ETV Bharat / city

ವಿದ್ಯಾರ್ಥಿನಿಯರಿಂದ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ

author img

By

Published : Jan 8, 2020, 8:49 PM IST

ಗಣಿನಾಡಿನ ‌ಅಲ್ಲಂ ಸುಮಂಗಳಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿನಿಯರು ಒಂದು ತಿಂಗಳ ಉಚಿತ ತೊಗಲುಗೊಂಬೆಯಾಟ ತರಬೇತಿ ಪಡೆದು, ಇಂದು ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿದರು.

puppet show performance
ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ

ಬಳ್ಳಾರಿ: ಗಣಿನಾಡಿನ ‌ಅಲ್ಲಂ ಸುಮಂಗಳಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿನಿಯರು ಒಂದು ತಿಂಗಳ ಉಚಿತ ತೊಗಲುಗೊಂಬೆಯಾಟ ತರಬೇತಿ ಪಡೆದು, ಇಂದು ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿದರು.

ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ

ಬಳ್ಳಾರಿಯಲ್ಲಿ ಡಿಸೆಂಬರ್ 7 ರಿಂದ ಜನವರಿ 7 ವರೆಗೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು (ವಿಶೇಷ ಘಟಕ ಯೋಜನೆ), ರಾಷ್ಟ್ರೀಯ ಜಾನಪದ ರಂಗೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಯಿತು. ತರಬೇತಿ ಪಡೆದ ವಿದ್ಯಾರ್ಥಿನಿಯರು ಇಂದು ಪ್ರದರ್ಶನ ನೀಡಿದರು. ನಾಡೋಜ ಪ್ರಶಸ್ತಿ ಪುರಸ್ಕೃತರಾದ ಬೆಳಗಲ್ ವೀರಣ್ಣ ಮತ್ತು ಅವರ ತಂಡದ ಸಹಕಾರದಿಂದ ಈ ತರಬೇತಿ ನಡೆದಿದ್ದು ವಿಶೇಷ.‌

ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಸಾಕ್ಷಿ, ಈ ರೀತಿಯ ಕಲೆಯ ಕುರಿತು ನಮಗೆ ತೊಗಲುಗೊಂಬೆ ಕಲಾವಿದರಾದ ಕೆ.ಗಂಗಾಧರ್ ಮತ್ತು ಸಾಯಿ ಕುಮಾರ್ ಅವರಿಂದ ಆಸಕ್ತಿ ಮೂಡಿತು. ಈ ಗೊಂಬೆಯಾಟ ಆಡಿಸುವುದರಿಂದ ಏಕಾಗ್ರತೆಯೂ ಬರುತ್ತೆ. ಒಂದು ತಿಂಗಳ ತರಬೇತಿ ಜೊತೆಗೆ ಉಪಹಾರವನ್ನೂ ಸಹ ನೀಡಿದ್ದಾರೆ. ಈ ಕಲೆಯಲ್ಲಿ ಬಹಳ ಆಸಕ್ತಿಯಿದ್ದು, ಇದನ್ನು ಮುಂದುವರಿಸಬೇಕು ಎಂದರು.

ತೊಗಲುಗೊಂಬೆಯಾಟ ಕಲಾವಿದ ಕೆ.ಗಂಗಾಧರ್ ಮಾತನಾಡಿ, ನಾಡೋಜ ಬೆಳಗಲ್ ವೀರಣ್ಣ ಅವರ ಸಲಹೆ, ಸೂಚನೆ ಮೇರೆಗೆ ಕಳೆದೊಂದು ತಿಂಗಳಿನಿಂದ ಈ ವಿದ್ಯಾರ್ಥಿನಿಯರಿಗೆ ಸಂಜೆ 4 ರಿಂದ 6 ಗಂಟೆವರೆಗೆ ತೊಗಲುಗೊಂಬೆಯಾಟದ ಬಗ್ಗೆ ಮಾಹಿತಿ ಮತ್ತು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದೇವೆ. ಪ್ರಥಮ ಬಾರಿಗೆ ಹೆಣ್ಣುಮಕ್ಕಳಿಗೆ ಹೇಳಿಕೊಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ನಂತರ ಮಾತನಾಡಿದ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಡಾ. ಗೋವಿಂದರಾಜು, ನಾಡೋಜ ಬೆಳಗಲ್ ವೀರಣ್ಣನವರು ಹೆಣ್ಣುಮಕ್ಕಳಿಗೆ ತೊಗಲುಗೊಂಬೆಯಾಟ ಹೇಳಿಕೊಟ್ಟಿರುವುದು ಬಹಳ ಸಂತೋಷದ ವಿಚಾರ. ನಶಿಸಿ ಹೋಗುವ ಕಲೆಯನ್ನು ಉಳಿಸುವ ಕೆಲಸವನ್ನು ಬೆಳಗಲ್ ವೀರಣ್ಣ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

Intro:
kn_bly_05_070120_splthogalugombeAttavideo__ka10007

kn_bly_05_070120_splthogalugombeAttabyte__ka10007

15 ವಿದ್ಯಾರ್ಥಿನಿಯರಿಂದ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ.
ಇವರ ತರಬೇತಿ, ಕಲಿಕೆ ಹೇಗಿದೆ ಒಮ್ಮೆ ನೋಡಿ,
ಈ ಸ್ಟೋರಿನಾ...!

