ETV Bharat / city

ಪಕ್ಷಕ್ಕೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂತೆ: ಮಾಜಿ ಸ್ಪೀಕರ್​​​ - ಅನರ್ಹ ಶಾಸಕರ ವಿರುದ್ಧ ರಮೇಶ್​ಕುಮಾರ್​ ಗರಂ

ಮತದಾರರು ಅವರಿಗೆ ತಕ್ಕ ಪಾಠ ಕಲಿಸಲೆಂದೇ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್ ​​ಅವಕಾಶ ಕೊಟ್ಟಿದೆ ಎಂದು ಮಾಜಿ‌ ಸ್ಪೀಕರ್​​ ಆರ್​​​​.ರಮೇಶ್​​ಕುಮಾರ್ ಹೇಳಿದರು.

Former speaker R.Ramesh kumar election campaign
ಮಾಜಿ‌ ಸ್ಪೀಕರ್​​ ಆರ್​​​​.ರಮೇಶ್​​ಕುಮಾರ್
author img

By

Published : Nov 30, 2019, 7:18 PM IST

ಹೊಸಪೇಟೆ: ರಾಜ್ಯದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಿದ ಅನರ್ಹ ಶಾಸಕರಿಗೆ ಮತದಾರರು ಸರಿಯಾಗಿ ಪಾಠ ಕಲಿಸಬೇಕು ಎಂದು ಮಾಜಿ‌ ಸ್ಪೀಕರ್​​ ಆರ್​​​​.ರಮೇಶ್​​​​ ಕುಮಾರ್​ ಮನವಿ ಮಾಡಿದರು.

ನಗರದ ಉಮರ ಸಂಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ‌ ಮಾತನಾಡಿದ ಅವರು, ಅನರ್ಹ ಶಾಸಕರು ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ. ಇದು ತಾಯಿಗೆ ದ್ರೋಹ ಮಾಡಿದಂತೆ. ಮತದಾರರು ಅವರಿಗೆ ತಕ್ಕ ಪಾಠ ಕಲಿಸಲೆಂದೇ ಅವರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂಕೋರ್ಟ್​​ ಅವಕಾಶ ಕೊಟ್ಟಿದೆ ಎಂದು ಹೇಳಿದರು.

ಮಾಜಿ‌ ಸ್ಪೀಕರ್​​ ಆರ್​​​​.ರಮೇಶ್​​ಕುಮಾರ್

ರಾಜೀನಾಮೆ ಪತ್ರವನ್ನು ಶಾಸಕರು ಬೇಕಾಬಿಟ್ಟಿ ಬರೆದು ತಮ್ಮ ಸ್ಥಾನವನ್ನು ಮಾರಿಕೊಂಡಿದ್ದಾರೆ. ಅಂತಹವರನ್ನು ಮತ್ತೆ ಕ್ಷೇತ್ರದಲ್ಲಿ ಕಾಲಿಡಲು ಬಿಡಬಾರದು. ರಾಜೀನಾಮೆ ನೀಡುವುದಕ್ಕಾಗಿಯೇ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆಯೇ ಎಂದು‌ ಪ್ರಶ್ನಿಸಿದರು. ಈ ದ್ರೋಹದ ಕೆಲಸಕ್ಕೆ ದೇವರು ಯಾವತ್ತೂ ಕ್ಷಮಿಸುವುದಿಲ್ಲ. ರೈತರ ಸಮಸ್ಯೆಗಳಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತದಾನ ಮಾಡುವಾಗ ಎಚ್ಚರಿಕೆಯಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಸೆ-ಆಮಿಷಗಳಿಗೆ ಬಲಿಯಾಗಬೇಡಿ ಎಂದು ಸಲಹೆ ನೀಡಿದರು.

Intro:ಪಕ್ಷಕ್ಕೆ ದ್ರೋಹ ಮಾಡಿದರೆ ಹೆತ್ತ ತಾಯಿಗೆ ದ್ರೋಹ ಮಾಡಿದಂಗ : ರಮೇಶ ಕುಮಾರ
ಹೊಸಪೇಟೆ : ರಾಜ್ಯದಲ್ಲಿ ಉಪಚುನಾವಣೆಗೆ ಸ್ಪರ್ಧಿಸಿದ ಅನರ್ಹ ಶಾಸಕರಿಗೆ ಜನರ ಸರಿಯಾಗಿ ಪಾಠವನ್ನು ಕಲೀಸಬೇಕಿದೆ. ಸರ್ವೋಚ್ಛ ನ್ಯಾಯವು ಇವರನ್ನು ಜನರ ಮುಂದೆ ಬಿಟ್ಟಿದ್ದಾರೆ. ಇವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಮಾಜಿ‌ ಸ್ಪೀಕರ ರಮೇಶ ಕುಮಾರ ಮಾತನಾಡಿದರು.

