ETV Bharat / city

ವರ್ಷಕ್ಕೆ 11 ರೇಷ್ಮೆ ಬೆಳೆ, 3.8 ಲಕ್ಷ ರೂ ಆದಾಯ: ದೊಡ್ಡಬಳ್ಳಾಪುರದ ರೈತ ಮಹಿಳೆ ರಾಜ್ಯಕ್ಕೆ ಪ್ರಥಮ - ದೊಡ್ಡ ಬಳ್ಳಾಪುರದಲ್ಲಿ ಪ್ರತಿಗತಿ ಪರ ರೈತ ಮಹಿಳೆ ರತ್ನಮ್ಮ ರಾಮಯ್ಯ

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ ಎಂಬವರು ರೇಷ್ಮೆ ಬೆಳೆಯಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ರೇಷ್ಮೆ ಕೃಷಿ ಸಾಧನೆ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಥಮ ಸ್ಥಾನ ಗಳಿಸಿದ್ದಾರೆ.

11 silk crop per year, 3.8 lakh revenue; The great farmer woman doddaballapur
ವರ್ಷಕ್ಕೆ 11 ರೇಷ್ಮೆ ಬೆಳೆ, 3.8 ಲಕ್ಷ ಆದಾಯ; ದೊಡ್ಡ ಬಳ್ಳಾಪುರದ ರೈತ ಮಹಿಳೆ ರಾಜ್ಯಕ್ಕೆ ಪ್ರಥಮ
author img

By

Published : Mar 8, 2022, 6:02 PM IST

ದೊಡ್ಡಬಳ್ಳಾಪುರ: ಸಾಧಿಸುವ ಛಲವಿದ್ದರೆ ಆಗಸದಷ್ಟು ಅವಕಾಶ ಎಂಬುದಕ್ಕೆ ಈ ರೈತ ಮಹಿಳೆಯೇ ಸಾಕ್ಷಿ. ದೊಡ್ಡಬಳ್ಳಾಪುರ ನಗರವನ್ನು ರೇಷ್ಮೆ ನಗರಿ ಎಂದು ಕರೆಯಲಾಗುತ್ತೆ. ಆದರೆ ಗ್ರಾಮೀಣ ಭಾಗದಲ್ಲಿ ರೇಷ್ಮೆ ಕೃಷಿ ಅಷ್ಟಕಷ್ಟೇ. ಈ ನಡುವೆ, ತಾಲೂಕಿನ ಮಹಿಳೆಯೊಬ್ಬರು ರೇಷ್ಮೆ ಕೃಷಿಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ ಅವರಿಗೆ ಮಹಿಳಾ ವಿಭಾಗದಲ್ಲಿ ರೇಷ್ಮೆ ಕೃಷಿ ಸಾಧನೆ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿದೆ. ಇದರ ಜೊತೆಗೆ ತಾಲೂಕಿನ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಅವರಿಗೆ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನ ಲಭಿಸಿದೆ.

ರತ್ನಮ್ಮ ರಾಮಯ್ಯನವರು ಕಳೆದ 25 ವರ್ಷದಿಂದ ರೇಷೆ ಕೃಷಿ ಮಾಡುತ್ತಿದ್ದಾರೆ. ಇವರ ಇಡೀ ಕುಟುಂಬ ರೇಷ್ಮೆ ಕೃಷಿಯಲ್ಲಿ ತೊಡಗಿದೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನವನ್ನು ನೆನೆಯುವ ರತ್ನಮ್ಮ ಕುಟುಂಬ ರೇಷ್ಮೆ ಕೃಷಿಯ ಖುಷಿ ಹಂಚಿಕೊಂಡರು.

10 ವರ್ಷಗಳ ಹಿಂದೆ ಪ್ರತಿ ಕೆಜಿ ರೇಷ್ಮೆಗೆ 150ರಿಂದ 300 ರೂಪಾಯಿ ಧಾರಣೆ ಇತ್ತು. ಆದರಿವತ್ತು ಕೆಜಿಗೆ 900 ಬೆಲೆ ಇದೆ. ರೇಷ್ಮೆ ಇಲಾಖೆಯ ನೆರವಿನಿಂದ ಹಿಪ್ಪು ನೇರಳೆ ಬೆಳೆಯಲು ನರೇಗದಿಂದ ಸಹಾಯ ಧನ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯಧನ ಸಿಕ್ಕಿದೆ. ಇದರಿಂದ ವರ್ಷಕ್ಕೆ ಸುಮಾರು 11 ಬೆಳೆಗಳನ್ನು ಬೆಳೆಯುತ್ತಿದ್ದೇವೆ ಮತ್ತು 3.83 ಲಕ್ಷ ರೂ ಲಾಭ ಬಂದಿದೆ ಎಂದರು.

ರತ್ನಮ್ಮ ರಾಮಯ್ಯರವರಿಗೆ ರಾಜ್ಯ ಮಟ್ಟದ ಪ್ರಥಮ ಸ್ಥಾನ ಬಂದಿರುವುದಕ್ಕೆ ದೊಡ್ಡಬಳ್ಳಾಪುರ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಸಂತಸ ವ್ಯಕ್ತಪಡಿಸಿದೆ. 2020-21ನೇ ಸಾಲಿನಿಂದ ರೇಷ್ಮೆ ಬೆಳೆಗಾರರು ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿದ್ದು, ಪ್ರಸ್ತುತ ತಾಲೂಕಿನ 35 ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ಹೊಂದಿದ ದ.ಭಾರತದ ಮೊದಲ ರೈಲ್ವೆ ನಿಲ್ದಾಣ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.