ETV Bharat / city

ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ: ಶೋಧಕಾರ್ಯ ಆರಂಭ - LLC Subcanal

ಕುರುಗೋಡು ತಾಲೂಕಿನ ಬಸವಪುರ ಗ್ರಾಮದ ಬಳಿ ಹರಿಯುವ ತುಂಗಭದ್ರಾ ಜಲಾಶಯದ ಎಲ್​ಎಲ್​ಸಿ ಉಪಕಾಲುವೆಗೆ ಬಿದ್ದು, ಬಾಲಕನೋರ್ವ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

A boy washed in the canal in Bellary
ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ: ಶೋಧಕಾರ್ಯ ಆರಂಭ
author img

By

Published : Sep 24, 2020, 4:18 PM IST

ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಬಸವಪುರ ಗ್ರಾಮದ ಬಳಿ ಹರಿಯುವ ತುಂಗಭದ್ರಾ ಜಲಾಶಯದ ಎಲ್​ಎಲ್​ಸಿ ಉಪಕಾಲುವೆಗೆ ಬಿದ್ದು, ಬಾಲಕನೋರ್ವ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ: ಶೋಧಕಾರ್ಯ ಆರಂಭ

ತನುಷ್ (9) ಕಾಲುವೆಯಲ್ಲಿ ಕೊಚ್ಚಿಹೋದ ಬಾಲಕ. ತನುಷ್​ ತಮ್ಮ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ಆಯತಪ್ಪಿ ಪಕ್ಕದಲ್ಲಿರುವ ಕಾಲುವೆಗೆ ಬಿದ್ದಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಬಾಲಕನ ಪೋಷಕರು ಕೂಲಿ ಕೆಲಸಕ್ಕೆ ಹೋದಾಗ ಘಟನೆ‌ ನಡೆದಿದೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಕುರುಗೋಡು ಗೃಹರಕ್ಷಕ ದಳದ ಸಿಬ್ಬಂದಿ ಕೊಚ್ಚಿ ಹೋದ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.