಟಾಗಿರಬೇಕು ಎಂದಿದೆ.

ವಿಶ್ವ ಚಿನ್ನದ ಪರಿಷತ್​​ನ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿ.ಆರ್ ಪ್ರಕಾರ, ನಮ್ಮ ಇತ್ತೀಚಿನ ಸಂಶೋಧನೆ, ಭಾರತದಲ್ಲಿ ಚಿನ್ನದ ಬೇಡಿಕೆಯ ಚಾಲಕರು ವಿಷಯ ವೈವಿಧ್ಯಮಯವಾಗಿದೆ ಎಂಬ ಅಂಶವನ್ನು ಬಲಪಡಿಸುತ್ತದೆ. ಜನರ ಬಾಂಧವ್ಯ, ದೀರ್ಘಕಾಲದ ಸಂಪ್ರದಾಯ ಮತ್ತು ಹಬ್ಬಗಳಲ್ಲಿ ಉಡುಗೊರೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದು ಕಳೆದ ಮೂರು ದಶಕಗಳಲ್ಲಿ ಭಾರತದ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತದ ಹೂಡಿಕೆದಾರರು ಮನೆಯ ಆದಾಯ, ಚಿನ್ನದ ಬೆಲೆ ಮತ್ತು ಹಣದುಬ್ಬರಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವರದಿ ಇಂದು ಹಾಗೂ ಭವಿಷ್ಯದಲ್ಲಿ ಚಿನ್ನದ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

ವರದಿಯ ಪ್ರಮುಖಾಂಶಗಳು:

ಚಿನ್ನದ ದೀರ್ಘಾವಧಿ ಗ್ರಾಹಕರ ಬೇಡಿಕೆಗಳ ಮೇಲೆ ಮೂರು ಪ್ರಮುಖ ಅಂಶಗಳ ಪ್ರಭಾವ:

  • ಆದಾಯ: ಶೇ. 1ರಷ್ಟು ರಾಷ್ಟ್ರೀಯ ತಲಾ ಆದಾಯ ಹೆಚ್ಚಳವಾದಲ್ಲಿ ಚಿನ್ನದ ಬೇಡಿಕೆ ಶೇ.0.9ರಷ್ಟು ಏರಿಕೆಯಾಗುತ್ತದೆ.
  • ಚಿನ್ನದ ದರ: ಚಿನ್ನ ರೂಪಾಯಿ ಆಧಾರಿತ ಬೆಲೆಯಲ್ಲಿ ಶೇ.1ರಷ್ಟು ಏರಿಕೆಯಾದಾಗ, ಬೇಡಿಕೆ ಶೇ.0.4ರಷ್ಟು ಕಡಿಮೆಯಾಗುತ್ತದೆ.
  • ಸರ್ಕಾರಿ ಸುಂಕಗಳು: ಆಮದು ಸುಂಕ ಮತ್ತು ಇತರೆ ತೆರಿಗೆಗಳು ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತವೆ.

ಚಿನ್ನದ ಅಲ್ಪಾವಧಿ ಬೇಡಿಕೆಯ ಮೇಲೆ ಪ್ರಭಾವ ಬೀರುವ ಅಂಶ:

  • ಹಣದುಬ್ಬರ: ಹಣದುಬ್ಬರದಲ್ಲಿ ಪ್ರತಿ ಶೇ.1ರಷ್ಟು ಹೆಚ್ಚಳಕ್ಕನುಗುಣವಾಗಿ ಚಿನ್ನದ ಬೇಡಿಕೆ ಶೇ.2.6ರಷ್ಟು ಹೆಚ್ಚಾಗುತ್ತದೆ.
  • ಚಿನ್ನದ ಬೆಲೆಯಲ್ಲಿ ಬದಲಾವಣೆ: ನಿರಂತರ ದರದ ಹೆಚ್ಚಳ ಮತ್ತು ಕಡಿತವು ದೀರ್ಘಾವಧಿಯ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ತ್ವರಿತ ದರದ ಬದಲಾವಣೆ ಅಲ್ಪಾವಧಿ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ಶೇ.1ರಷ್ಟು ಚಿನ್ನದ ಬೆಲೆ ಕಡಿತದಿಂದ ಬೇಡಿಕೆ ಶೇ.1.2ರಷ್ಟು ಹೆಚ್ಚಾಗುತ್ತದೆ.
  • ತೆರಿಗೆ ಅವಧಿ: 2012ರಿಂದ ಆಮದು ಸುಂಕದ ಹೆಚ್ಚಳದಿಂದ ಪ್ರತಿ ವರ್ಷ ಚಿನ್ನದ ಬೇಡಿಕೆಯಲ್ಲಿ ಶೇ.1.2ರಷ್ಟು ಕಡಿಮೆಯಾಗಿದೆ.
  • ಹೆಚ್ಚುವರಿ ಮಳೆ: ಮುಂಗಾರು ಕೂಡ ಗ್ರಾಹಕರ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ಶೇ.1ರಷ್ಟು ಮಳೆಯ ಹೆಚ್ಚಳದಿಂದ, ಶೇ.0.2ರಷ್ಟು ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ.

