ಬಳ್ಳಾರಿ: ಗಣಿನಾಡಿನ ಜನತೆಗೆ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಲ್ಮೆಟ್ ಧಾರಣೆ ಕುರಿತು ಜಾಗೃತಿ ಮೂಡಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಳೆದ ಮೂರ್ನಾಲ್ಕು ತಿಂಗಳಿಂದ ಜಿಲ್ಲೆಯಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಲಾಗುತ್ತಿದ್ದು, ಇದೀಗ ಪುನೀತ್ ಕೂಡ ಕೈಜೋಡಿಸಿದ್ದಾರೆ. ಪುನೀತ್ ಜಾಗೃತಿ ಕುರಿತ ವಿಡಿಯೋವೊಂದನ್ನು ಪೊಲೀಸ್ ಇಲಾಖೆ ಇದೀಗ ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಅಪ್ಪು, ಬಳ್ಳಾರಿ ಸಮಸ್ತ ಜನರಿಗೆ ನನ್ನದೊಂದು ವಿನಂತಿ. ದಯವಿಟ್ಟು ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಿ. ಕುಡಿದು ವಾಹನ ಚಲಾಯಿಸಬೇಡಿ. ಕಾರಲ್ಲಿ ಹೋಗುವಾಗ ದಯವಿಟ್ಟು ಸೀಟ್ಬೆಲ್ಟ್ ಹಾಕಿಕೊಳ್ಳಿ. ಸಂಚಾರಿ ನಿಯಮಗಳನ್ನು ಪಾಲಿಸಿ, ಮಾಸ್ಕ್ ಹಾಕಿಕೊಳ್ಳಿ ಎಂದು ಅರಿವು ಮೂಡಿಸಿದ್ದಾರೆ.