ಬಳ್ಳಾರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಇಂದು ಸಂಜೆ ವೇಳೆಗೆ ಹಂಪಿ ಉಪ ವಿಭಾಗದ ಡಿವೈಎಸ್ಪಿ ಎಸ್.ಎಸ್.ಕಾಶಿಗೌಡ ಅವರು ಆಗಮಿಸಿದರು.
ಹೊಸಪೇಟೆ ತಾಲೂಕಿನ ಹಂಪಿ ಉಪ ವಿಭಾಗದ ಡಿವೈಎಸ್ಪಿ ಕಚೇರಿಯ ವಾಹನದಲ್ಲಿ ಆಗಮಿಸಿದ ಎಸ್ಎಸ್ ಕಾಶಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ರನ್ನ ಭೇಟಿಯಾಗಲು ಕಚೇರಿಯತ್ತ ಓಡೋಡಿ ಬಂದರು. ಕೈಯಲ್ಲಿ ಒಂದು ಕವರ್ ಹಿಡಿದುಕೊಂಡ ಡಿವೈಎಸ್ಪಿ, ಎಸ್ಪಿ ಕಚೇರಿಯತ್ತ ಓಡೋಡಿ ಹೋಗುವಾಗ ಮಾಧ್ಯಮದವರು ಕ್ಯಾಮೆರಾ ಕಣ್ಣಿನಲ್ಲಿ ಅವರನ್ನ ಸೆರೆ ಹಿಡಿಯಲು ಹೋಗಿದ್ದಾರೆ. 'ಬ್ಯಾಡ ರೀ ಎನ್ನುತ್ತಲೇ' ಕಚೇರಿಯ ಒಳಗೆ ಓಡೋಡಿ ಬಂದಿದ್ದಾರೆ.
ಬಳ್ಳಾರಿ ವಲಯ ಐಜಿಪಿ ನಂಜುಂಡ ಸ್ವಾಮಿ ಅವರ ಕಿರುಕುಳಕ್ಕೆ ಬೇಸತ್ತು, ರಾಜೀನಾಮೆ ಸಲ್ಲಿಸಿದ ಡಿವೈಎಸ್ಪಿ ಕಾಶಿಗೌಡ ಇಂದು ಎಸ್ಪಿ ಸೈದುಲು ಅಡಾವತ್ ಅವರ ಜತೆ ಚರ್ಚೆಯಲ್ಲಿ ತೊಡಗಿದ್ದಾರೆ. ಭೇಟಿ ಬಳಿಕ ಡಿವೈಎಸ್ಪಿ ಮುಂದಿನ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಇದನ್ನು ಓದಿ: ಹಂಪಿ ಡಿವೈಎಸ್ಪಿ ರಾಜೀನಾಮೆ ವಿಚಾರ: ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದ ಎಸ್ಪಿ