ಭಾರತದಲ್ಲಿ ಭವಿಷ್ಯದ ಚಿನ್ನದ ಬೇಡಿಕೆಯ ಹೊರನೋಟ:

  • ಈ ವರ್ಷ ಕೋವಿಡ್-19 ಸಾಂಕ್ರಾಮಿಕದ ಸುದೀರ್ಘ ಹೋರಾಟದಿಂದ ದೇಶದಲ್ಲಿ ಚಿನ್ನದ ಬೇಡಿಕೆ ನಿಯಂತ್ರಣದಲ್ಲಿತ್ತು.
  • ಆದರೂ, ದೇಶಾದ್ಯಂತ ನಿರ್ಬಂಧಗಳು ನಿಧಾನವಾಗಿ ಸಡಿಲಗೊಳ್ಳುತ್ತಿರುವುದರಿಂದ ಆಮದು ಸದೃಢಗೊಳ್ಳುವ ಮತ್ತು ಚಿಲ್ಲರೆ ಮಾರಾಟದ ಬೇಡಿಕೆ ಏರಿಕೆಯ ನಿರೀಕ್ಷೆಯಿದೆ.
  • 2022 ರಲ್ಲಿ, ಆರ್ಥಿಕ ಬೆಳವಣಿಗೆ ಮತ್ತು ಬಂಗಾರದ ಬೇಡಿಕೆಯ ಪ್ರಭಾವ ಬಲಗೊಳ್ಳುವ ಸಾಧ್ಯತೆಯಿದೆ. ಆದರೂ ಕೋವಿಡ್​​ ಭವಿಷ್ಯದಲ್ಲಿ ಮತ್ತಷ್ಟು ಅನಿಶ್ಚಿತತೆಗಳನ್ನು ಸೃಷ್ಟಿಸಬಹುದು.
  • ಉದ್ಯಮವು ಹೆಚ್ಚು ಪಾರದರ್ಶಕ, ಹೆಚ್ಚು ಪ್ರಮಾಣಿಕ ಮತ್ತು ಜಾಗತಿಕಕ್ಕನುಗುಣವಾಗಿ ಕ್ರಮಗಳನ್ನು ತೆಗೆದುಕೊಂಡರೆ, ಭಾರತದ ಚಿನ್ನ ಮಾರುಕಟ್ಟೆಯು ಪ್ರಯೋಜನ ಪಡೆಯುತ್ತದೆ.

ಚಿನ್ನವನ್ನು ಭಾರತದ ಉದ್ದಗಲಕ್ಕೂ ಮೌಲ್ಯಯುತ ಆಸ್ತಿಯಾಗಿ ಉಳಿಸಿಕೊಳ್ಳಲು ಅನುವು ಮಾಡಿಕೊಡುವ 3 ಕ್ಷೇತ್ರಗಳು:

  • ನಂಬಿಕೆ: ಕಡ್ಡಾಯ ಹಾಲ್‌ಮಾರ್ಕ್, ಉತ್ತಮ ವಿತರಣಾ ಮಾನದಂಡಗಳು ಮತ್ತು ಗೋಲ್ಡ್ ಎಕ್ಸ್‌ಚೇಂಜ್ ವಿಷಯ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ತರಲಿವೆ. ಜೊತೆಗೆ, ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಶಿಕ್ಷಣ ಮತ್ತು ಜಾಗೃತಿ: ಚಿನ್ನವನ್ನು ಹೇಗೆ ಖರೀದಿಸಬೇಕು ಎಂಬುದನ್ನು ವಿವರಿಸುವ ಒಂದು ಸಂಘಟಿತ ಅಭಿಯಾನವು ಅನೇಕ ಸಂಭಾವ್ಯ ಚಿನ್ನದ ಹೂಡಿಕೆದಾರರಿಗೆ ಸ್ಫೂರ್ತಿ ನೀಡಬಹುದು.
  • ನವೀನತೆ: ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು, ರೋಬೋ ಅಡ್ವೈಸರ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಂತಹ ಡಿಜಿಟಲ್ ಪರಿಕರಗಳು ಚಿನ್ನದ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಪ್ರಾದೇಶಿಕ ಆದ್ಯತೆಗಳು, ಜನಸಂಖ್ಯೆಯ ಬದಲಾವಣೆಗಳು ಮತ್ತು ಚಿನ್ನ

  • ಸಾಮಾನ್ಯವಾಗಿ, ಆಭರಣದ ಬೇಡಿಕೆಯು ದೀರ್ಘಾವಧಿಯ ಚಾಲಕರಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ ಆದರೆ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳ ಬೇಡಿಕೆಯು ಹಣದುಬ್ಬರ ಅಥವಾ ತೆರಿಗೆಯಂತಹ ಅಲ್ಪಾವಧಿಯ ಅಂಶಗಳಿಗೆ ಹೆಚ್ಚು ತೀವ್ರವಾಗಿ ಸ್ಪಂದಿಸುತ್ತದೆ.
  • ಗ್ರಾಮೀಣ ಮತ್ತು ನಗರ ಗ್ರಾಹಕರ ನಡುವೆ ಕೊಳ್ಳುವ ಮಾದರಿಗಳು ಸಹ ಭಿನ್ನವಾಗಿರುತ್ತವೆ. ಆಭರಣಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆ ಮತ್ತು ಅಲಂಕಾರ ಎಂದು ಪರಿಗಣಿಸಲಾಗುತ್ತದೆ. ನಗರ ನಿವಾಸಿಗಳು ಬಾರ್ ಮತ್ತು ನಾಣ್ಯಗಳನ್ನು ತಮ್ಮ ಆದ್ಯತೆಯ ಹೂಡಿಕೆಯ ರೂಪಗಳೆಂದು ಪರಿಗಣಿಸುತ್ತಾರೆ.

ಇದನ್ನೂ ಓದಿ: ಮಳೆಗೆ ಕೊಚ್ಚಿ ಹೋದ ಸೇತುವೆ: ಜೀವ ಕೈಯಲ್ಲಿ ಹಿಡಿದು ಕವಳೇಶ್ವರ ಗುಹೆ ತಲುಪುವ ಭಕ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.