ಹೊಸಪೇಟೆ: ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಮತ್ತು ಸಲಹೆ ನೀಡಲು ಅವಕಾಶ ನೀಡಿರುವುದಾಗಿ ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ.
![ಆಕ್ಷೇಪಣೆ-ಸಲಹೆಗೆ ಅವಕಾಶ ನೀಡಿದ ರಾಜ್ಯ ಸರ್ಕಾರ](https://etvbharatimages.akamaized.net/etvbharat/prod-images/kn-hpt-04-vijayanagara-district-gets-a-months-objection-vsl-ka10031_14122020191212_1412f_1607953332_573.jpg)
ಆಕ್ಷೇಪಣೆ ಸಲ್ಲಿಸಲು ಹಾಗೂ ಸಲಹೆ ನೀಡಲು ರಾಜ್ಯ ಸರ್ಕಾರ 30 ದಿನಗಳ ಕಾಲ ಸಮಯ ನೀಡಿದೆ.
![ಆಕ್ಷೇಪಣೆ-ಸಲಹೆಗೆ ಅವಕಾಶ ನೀಡಿದ ರಾಜ್ಯ ಸರ್ಕಾರ](https://etvbharatimages.akamaized.net/etvbharat/prod-images/kn-hpt-04-vijayanagara-district-gets-a-months-objection-vsl-ka10031_14122020191212_1412f_1607953332_875.jpg)
ಇದನ್ನು ಓದಿ: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ: ಐದನೇ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ವಿಜಯನಗರ ಜಿಲ್ಲೆಗೆ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ತಾಲೂಕುಗಳನ್ನು ಹಾಗೂ ಬಳ್ಳಾರಿ ಜಿಲ್ಲೆಗೆ ಬಳ್ಳಾರಿ, ಸಂಡೂರು, ಕಂಪ್ಲಿ, ಸಿರಗುಪ್ಪ, ಕುರುಗೋಡು ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಕುರಿತು ಆಕ್ಷೇಪಣೆ ಹಾಗೂ ಸಲಹೆ ನೀಡಲು ಅವಕಾಶವನ್ನು ರಾಜ್ಯ ಸರ್ಕಾರ ನೀಡಿದೆ.