ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರು 21 ದಿನ ಲಾಕ್ ಡೌನ್ ಆದೇಶ ಹೊರಡಿಸಿದ್ದಾರೆ. ಆದರೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು 29 ದಿನ ಎಂದು ಹೇಳುವ ಮೂಲಕ ಮುಜುಗರಕ್ಕೊಳಗಾದರು.
ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, 29 ದಿನ ಲಾಕ್ಡೌನ್ ಎನ್ನುತ್ತಲೇ ಅಕ್ಕಪಕ್ಕದವರನ್ನ ಒಮ್ಮೆ ನೋಡಿದ್ರು. ಕೊನೆಗೆ ಅಕ್ಕಪಕ್ಕದಲ್ಲಿದ್ದವರು 21 ದಿನ ಎಂದಾಗ ಅದನ್ನೇ ಪುನರುಚ್ಚರಿಸಿದ ರಾಮುಲು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿದರು.
ಪ್ರಧಾನಿ ಮೋದಿಯವರ ಕರೆಯನ್ನು ರಾಜ್ಯದ ಸಾರ್ವಜನಿಕರು ಚಾಚೂ ತಪ್ಪದೆ ಪಾಲಿಸಬೇಕು. ಲಕ್ಷ್ಮಣ ರೇಖೆಯನ್ನು ಪ್ರತಿಯೊಬ್ಬರು ಮನೆಯ ಬಾಗಿಲ ಮುಂದೆ ಹಾಕಿಕೊಂಡು ಹೊರಬರದಂತೆ ನೋಡಿಕೊಳ್ಳಬೇಕೆಂದ್ರು.
ಇನ್ನು ರಾಜ್ಯದಲ್ಲಿ ಈವರೆಗೆ 52 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಕಲಬುರಗಿ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆಯ ಗೌರಿಬಿದನೂರಿನ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದ್ದು, ಅವರು ಇಂದು ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕೊರೊನಾ ಸೋಂಕೇ ಕಾರಣ. ಸರಿಸುಮಾರು 2,400 ಕ್ಕೂ ಅಧಿಕ ಮಂದಿಯ ರಕ್ತದ ಮಾದರಿಯು ತಪಾಸಣೆ ಮಾಡಿದಾಗ ನೆಗೆಟಿವ್ ಬಂದಿದೆ ಎಂದು ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ರು.