ಬಳ್ಳಾರಿ: ಗಣಿ ಅಕ್ರಮವನ್ನು ಸಕ್ರಮಗೊಳಿಸಲು ಸರ್ವೇ ಆಫ್ ಇಂಡಿಯಾ ಅಧಿಕಾರಿ ವರ್ಗ ಮುಂದಾಗಿದೆ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆರೊಪಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಗಡಿ ರೇಖೆ ಕುರಿತು ಸಂಪೂರ್ಣ ಮಾಹಿತಿಯಿದೆ. ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ತಂಡ ಕೇವಲ 1896 ರ ನಕಾಶೆ ಆಧಾರದಲ್ಲಿ ಗಡಿ ಗುರುತಿಸಿದ್ದಾರೆ. ಈ ನಕಾಶೆ ಸರಿ ಇಲ್ಲ ಎಂದು ಈ ಹಿಂದೆ ಪರಿಣತರು ಹೇಳಿದ್ದಾರೆ ಎಂದು ಟಪಾಲ್ ಗಣೇಶ್ ತಿಳಿಸಿದರು.
ಸ್ವರ್ಣ ಸುಬ್ಬರಾವ್, ದೀಪಕ್ ಶರ್ಮಾ 1896ರ ನಕಾಶೆ ಸರಿ ಇಲ್ಲ ಎಂದು ಹೇಳಿದ್ದಾರೆ. ಸಮೀಕ್ಷೆ ಮಾಡಿದ ಕುರಿತು ಯಾವುದೇ ದಾಖಲೆ ಇಲ್ಲ. ಆದರೆ, ಇದೇ ನಕ್ಷೆ ಹಿಡಿದುಕೊಂಡು ಸರ್ವೇ ನಡೆಸಿದ್ದಾರೆ. ಆ ವರದಿಯನ್ನು ಈಗ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಇದನ್ನು ಜಿಲ್ಲಾಡಳಿತ ಒಪ್ಪಬಾರದು. ಜಿಲ್ಲಾಡಳಿತ ಇದನ್ನು ವಿರೋಧಿಸಬೇಕು. ಈ ಕುರಿತು ಅಧಿಕಾರಿಗಳು ಮೌನ ವಹಿಸಿದ್ದು, ನಿಜಕ್ಕೂ ಇದು ಆಘಾತಕಾರಿ ಎಂದು ಅವರು ಕಿಡಿಕಾರಿದರು.