ETV Bharat / city

ಹೊಸಪೇಟೆಗೆ ಗದಗ-ಬೆಟಗೇರಿಯ ನಗರಾಭಿವೃದ್ಧಿ ಅಧಿಕಾರಿಯ ವರ್ಗಾವಣೆ ಬೇಡ: ಕರವೇ ಆಗ್ರಹ - ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಮನವಿ

ಗದಗ-ಬೆಟಗೇರಿಯ ನಗರಾಭಿವೃದ್ಧಿ ಅಧಿಕಾರಿ ರಮೇಶ ಕುಮಾರ್​ ಅವರನ್ನು ಹೊಸಪೇಟೆ ನಗರಸಭೆಗೆ ವರ್ಗಾವಣೆ ಮಾಡದಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶಿಲ್ದಾರ್ ಹೆಚ್. ವಿಶ್ವನಾಥ ಅವರಿಗೆ ಮನವಿ ಮಾಡಿದ್ದಾರೆ.

KN_HPT_1_KARNARATAKA_RAXANAVEDIKE_PROTEST_SCRIPT_KA10028
ಹೊಸಪೇಟೆ ನಗರಸಭೆಗೆ ಗದಗ ಬೇಟಗೇರಿಯ ನಗರಾಭಿವೃದ್ಧಿ ಅಧಿಕಾರಿ ರಮೇಶ್ ಕುಮಾರ್ ವರ್ಗಾವಣೆ ಬೇಡ: ಕರ್ನಾಟಕ ರಕ್ಷಣ ವೇದಿಕೆ ಆಗ್ರಹ
author img

By

Published : Feb 11, 2020, 11:51 AM IST

ಹೊಸಪೇಟೆ: ಗದಗ-ಬೆಟಗೇರಿಯ ನಗರಾಭಿವೃದ್ಧಿ ಅಧಿಕಾರಿ ರಮೇಶ್​ ಕುಮಾರ ಅವರನ್ನು ಹೊಸಪೇಟೆ ನಗರಸಭೆಗೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶಿಲ್ದಾರ್ ಹೆಚ್.ವಿಶ್ವನಾಥ ಅವರಿಗೆ ಮನವಿ ಮಾಡಿದ್ದಾರೆ.

ಹೊಸಪೇಟೆ ನಗರಸಭೆಗೆ ಗದಗ-ಬೆಟಗೇರಿಯ ನಗರಾಭಿವೃದ್ಧಿ ಅಧಿಕಾರಿ ರಮೇಶ್ ಕುಮಾರ್ ವರ್ಗಾವಣೆ ಬೇಡ: ಕರವೇ ಆಗ್ರಹ

ಈ ಹಿಂದೆ ನಗರಸಭೆಯ ಆಯುಕ್ತರಾಗಿ ಸೇವೆ ಸಲ್ಲಿಸುವ ವೇಳೆ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಆಸ್ತಿಗೆ ಸಂಬಂಧಿಸಿದಂತೆ ಫಾರಂ-3ನ್ನು ನೀಡಲು ತಿಂಗಳುಗಟ್ಟಲೇ ಸಮಯವ ತೆಗೆದುಕೊಳ್ಳುತ್ತಿದ್ದರು. ಹಣ ಕೊಟ್ಟರೆ ಮಾತ್ರ ಕೆಲಸವನ್ನು ಮಾಡುತ್ತಿದ್ದರು. ನಗರಸಭೆಯಲ್ಲಿ ಬ್ರೋಕರ್​ಗಳ ಹಾವಳಿ ಹೆಚ್ಚಿತ್ತು. ಇದರಿಂದಾಗಿ ಕೂಲಿ ಕಾರ್ಮಿಕರು ಬಡವರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ನಗರಸಭೆಯಿಂದ ಮನೆಗೆ ಹಾಗೂ ಮನೆಯಿಂದ ನಗರಸಭೆಗೆ ಅಲೆದಾಡಿ ಸುಸ್ತಾಗುತ್ತಿದ್ದರು. ಪ್ರಸ್ತುತ ನಗರಸಭೆಯ ಆಯುಕ್ತೆ ಜಯಲಕ್ಷ್ಮೀ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರೇ ಹೊಸಪೇಟೆ ನಗರಸಭೆಯ ಅಧಿಕಾರದಲ್ಲಿ ಮುಂದುವರಿಯಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಭ್ರಷ್ಟ ಅಧಿಕಾರಿ ರಮೇಶ ಕುಮಾರ್ ಅವರನ್ನು ಮತ್ತೆ ಗದಗ-ಬೆಟಗೇರಿಯಿಂದ ಇಲ್ಲಿನ ನಗರಸಭೆಗೆ ಅವರನ್ನು ವರ್ಗಾವಣೆಗೊಳಿಸಿ ವಿಜಯನಗರಕ್ಕೆ ಕರೆತರುವ ಚಿಂತನೆ ನಡೆದಿದೆ. ಅವರು ಹೊಸಪೇಟೆಗೆ ಬಂದರೆ ಉಗ್ರ ಹೋರಾಟವನ್ನು ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನು ಕರವೇ ಕಾರ್ಯಕರ್ತರು ರವಾನಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.