ETV Bharat / city

22 ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಎಷ್ಟು ಗೊತ್ತೇ? - ನೆರೆ ಪರಿಹಾರ

ರಾಜ್ಯದ 22 ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 100ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು ಎಂದು ಗೋಣಿ ಬಸಪ್ಪ ಒತ್ತಾಯಿಸಿದರು.

100-farmers-suicide-in-karnataka
author img

By

Published : Oct 11, 2019, 11:27 PM IST

ಬಳ್ಳಾರಿ: ಕರ್ನಾಟಕದ 22 ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 100ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 103 ತಾಲೂಕುಗಳಲ್ಲಿ ಅತಿವೃಷ್ಠಿಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾಯ ಶ್ರೀಧರಗಡ್ಡೆ, ಕೊಳಗಲ್ಲು, ಹಡಗಲಿ ತಾಲೂಕಿನಲ್ಲಿ ಮೂವರು ಮರಣ ಹೊಂದಿದ್ದಾರೆ. ರೈತರು ಹಾಗೂ ಕೂಲಿ ಕಾರ್ಮಿಕರು ಸಂಪೂರ್ಣವಾಗಿ ಬೀದಿಗೆ ಬಿದ್ದಿದ್ದಾರೆ. ಇದರಿಂದಾಗಿ ರಾಜ್ಯ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿ ಮತ್ತು ಚಿಕ್ಕಮಗಳೂರಿನಿಂದ ಹಮ್ಮಿಕೊಂಡಿರುವ ಬೈಕ್ ರ‌್ಯಾಲಿ ಅಕ್ಟೊಬರ್ 14ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ತಲುಪಲಿದೆ. ಅಂದೇ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗೋಣಿಬಸಪ್ಪ ಮಾತನಾಡಿದರು.

ಕತ್ತಲಲ್ಲಿ ದಿನ ದೂಡುತ್ತಿರುವ ಸಂತ್ರಸ್ತರ ಬದುಕನ್ನು ಅರಿತುಕೊಳ್ಳುವ ಶಕ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿಲ್ಲವೇ ಎಂದು ಪ್ರಶ್ನಿಸಿದ ಅವರು, ಬಳ್ಳಾರಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮೆಣಸಿನಕಾಯಿ, ಹತ್ತಿ, ಕಡಲೆ ಬೆಳೆ ಸಂಪೂರ್ಣ ಹಾನಿಯಾಗಿದೆ. ವೈಜ್ಞಾನಿಕವಾಗಿ ರೈತರಿಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ಪರಿಶೀಲಿಸಿ ಪರಿಹಾರ ನೀಡಬೇಕು. ರೈತ ಆತ್ಮಹತ್ಯೆ ಮಾಡಿಕೊಂಡರೇ ಆ ಕುಟುಂಬಕ್ಕೆ ₹ 25 ಲಕ್ಷ, ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Intro:
ಕರ್ನಾಟಕ ರಾಜ್ಯದ 22 ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 100 ಕ್ಕಿಂತ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಶ್ರೀಧರಗಡ್ಡೆ, ಕೊಳಗಲ್ಲು, ಹಡಗಲಿ ತಾಲೂಕಿನಲ್ಲಿ ರೈತರು ಬೆಳೆ ಹಾನಿ, ಅತಿವೃಷ್ಟಿಯಿಂದ, ಸಾಲಭಾದಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ ತಿಳಿಸಿದರು.

Body:.

ನಗರದ ಖಾಸಗಿ ಹೋಟಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಣಿ ಬಸಪ್ಪ ಅವರು
ರಾಜ್ಯದ 23 ಜಿಲ್ಲೆ, 103 ತಾಲೂಕುಗಳಲ್ಲಿ ಪ್ರವಾಸ ಮತ್ತು ಅತಿವೃಷ್ಠಿಯಾಗಿದೆ ಎಂದರು. ರೈತರು ಮತ್ತು ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಸಂಪೂರ್ಣವಾಗಿ ಬೀದಿಗೆ ಬಿದ್ದಿದ್ದಾರೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಣೆಯ ಮಾಡಬೇಕೆಂದರು. ಇದನ್ನು ಮಾಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದರು.

ಪ್ರವಾಸ ಮತ್ತು ಅತಿವೃಷ್ಠಿಗೆ ಸಂಭಂದಿಸಿದಂತೆ ಉಡುಪಿ ಮತ್ತು ಚಿಕ್ಕಮಗಳೂರುದಿಂದ ಬೈಕ್ ರ್ಯಾಲಿ ಬೆಂಗಳೂರಿಗೆ ಬರ್ತಾ ಇದೆ. ಎರಡು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲು ಹಾಗೇ ಅಕ್ಟೊಬರ್ 14ನೇ ತಾರೀಖು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆ ನಡೆಸಿತ್ತದೆ ಎಂದು ಹೇಳಿದರು.
ನೆರೆಹಾವಳಿ ಸಂಭಂದಿಸಿದಂತೆ ಜನರ ಬದುಕನ್ನು ಅರ್ಥಮಾಡಿಕೊಳ್ಳುವ ಶಕ್ತಿಗೆ ಏಕೆ ? ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಪ್ರಶ್ನೆ ಮಾಡಿದರು.

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 25 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಒಂದು ಎಕರೆ ಮೆಣಸಿನಕಾಯಿ 30 ಸಾವಿರ, ಹತ್ತಿಗೆ ಎಕರೆಗೆ 18 ಸಾವಿರ ಖರ್ಚುನು ರೈತರು ಮಾಡಿಕೊಂಡಿದ್ದಾರೆ. ಆದ್ರೇ ಭೂಮಿ ಒಣಗಿನ ನಂತರ ಕಡ್ಲೆ, ಅವಾಜಿ ಬೆಳೆಯಬಹುದು ಎಂದರು.

ವೈಜ್ಞಾನಿಕವಾಗಿ ರೈತರಿಗೆ ಎಷ್ಟು ನಷ್ಟವಾಗಿದೆ ಅದರಷ್ಟೆ ಹಣವನ್ನು ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.

ಪರಿಹಾರ ನೀಡಬೇಕು :-

ರೈತ ಆತ್ಮಹತ್ಯೆ ಮಾಡಿಕೊಂಡರೇ ರೈತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ‌ನೆರೆಹವಾಳಿಯಲ್ಲಿ ಮನೆಕಳೆದುಕೊಂಡ ಜನರ ಒಂದು ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕೆಂದರು.

100 ಕ್ಕಿಂತ ಹೆಚ್ಚು ರೈತರು ಸಾವು :-

ಕರ್ನಾಟಕ ರಾಜ್ಯದ 22 ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 100 ಕ್ಕಿಂತ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಶ್ರೀಧರಗಡ್ಡೆ, ಕೊಳಗಲ್ಲು, ಹಡಗಲಿ ತಾಲೂಕಿನಲ್ಲಿ ಮೂವರು ಮರಣ ಹೊಂದಿದ್ದಾರೆ.

ತೋಟಗಾರಿಕೆ ಬೆಳೆಗೆ ಎಕರೆಗೆ 2000 ಸಾವಿರ ರೂಪಾಯಿ, ನೀರಾವರಿ ಬೆಳೆಗೆ ಎಕರೆಗೆ 1000 ಸಾವಿರ ಸರ್ಕಾರ ನೀಡುತ್ತಾರೆ ಅದು ರೈತರಿಗೆ ಸಾಲುವುದಿಲ್ಲ ಅದರ ಬದಲಿಗೆ ಖರ್ಚು ಮಾಡಿದ ಸಂಪೂರ್ಣ ಮಾಡಬೇಕೆಂದು ತಿಳಿಸಿದರು.

Conclusion:ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಗೋಣಿಬಸಪ್ಪ, ಕೃಷ್ಣಪ್ಪ, ಬಿ.ವಿ ಎರಿಸ್ವಾಮಿ, ಜೆ.ನಾಗರಾಜ, ಮಾರಣ್ಣ, ಈಸ್ವರ್, ವಿಜಯ ಕುಮಾರ್ ಮತ್ತು ಭಾಗವಹಿಸಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.