ಬಳ್ಳಾರಿ: ನಗರದ ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್ಗಳಲ್ಲಿ ಆಹಾರ ಪದಾರ್ಥಗಳ ಶುಲ್ಕದ ನಾಮಫಲಕ ಹಾಕದೇ ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು.., ಪ್ರಯಾಣಿಕರು ಪಡೆಯುವ ಉಪಹಾರ, ಊಟ, ಕಾಫಿ, ಟೀ ಮತ್ತು ಇನ್ನಿತರ ಆಹಾರ ಪದಾರ್ಥಗಳಿಗೆ ಯಾವ ವಸ್ತುಗಳಿಗೆ ಎಷ್ಟು ಬೆಲೆ ಎಂದು ನಾಮಫಲಕಗಳೆ ಇಲ್ಲ. ಹೀಗಾಗಿ ಜನರಿಂದ ಹೆಚ್ಚು ಹಣ ಪಡೆದುಕೊಂಡು ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಹಕರಿಗೆ ಕಾಣುವಂತೆ ವಸ್ತುಗಳ ಬೆಲೆಯನ್ನು ಕ್ಯಾಂಟಿನ್ ಅಥವಾ ಹೋಟೆಲ್ ಹೊರಗಡೆ ಹಾಕಬೇಕು. ಶುಲ್ಕದ ನಾಮಫಲಕ ಹಾಕದೇ ಪ್ರತಿಯೊಂದು ಆಹಾರ ಪದಾರ್ಥಗಳಿಗೆ 5 ರಿಂದ 10 ರೂಪಾಯಿ ಹೆಚ್ಚಾಗಿ ಗ್ರಾಹಕರಿಂದ ಪಡೆಯುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಯಾವುದೇ ಸೂಕ್ತ ಕ್ರಮ ತೆಗೆದುಕೊಳ್ಳದೆ ಸುಮ್ಮನೆ ಕುಳಿತಿದ್ದಾರೆ ಎಂಬುದು ಗ್ರಾಹಕರ ಆರೋಪವಾಗಿದೆ.