ಬಳ್ಳಾರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಇತ್ತೀಚೆಗೆ ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಬಿಸಿಯೂಟ ನೌಕರರಿಗೆ ಮಹಾಮೋಸ ಮಾಡಿದೆ ಎಂದು ದೂರಿ ಬಿಸಿಯೂಟ ನೌಕರರು ನಗರದಲ್ಲಿಂದು ಬಿಎಸ್ವೈ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಫೆ.03 ರಂದು ಬೆಂಗಳೂರಿನಲ್ಲಿ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯಮಟ್ಟದ ಹೋರಾಟಕ್ಕೆ ಕರೆ ನೀಡಲಾಗಿತ್ತು. ಈ ಸಂದರ್ಭ ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿ, ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ರು. ಅದಾವುದಕ್ಕೂ ಮಣಿಯದೇ ಹೋರಾಟ ಮುಂದುವರಿಸಿದಾಗ, ಶಿಕ್ಷಣ ಸಚಿವರನ್ನು ಹೋರಾಟದ ಸ್ಥಳಕ್ಕೆ ಕಳಿಸಿ, ಮನವಿ ಸ್ವೀಕಾರ ಮಾಡಿ, ಬೇಡಿಕೆ ಈಡೇರಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು.
ಆದ್ರೆ ಈ ಬಗ್ಗೆ ಬಜೆಟ್ನಲ್ಲಿ ಯಾವುದೇ ರೀತಿಯ ಚಕಾರ ಎತ್ತದಿದ್ದರಿಂದ ರಾಜ್ಯ ಸರ್ಕಾರದ ವಿರುದ್ಧ ನೌಕರರು ಆಕ್ರೋಶಗೊಂಡು ನಗರದ ಮೋತಿ ವೃತ್ತದಲ್ಲಿ ಜಮಾಯಿಸಿ ಸಿಎಂ ಭರವಸೆ ನೀಡಿ ಈಡೇರಿಸದೆ ಮಹಾಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.