ETV Bharat / city

ಗೌಪ್ಯತೆ ಕಾಪಾಡದೇ ಮತದಾನ : ಇಬ್ಬರು ಗ್ರಾ.ಪಂ. ಸದಸ್ಯರ ಮತಗಳು ತಿರಸ್ಕೃತ - ಗೌಪ್ಯತೆ ಕಾಪಾಡದೇ ಮತದಾನ

ಗೌಪ್ಯತೆ ಕಾಪಾಡದೇ ಮತದಾನ ಮಾಡಿದ ಇಬ್ಬರು ಗ್ರಾಮ ಪಂಚಾಯತ್​ ಸದಸ್ಯರ ಮತಗಳನ್ನು ತಿರಸ್ಕರಿಸಿರುವುದಾಗಿ ಬೆಳಗಾವಿ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ್​​ ಪಕ್ಷದ ಏಜೆಂಟರಿಗೆ ತಿಳಿಸಿದರು.

voted-without-privacy-two-votes-rejected
ಗೌಪ್ಯತೆ ಕಾಪಾಡದೇ ಮತದಾನ
author img

By

Published : Dec 14, 2021, 10:14 AM IST

ಬೆಳಗಾವಿ : ಪರಿಷತ್ ಚುನಾವಣೆ ಮತದಾನದ ಸಂದರ್ಭದಲ್ಲಿ ಗೌಪ್ಯತೆ ಕಾಪಾಡದೇ ಮತದಾನ ಮಾಡಿದ ಆರೋಪದ ಹಿನ್ನೆಲೆ ಮತ‌ ಎಣಿಕೆ ಪ್ರಕ್ರಿಯೆಗೂ ಮುನ್ನ ಎರಡು ಮತಗಳನ್ನು ರಿಜೆಕ್ಟ್ ಮಾಡಲಾಯಿತು.

ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್​ಡಿಪಿಯು ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮತ‌ ಎಣಿಕೆ ಪ್ರಕ್ರಿಯೆಗೂ ಮುನ್ನವೇ ಗೌಪ್ಯತೆ ಕಾಪಾಡದೇ ಮತದಾನ ಮಾಡಿದ ಎರಡು ಮತಗಳನ್ನು ತಿರಸ್ಕರಿಸಿದ ಕುರಿತು ಪಕ್ಷದ ಏಜೆಂಟರಿಗೆ ಬೆಳಗಾವಿ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.

ಗೋಕಾಕ್ ತಾಲೂಕಿನ ಬಡಿಗವಾಡ ಗ್ರಾಮ ಪಂಚಾಯತ್ ಇಬ್ಬರು ಸದಸ್ಯರು ಗೌಪ್ಯತೆ ಕಾಪಾಡದೇ ಮತದಾನ ಮಾಡಿರುವ ