ETV Bharat / city

ಸಂಡೂರಿನಲ್ಲಿ ಅಪರೂಪದ ಹುಣಸೆ ಮರ: ಜನಾಕರ್ಷಣೆಯಾಗಿದೆ ಕೆಂಗುಲಾಬಿ ಹುಣಸೆಕಾಯಿ - ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮ

ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದ ಹೊರವಲಯದ ರೈತನ ಹೊಲದಲ್ಲಿ ಅಪರೂಪದ ಹುಣಸೆ ಮರ ವಿಶೇಷವಾಗಿ ಗಮನ ಸೆಳೆಯುತ್ತಿದೆ.

KN_BLY_2_SPL_TAMARIND_TREE_VSL_7203310
ಸಂಡೂರಿನಲ್ಲೊಂದು ಅಪರೂಪದ ಹುಣಸೆ ಮರ: ಜನಾಕರ್ಷಣೆಯಾಗಿದೆ ಕೆಂಗುಲಾಬಿ ಹುಣಸೆಕಾಯಿ
author img

By

Published : Dec 7, 2019, 4:42 PM IST

ಬಳ್ಳಾರಿ: ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮದ ಹೊರವಲಯದ ರೈತನ ಹೊಲದಲ್ಲಿ ಅಪರೂಪದ ಹುಣಸೆ ಮರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಮರದಲ್ಲಿ ಕೆಂಗುಲಾಬಿ ಮಿಶ್ರಿತ ಹುಣಸೆಕಾಯಿ ಜನಾಕರ್ಷಣೆಯಾಗಿದೆ.

ಸಂಡೂರಿನಲ್ಲೊಂದು ಅಪರೂಪದ ಹುಣಸೆ ಮರ: ಜನಾಕರ್ಷಣೆಯಾಗಿದೆ ಕೆಂಗುಲಾಬಿ ಹುಣಸೆಕಾಯಿ

ಸಂಡೂರು ತಾಲ್ಲೂಕಿನ ಜಿಗೇನಹಳ್ಳಿ ಗ್ರಾಮದ ಕುಮಾರ ಗೌಡರ ಹೊಲದಲ್ಲಿರುವ ಹುಣಸೆ ಮರದಲ್ಲಿರುವ ಕಾಯಿ ಇತರೆ ಹುಣಸೆ ಮರದ ಕಾಯಿಗಿಂತಲೂ ಭಿನ್ನವಾಗಿದೆ. ವಿಶೇಷತೆ ಏನೆಂದರೆ, ಇದರ ಕಾಯಿಗಳು ಮೇಲ್ನೋಟಕ್ಕೆ ಇತರೆ ಹುಣಸೆ ಕಾಯಿಯಂತೆ ಕಂಡರೂ, ಕಾಯಿಯ ಮೇಲಿನ ಹಸಿರು ಸಿಪ್ಪೆ ತೆಗೆದರೆ, ಅದರ ಒಳಗಡೆ ಕಡು ಗುಲಾಬಿ ಬಣ್ಣದ ಹಣ್ಣು ಗೋಚರವಾಗುತ್ತದೆ. ಸಾಮಾನ್ಯವಾಗಿ ಹುಣಸೆ ಕಾಯಿಗಳ ತೊಗಟೆ ಹಸಿರಾಗಿದ್ದು, ಒಳಗಡೆ ತಿಳಿ ಬಿಳಿಯ ಪದರ ಗೋಚರಿಸುತ್ತದೆ.

ಗ್ರಾಮದ ರೈತ ಕುಮಾರಗೌಡ ಪಾಟೀಲ್ ಮಾತನಾಡಿ, ಈ ಗಿಡವನ್ನು ನಮ್ಮ ತಂದೆ ಅಜ್ಜನಗೌಡರು ನೆಟ್ಟು ಬೆಳೆಸಿದ್ದರು. ಸುಮಾರು 70 ವರ್ಷಗಳ ಹಳೆಯದಾದ ಮರ ಇದಾಗಿದ್ದು, ಹುಣಸೆ ಕಾಯಿ ಇದ್ದಾಗ ಮಾತ್ರ ಕೆಂಪು-ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ. ಹಣ್ಣಾದಾಗ ಇತರ ಹುಣಸೆ ಹಣ್ಣಿನಂತಿರುತ್ತದೆ. ರುಚಿ ಹುಳಿಯಾಗಿಯೇ ಇರುತ್ತದೆ. ನಮ್ಮ ಊರಲ್ಲಿ ಈ ಮರ ಇರುವುದು ವಿಶೇಷ ಎಂದು ಹೇಳಿದ್ರು.