ವಿದ್ಯಾರ್ಥಿನಿಯರೆಂದು ಬರೀ ಓದುವ, ಬರೆಯುವುದಕ್ಕೆ, ಮನೆಕೆಲಸ ಮಾಡಲು ಮಾತ್ರ ಸಿಮೀತ ಎನ್ನುವ ಅಂಶಗಳನ್ನು ತಿಳಿದಿರಬಹುದು, ನೋಡಿರಬಹುದು ಆದ್ರೆ ಗಣಿನಾಡು ಬಳ್ಳಾರಿಯಲ್ಲಿ ‌ಅಲ್ಲಂ ಸುಮಂಗಳಮ್ಮ ಮಹಿಳಾ ಪದವಿ ಪೂರ್ವ ವಿದ್ಯಾಲಯದ 15 ವಿದ್ಯಾರ್ಥಿನಿಯರಿಂದ ಒಂದು ತಿಂಗಳ ಉಚಿತ ತೊಗಲುಗೊಂಬೆಯಾಟ ತರಬೇತಿ ಪಡೆದು, ನಾಳೆ ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಲು ಮುಂದಾಗಿರುವು ವಿಶೇಷವಾಗಿದೆ

ಬೈಟ್ :-

೧.) ಯು. ರೇಣುಕ ( ನೀಲಿ ವೇಲ್ ಹಾಕಿದವರು)
ತೊಗಲುಗೊಂಬೆಯಾಟ
ತರಬೇತಿ ಪಡೆದ ವಿದ್ಯಾರ್ಥಿನಿ.

೨.) ಸಾಕ್ಷಿ ( ಕಾಫಿ ವೇಲ್ ಹಾಕಿದವರು )
ತೊಗಲುಗೊಂಬೆಯಾಟ
ತರಬೇತಿ ಪಡೆದ ವಿದ್ಯಾರ್ಥಿನಿ.

೩.) ಕೆ.ಗಂಗಾಧರ್ ( ಕೆಂಪು ಅಂಗಿ ಹಾಕಿದವರು)
ಕಲಾವಿದ
ತೊಗಲುಗೊಂಬೆಯಾಟ

೪.) ಡಾ.ಬಿ.ಗೋವಿಂದರಾಜಲು. ( ಬಿಳಿ ಅಂಗ ಹಾಕಿದವರು)
ಪ್ರಾಂಶುಪಾಲರು.
ಪದವಿ ಪೂರ್ವ ಕಾಲೇಜ್,
ಅಲ್ಲಂ ಸುಮಂಗಳಮ್ಮ
ಸ್ಮಾರಕ ಮಹಿಳಾ ಮಹಾವಿದ್ಯಾಲಯ
ಬಳ್ಳಾರಿ

Body:.

ಗಣಿನಾಡು ಬಳ್ಳಾರಿಯಲ್ಲಿ ಡಿಸೆಂಬರ್ 7 ರಿಂದ ಜನವರಿ 7 ವರಗೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ( ವಿಶೇಷ ಘಟಕ ಯೋಜನೆ ) ರಾಷ್ಟ್ರೀಯ ಜಾನಪದ ರಂಗೋತ್ಸವ ಅಂಗವಾಗಿ ಒಂದು ತಿಂಗಳ ತರಬೇತಿ ನಂತರ ಬಾಪೂಜಿ ಪ್ರದರ್ಶನ ತೊಗಲುಗೊಂಬೆಯಾದ ಪ್ರದರ್ಶನ ವಿದ್ಯಾರ್ಥಿನಿಯರಿಂದ ನಡೆಯುತ್ತದೆ. ಇದು ಗಣಿನಾಡಿನ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಬೆಳಗಲ್ ವೀರಣ್ಣ ಮತ್ತು ಅವರ ತಂಡದಿಂದ ಸಹಕಾರದಿಂದ ಈ ತೊಗಲುಗೊಂಬೆ ತರಬೇತಿ ನಡೆಯುತ್ತಿದೆ ನಡೆದಿದ್ದು ವಿಶೇಷ ವಾಗಿದೆ.‌

ಈಟಿವಿ ಭಾರತದೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಯು.ರೇಣುಕ ತೊಗಲುಗೊಂಬೆಯಾಟ ಅಂದ್ರೇನೆ ಗೊತ್ತಿರಲಿಲ್ಲ, ಅದನ್ನು ತಿಳಿದುಕೊಂಡಿರುವೆ‌ ಹಾಗೇ ವೇದಿಕೆ ಹಾಕುವುದು ಹೇಗೆ ? ಗೊಂಬೆಗಳ ತಯಾರಿಕೆ ಬಗ್ಗೆ, ಆಡಿಸುವ ರೀತಿ ತಿಳಿದುಕೊಂಡಿದ್ದನೆ, ಸಂಜೆ‌ 4 ಗಂಟೆಯಿಂದ 6 ಗಂಟೆವರೆಗೆ ಕಲಿಯುತ್ತಿದ್ದೆವು ಎಂದರು.

