ETV Bharat / city

ಮೋದಿ-ಯಡಿಯೂರಪ್ಪ ನಮ್ಮ ಜೊಡೆತ್ತುಗಳು: ಡಿಸಿಎಂ ಲಕ್ಷ್ಮಣ ಸವದಿ ಬಣ್ಣನೆ - ಕಲ್ಯಾಣ ಕರ್ನಾಟಕ ಎಂದು ನಾಮಕರಣ

ಈ ದೇಶದ ರಾಜಕಾರಣದಲಿ ಎರಡು ಜೋಡೆತ್ತುಗಳಿವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಜೋಡೆತ್ತುಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

KN_BLY_1_DCM_LAXMAN_SAVADI_SPCH_VSL_7203310
ಮೋದಿ ಮತ್ತು ಯಡಿಯೂರಪ್ಪ ನಮ್ಮ ಜೊಡೆತ್ತುಗಳು: ಡಿಸಿಎಂ ಲಕ್ಷ್ಮಣ ಸವದಿ
author img

By

Published : Jan 11, 2020, 12:04 PM IST

ಬಳ್ಳಾರಿ: ಈ ದೇಶದ ರಾಜಕಾರಣದಲಿ ಎರಡು ಜೋಡೆತ್ತುಗಳಿವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನಮ್ಮ ಜೋಡೆತ್ತುಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮೋದಿ ಮತ್ತು ಯಡಿಯೂರಪ್ಪ ನಮ್ಮ ಜೊಡೆತ್ತುಗಳು: ಡಿಸಿಎಂ ಲಕ್ಷ್ಮಣ ಸವದಿ

ಹೈದರಬಾದ್ -ಕರ್ನಾಟಕ ಹೆಸರು ತೆಗೆದು ಹಾಕಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಿಂದುಳಿದ ಹಣೆಪಟ್ಟಿ ಕಿತ್ತುಹಾಕಲು ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು 100 ಕೋಟಿ ರೂ. ಸಿಎಂ ಬಿಡುಗಡೆಗೊಳಿಸಿದ್ದಾರೆ. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಸಮರ್ಥವಾಗಿ ನಿಭಾಹಿಸುತ್ತಿರುವ ಸಚಿವ ಸಿ.ಟಿ.ರವಿ ಅವರ ಖಾತೆಗಳನ್ನು ಬದಲಾವಣೆ ಮಾಡಬಾರದು ಎಂದು ಸಿಎಂಗೆ ಮನವಿ ಮಾಡಿದರು. ಈ ವೇಳೆ, ಸಚಿವ ಸಿ.ಟಿ.ರವಿ ಅವರ ಕಡೆ ನೋಡಿ ಯಾಕೆ ಹಾಗೇ ನೋಡುತ್ತೀಯಾ ಕೆಂಗಣ್ಣಿನಿಂದ ನಿಮಗೆ ಇಷ್ಟವಿಲ್ವ ಎಂದು ಕೇಳುತ್ತಿದ್ದಂತೆ ಸಚಿವ ರವಿ ಅವರು ಪ್ರತಿಕ್ರಿಯಿಸಿ ಖಾತೆ ನಿಭಾಯಿಸಲು ಬದ್ಧ ಎಂದರು.