Body: ನಗರದ ಉಮರ ಪಂಕ್ಷನ್ ಸಂಭಾಂಗಣದಲ್ಲಿ ನಡೆದ ಅಲ್ಪ ಸಂಖ್ಯಾತ ಕಾರ್ಯಕ್ರಮದಲ್ಲಿ‌ ಮಾಜಿ ಸ್ಪೀಕರ್ ರಮೇಶ ಕುಮಾರ ಮಾತನಾಡಿದರು. ಅನರ್ಹ ಶಾಸಕರು ಪಕ್ಷಕ್ಕೆ ನಂಬಿಕೆ ದ್ರೋಹವನ್ನು ಮಾಡಿದ್ದಾರೆ. ಸರ್ವೋಚ್ಛ ನ್ಯಾಯಾಲಯವು ಅವರಿಗೆ ಅನರ್ಹರು ಎಂದು ತಿರ್ಪನ್ನು ನೀಡಿದೆ. ಅವರಿಗೆ ಜನರು‌ ಪಾಠವನ್ನು ಕಲಿಸಬೇಕು ಎಂದು ಉಪಚುನಾವಣೆಯಲ್ಲಿ ಅವಕಾಶ ವನ್ನು ನೀಡಿದೆ ಎಂದು ಮಾತನಾಡಿದರು.
ರಾಜೀನಾಮೆಯ ಪತ್ರವನ್ನು ಶಾಸಕರು ಬೇಕಾ ಬಿಟ್ಟಿ ಬರೆದು ತಮ್ಮ ಶಾಸಕರ ಸ್ಥಾನವನ್ನು ಮಾರಿಕೊಂಡಿದ್ದಾರೆ . ಅಂತಹವರನ್ನು ಮತ್ತೆ ಯಾವತ್ತು‌ ಕ್ಷೇತ್ರದಲ್ಲಿ ಕಾಲಿಡಲು ಬಿಡಬಾರದು ಎಂದು ಹೇಳಿದರು. ಇವರನ್ನು ಜನರು ರಾಜೀನಾಮೆಯನ್ನು ನೀಡುವುದಕ್ಕ ಚುನಾವಣೆಯಲ್ಲಿ ಗೆಲ್ಲಿಸಿರುವುದು ಎಂದು‌ ಅನರ್ಹ ಶಾಸಕರಿಗೆ ಪ್ರಶ್ನೆಯನ್ನು ಮಾಡಿದರು. ದೇವರು ಇವರನ್ನು ಯಾವತ್ತು ಕ್ಷೇಮಿಸುವುದಿಲ್ಲ ಎಂದು ಹೇಳಿದರು.
ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಇವರಿಗೆ ತಕ್ಕ ಪಾಠವನ್ನು ಕಲಿಸಬೇಕಿದೆ ಎಂದರು. ಮತದಾನ ಮಾಡುವಾಗ ಎಚ್ಚರಿಕೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ. ನಮ್ಮ ಮತಗಳನ್ನು ಹೆಂಡಕ್ಕೆ ದುಡ್ಡಿಗೆ ಮಾರಾಟವನ್ನು ಮಾಡಬಾರದು ಎಂದು ಹೇಳಿದರು. ಇವರು ರೈತರ ಸಮಸ್ಯೆಗಳಿಗೆ, ಮಹಿಳೆಯರಿಗೆ ಮತ್ತು ಮಕ್ಕಳ ಅಭಿವೃದ್ಧಿಗೆ ರಾಜೀನಾಮೆಯನ್ನು ನೀಡಿಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆಯನ್ನು ನೀಡಿದ್ದಾರೆ ಅಕ್ರೋಶವನ್ನು ವ್ಯಕ್ತ ಪಡಿಸಿದರು.

Conclusion:KN_HPT_3_RAMESH KUMARA_SPEECH_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.