ಬಳ್ಳಾರಿ/ವಿಜಯನಗರ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮೇಲೆ ಸಂಚರಿಸುತ್ತಿದ್ದ ಲಾರಿಯೊಂದು ನದಿಗುರುಳಿ ಇಬ್ಬರು ಕೊಚ್ಚಿ ಹೋಗಿದ್ದರು. ಈ ಪೈಕಿ ಓರ್ವನನ್ನು ರಕ್ಷಣೆ ಮಾಡಲಾಗಿದೆ. ಮತ್ತೋರ್ವನಿಗಾಗಿ ಶೋಧ ನಡೆಯುತ್ತಿದೆ.
ಹೊಸಪೇಟೆ ತಾಲ್ಲೂಕಿನ ಜಿ.ನಾಗಲಾಪುರದಲ್ಲಿ ಹಳ್ಳ ದಾಟಿಕೊಂಡು ಹೋಗುವಾಗ ರೈತ ಉಂಚಟ್ಟಿ ಬೊಮ್ಮಪ್ಪ (62) ಕೊಚ್ಚಿಕೊಂಡು ಹೋಗಿದ್ದು ಶವ ಪತ್ತೆಯಾಗಿದೆ. ಗ್ರಾಮಸ್ಥರು ಪಂಚಾಯಿತಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿ, ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ಸಂಡೂರು ತಾಲ್ಲೂಕಿನ ಬೊಮ್ಮಾಘಟ್ಟದ ನಿವಾಸಿ ಕೃಷ್ಣಕುಮಾರ್ (51) ಬೈಕ್‌ನಲ್ಲಿ ಅಂಕಮನಾಳ ಗ್ರಾಮದ ಸಮೀಪದ ಹಳ್ಳ ದಾಟಿಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದರು. ನಂತರ ಹಳ್ಳದ ಸಮೀಪದ ಪೊದೆಯಲ್ಲಿ ಅವರ ಮೃತದೇಹ ದೊರೆತಿದೆೆ.
ಸಂಡೂರು ಸಮೀಪದ ತಾರಾನಗರ ಜಲಾಶಯ ಭರ್ತಿಯಾಗಿದ್ದು 3 ಗೇಟ್‌ಗಳ ಮೂಲಕ 3,400 ಕ್ಯೂಸೆಕ್ ನೀರನ್ನು ನಾರಿಹಳ್ಳಕ್ಕೆ ಹರಿಸಲಾಗಿದೆ. ನದಿಪಾತ್ರದ ದಂಡೆಯಲ್ಲಿರುವ ಕುರೆಕುಪ್ಪ ಗ್ರಾಮದ ನೂರಾರು ಎಕರೆ ಜಮೀನು ನೀರಿನಿಂದ ಆವೃತವಾಗಿದೆ.
ನಿರಂತರ ಮಳೆಯಿಂದಾಗಿ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಾದ್ಯಂತ ಒಟ್ಟು 48 ಮನೆಗಳು ಹಾನಿಗೊಳಗಾಗಿವೆ.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತನಿಖಾ ವಿವರ ಬಹಿರಂಗಪಡಿಸಲು ಸಿಎಂ ನಕಾರ