ಸಚಿವ ಸಿ.ಟಿ.ರವಿ ಮಾತನಾಡಿ, ಮುಂದಿನ ದಿನಗಳಲ್ಲಿ ಹಂಪಿ ಉತ್ಸವವನ್ನು ನಿಶ್ಚಿತ ದಿನಾಂಕದಲ್ಲಿ ನಡೆಸಲಾಗುವುದು. ಇಲಾಖೆ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಉತ್ಸವ ದಿನಾಂಕ ದಾಖಲಿಸಲಾಗುವುದು. ಹಂಪಿ ಉತ್ಸವ ಕೇವಲ ಮನರಂಜನೆ ಕಾರ್ಯಕ್ರಮವಲ್ಲ, ಬದಲಿಗೆ ಭೂತವನ್ನ ವರ್ತಮಾನದ ಜತೆ ಬೆಸೆಯುವ ಕೊಂಡಿ ಎಂದರು. ಈ ಹಿಂದೆ ವಿಜಯನಗರ ಸಾಮ್ರಾಜ್ಯವನ್ನು ಹಾಳು ಮಾಡಿದ ಜನರು, ಇಂದು ಭಾರತಕ್ಕೂ ಆತಂಕ ತಂದೊಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. 29 ವರ್ಷದ ಹಿಂದೆ ಕಾಲೇಜು ಮುಗಿಸಿದ ನನ್ನನ್ನು ಹಂಪಿಗೆ ಕರೆತಂದಿರುವ ದಿನಗಳು ನೆನಪಾಗುತ್ತಿವೆ. ಇಂದು ಸಚಿವರಾಗಿ ಹಂಪಿಯಲ್ಲಿ ಬಂದು ಮಾತನಾಡುತ್ತಿರುವುದು ನನ್ನ ಸೌಭಾಗ್ಯ ಎಂದು ಬಾಲ್ಯದ ನೆನಪು ಮಾಡಿಕೊಂಡರು.

ಅಲ್ಲದೇ ವೇದಿಕೆಗೆ ಗಣ್ಯರನ್ನು ಆಹ್ವಾನಿಸುವ ವೇಳೆ ಹೂ ಗುಚ್ಛ ನೀಡುವುದನ್ನು ಈ ಬಾರಿ ಕೈ ಬಿಟ್ಟು ಅದಕ್ಕಾಗಿ ವ್ಯಯಿಸುವ 20 ಸಾವಿರ ರೂ. ಹಣವನ್ನು ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಯಿತು.