ನಂತರ ಮಾತನಾಡಿದ ವಿದ್ಯಾರ್ಥಿನಿ ಸಾಕ್ಷಿ ಈ ತರ ಕಲೆ ಇದೆ ಎಂದು ತಿಳಿಕೊಂಡಿದ್ದೆವೆ. ತೊಗಲುಗೊಂಬೆ ಕಲಾವಿದರಾದ ಕೆ.ಗಂಗಾಧರ್ ಮತ್ತು ಸಾಯಿ ಕುಮಾರ್ ಅವರಿಂದ ಆಸಕ್ತಿ ಬಂದಿದ್ದು‌. ಈ ಗೊಂಬೆಯಾಟ ಆಡಿಸುವುದರಿಂದ ಏಕಾಗ್ರತೆ ಸಹ ಬರುತ್ತೆ ಎಂದರು. ಒಂದು ತಿಂಗಳ ತರಬೇತಿ ಜೊತೆಗೆ ಉಪಹಾರವನ್ನು ಸಹ ನೀಡಿದ್ದಾರೆ. ಈ ಕಲೆಯಲ್ಲಿ ಬಹಳ ಆಸಕ್ತಿ ಇದೆ. ಅದನ್ನು ಮುಂದುವರೆಸಬೇಕು ಎಂದರು.

ನಂತರ ಮಾತನಾಡಿ ತೊಗಲುಗೊಂಬೆಯಾಟ ಕಲಾವಿದ ಕೆ.ಗಂಗಾಧರ್ ಅವರು ನಾಡೋಜ ಬೆಳಗಲ್ ವೋರಣ ಅವರ ನೇತೃತ್ವದಲ್ಲಿ ಸಲಹೆ, ಸೂಚಬೆಯ ಮೇರೆಗೆ ಕಳೆದ ಒಂದು ತಿಂಗಳಿನಿಂದ ಈ ವಿದ್ಯಾರ್ಥಿನಿಯರಿಗೆ ಸಂಜೆ 4 ರಿಂದ 6 ಗಂಟೆವರೆಗೆ ತೊಗಲುಗೊಂಬೆಯಾಟದ ಬಗ್ಗೆ ಮಾಹಿತಿ ಮತ್ತು ಪ್ರಾಯೋಗಿಕವಾಗಿ 15 ವಿದ್ಯಾರ್ಥಿನಿಯರಿಗೆ ಹೇಳಿಕೊಟ್ಟಿದ್ದೆವೆ. ಇದು ಪ್ರಥಮ ಬಾರಿಗೆ ಹೆಣ್ಣುಮಕ್ಕಳಿಗೆ ತೊಗಕುಗೊಂಬೆಯಾಟ ಹೇಳಿಕೊಡುತ್ತಿರುವುದು ಹೆಮ್ಮೆಯ ವಿಶೇಷ ಎಂದರು.

ನಂತರ ಮಾತನಾಡಿದ ಪದವಿ ಪೂರ್ವ ಕಾಲೆಜ್ ಪ್ರಾಂಶುಪಾಲರಾದ ಡಾ. ಗೋವಿಂದರಾಜು ನಾಡೋಜ ಬೆಳಗಲ್ ವೀರಣನವರು ಹೆಣ್ಣುಮಕ್ಕಳಿಗೆ ತೊಗಲುಗೊಂಬೆಯಾಟ ಹೇಳಿಕೊಡುವುದ ಬಹಳ ಸಂತೋಷವಾಗಿದೆ. ನಶಿಸಿ ಹೋಗುವ ಕಲೆಯನ್ನು ಉಳಿಸುವ ಕೆಲಸವನ್ನು ವಿದ್ಯಾರ್ಥಿನಿಯರಿಗೆ ಹೇಳಿಕೊಟ್ಟಿರುವ ನಾಡೋಜ ಬೆಳಗಲ್ ವೀರಣ್ಣ ಅವರಿಗೆ ಧನ್ಯವಾದ ತಿಳಿಸಿದರು.

Conclusion:ಒಟ್ಟಾರೆಯಾಗಿ 15 ವಿದ್ಯಾರ್ಥಿನಿಯರಿಗೆ, ಒಂದು ತಿಂಗಳಲ್ಲಿ ತೊಗಲುಗೊಂಬೆಯಾಟ ತರಬೇತಿ ನೀಡಿ, ಆ ವಿದ್ಯಾರ್ಥಿನಿಯರಿಂದ "ಬಾಪೂಜಿ" ತೊಗಲುಬೊಂಬೆಯಾಟ ಪ್ರದರ್ಶನ ನೀಡಲು ಮುಂದಾಗಿದ್ದಾರೆ. ಈ ವಿದ್ಯಾರ್ಥಿನಿಯರು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ಧಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.