Intro:ಸಂಡೂರಿನಲ್ಲೊಂದು ಅಪರೂಪದ ಹುಣಸೆ ಮರ: ತಲೆಮಾರಿನ್ನೇ ಸವೆದ ಈ ಮರ ಕೆಂಗುಲಾಬಿ ಹುಣಸೆಕಾಯಿ…!
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಜಿಗೇನಹಳ್ಳಿ ಗ್ರಾಮ ಹೊರವಲಯದ ರೈತನ ಹೊಲದಲ್ಲಿ ಅಪರೂಪದ ಹುಣಸೆ ಮರ ವೊಂದು ವಿಶೇಷ ಗಮನ ಸೆಳೆದಿದ್ದು, ಕೆಂಗುಲಾಬಿ ಮಿಶ್ರಿತ ಹುಣಸೆ ಕಾಯಿ ನೋಡುಗರ ಜನಾಕರ್ಷಕಣೆಯಾಗಿದೆ.
ಜಿಲ್ಲೆಯ ಸಂಡೂರು ತಾಲ್ಲೂಕಿನ ಜಿಗೇನಹಳ್ಳಿ ಗ್ರಾಮದ ಕುಮಾರ ಗೌಡರ ಹೊಲದಲ್ಲಿರುವ ಹುಣಸೆ ಮರದ ಕಾಯಿ ಇತರೆ ಹುಣಸೆ ಮರದ ಕಾಯಿಗಿಂತಲೂ ಭಿನ್ನವಾಗಿದೆ.
ಇದರ ವಿಶೇಷತೆ ಏನೆಂದರೆ, ಇದರ ಕಾಯಿಗಳು ಮೇಲ್ನೋಟಕ್ಕೆ ಇತರೆ ಹುಣಸೆ ಕಾಯಿಯಂತೆ ಕಂಡರೂ, ಕಾಯಿಯ ಮೇಲಿನ ಹಸಿರು ಸಿಪ್ಪೆಯನ್ನು ತೆಗೆದರೆ, ಅದರ ಒಳಗಡೆ ಕಡು ಕೆಂಪು- ಗುಲಾಬಿ ಬಣ್ಣದ ಕಾಂಡ ಗೋಚರವಾಗುತ್ತದೆ.
ಸಾಮಾನ್ಯವಾಗಿ ಹುಣಸೆ ಕಾಯಿಗಳ ತೊಗಟೆ ಹಸಿರಾಗಿದ್ದು, ಒಳಗಡೆ ತಿಳಿ ಬಿಳಿಯ ಕಾಂಡ ಗೋಚರಿಸುತ್ತದೆ. ಆದರೆ ಇಲ್ಲಿನ ಗಿಡದ ಹುಣಸೆ ಕಾಯಿಯೊಳಗಿನ ಕಾಂಡ ಕೆಂಪು ಗುಲಾಬಿ ಬಣ್ಣದ ಕಾಂಡ ಕಂಡು ಬರುತ್ತದೆ. ಈ ಊರಲ್ಲಿ ಇದೊಂದೆ ಹುಣಸೆ ಮರದ ಕಾಯಿಯಲ್ಲಿ ಈ ತರಹದ ಭಿನ್ನತೆ ಕಂಡು ಬರುತ್ತದೆ.
Body:ಗ್ರಾಮದ ರೈತ ಕುಮಾರಗೌಡ ಪಾಟೀಲ್ ಮಾತನಾಡಿ, ಈ ಗಿಡವನ್ನು ನಮ್ಮ ಅಜ್ಜನವರಾದ ಅಜ್ಜನಗೌಡರು ತಂದು ನೆಟ್ಟು ಬೆಳೆಸಿದ್ದರು. ಈ ಮರವು ಈಗ ನಮ್ಮ ಸುಮಾರು 70 ವರ್ಷಗಳ ಹಳೆಯದಾದ ಮರ ಇದಾಗಿದೆ. ಹುಣಸೆ ಕಾಯಿ ಇದ್ದಾಗ ಮಾತ್ರ ಈ ಮರದ ಹುಣಸೆಕಾಯಿ ಕೆಂಪು-ಗುಲಾಬಿ ಬಣ್ಣದ್ದಿರುತ್ತದೆ. ಹಣ್ಣಾದಾಗ ಇತರ ಹುಣಸೆ ಹಣ್ಣಿನಂತಿರುತ್ತದೆ. ರುಚಿ ಕೂಡಾ ಇತರೆ ಹುಣಸೆ ಹಣ್ಣಿನಂತೆ ಹುಳಿಯಾಗಿಯೇ ಇರುತ್ತದೆ. ನಮ್ಮ ಊರಲ್ಲಿ ಈ ಮರವು ಇರುವುದು ವಿಶೇಷವಾಗಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_SPL_TAMARIND_TREE_VSL_7203310

KN_BLY_2e_SPL_TAMARIND_TREE_VSL_7203310

KN_BLY_2f_SPL_TAMARIND_TREE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.