Intro:ಈ ದೇಶದ ರಾಜಕಾರಣದಲಿ ಎರಡು ಜೋಡೆತ್ತುಗಳಿವೆ: ಡಿಸಿಎಂ ಲಕ್ಷ್ಮಣ ಸವದಿ
ಬಳ್ಳಾರಿ: ಈ ದೇಶದ ರಾಜಕಾರಣದಲಿ ಎರಡು ಜೋಡೆತ್ತುಗಳಿವೆ. ದೇಶದ ಪ್ರಧಾನಿ ನರೇಂದ್ರಮೋದಿ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವ್ರು ಜೋಡೆತ್ತುಗಳು ಎಂದು ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡೋ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹೈಕ ಹೆಸರು ತೆಗೆದು ಹಾಕಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಮೂಲಕ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಹಿಂದುಳಿದ ಹಣೆಪಟ್ಟಿ ಕಿತ್ತುಹಾಕಲು ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು 100 ಕೋಟಿ ರೂ. ಸಿಎಂ ಬಿಡುಗಡೆಗೊಳಿಸಿ ದ್ದಾರೆ.
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಸಮರ್ಥವಾಗಿ ನಿಭಾಹಿಸುತ್ತಿರುವ ಸಚಿವ ಸಿ.ಟಿ.ರವಿ ಅವರ ಖಾತೆಗಳನ್ನು ಬದಲಾವಣೆ ಮಾಡಬಾರದು ಎಂದು ಸಿಎಂಗೆ ಮನವಿ ಮಾಡಿದರು. ಈ ವೇಳೆ ಸಚಿವ ಸಿ.ಟಿ.ರವಿ ಅವರ ಕಡೆ ನೋಡಿ ಯಾಕೆ ಹಾಗೇ ನೋಡುತ್ತೀಯಾ ಕೆಂಗಣ್ಣಿನಿಂದ ನಿಮಗೆ ಇಷ್ಟವಿಲ್ವ ಎಂದು ಕೇಳುತ್ತಿದ್ದಂತೆ ಸಚಿವ ರವಿ ಅವರು ಪ್ರತಿಕ್ರಿಯಿಸಿ ಖಾತೆ ನಿಭಾಯಿಸಲು ಬದ್ಧ ಎಂದರು.
ಸಚಿವ ಸಿ.ಟಿ.ರವಿ ಮಾತನಾಡಿ, ಮುಂದಿನ ದಿನಗಳಲ್ಲಿ ಹಂಪಿ ಉತ್ಸವವನ್ನು ನಿಶ್ಚಿತ ದಿನಾಂಕದಲ್ಲಿ ನಡೆಸಲಾಗುವುದು. ಇಲಾಖೆ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಉತ್ಸವ ದಿನಾಂಕ ದಾಖಲಿಸಲಾಗು ವುದು. ಹಂಪಿ ಉತ್ಸವ ಕೇವಲ ಮನರಂಜನೆ ಕಾರ್ಯಕ್ರಮವಲ್ಲ, ವರ್ತಮಾನ ಕಾಲಗಳನ್ನು ಅರಿಯಲು, ಬದುಕಿನ ಪಾಠ ಕಲಿಸುತ್ತದೆ. ಈ ಹಿಂದೆ ವಿಜಯನಗರ ಸಾಮ್ರಾಜ್ಯವನ್ನು ಹಾಳು ಮಾಡಿದ ಮನಸ್ಥಿತಿಯುಳ್ಳ ಜನರು ಇಂದು ಅದೇ ಮನಸ್ಥಿತಿಯ ಜನರು ಸ್ವತಂತ್ರ ಭಾರತಕ್ಕೂ ಆತಂಕ ತಂದೊಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದರು. 29 ವರ್ಷದ ಹಿಂದೆ ಕಾಲೇಜ್ ಮುಗಿಸಿದ ನನ್ನನ್ನು ಹಂಪಿಗೆ ಕರೆತಂದಿರುವ ದಿನಗಳು ನೆನಪಾಗುತ್ತಿವೆ. ಇಂದು ಸಚಿವರಾಗಿ ಹಂಪಿಯಲ್ಲಿ ಬಂದು ಮಾತನಾಡುತ್ತಿರುವುದು ನನ್ನ ಸೌಭಾಗ್ಯ ಎಂದು ಬಾಲ್ಯದ
ನೆನಪು ಮಾಡಿಕೊಂಡರು.
Body:ಸಚಿವ ಬಿ.ಶ್ರೀರಾಮುಲು ಮಾತನಾಡಿದರು. ಶಾಸಕರಾದ ಸೋಮಶೇಖರರೆಡ್ಡಿ, ಎನ್.ವೈ.ಗೋಪಾಲಕೃಷ್ಣ, ದಢೇಸೂಗೂರು ಬಸವರಾಜ, ಎಂಎಲ್ಸಿಗಳಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಜಿಪಂ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ದೀನಾ, ಡಿಸಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ, ಕನ್ನಡ ವಿವಿ ಕುಲಪತಿ ಸಾ.ಚಿ.ರಮೇಶ್, ತಾಪಂ ಅಧ್ಯಕ್ಷ ಜೋಗದ ನೀಲಮ್ಮ, ಐಜಿಪಿ ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷ ಬಸವನಗೌಡ ಇದ್ದರು.
ವೇದಿಕೆಗೆ ಗಣ್ಯರನ್ನು ಆಹ್ವಾನಿಸುವ ವೇಳೆ ಹೂ ಗುಚ್ಛ ನೀಡುವುದನ್ನು ಈ ಬಾರಿ ಕೈ ಬಿಟ್ಟು ಅದಕ್ಕಾಗಿ ವ್ಯಹಿಸುವ 20 ಸಾವಿರ ರೂ. ಹಣವನ್ನು ರೆಡ್ ಕ್ರಾಸ್ ಸಂಸ್ಥೆಗೆ ವಿತರಿಸಲಾಯಿತು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_DCM_LAXMAN_SAVADI_SPCH_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.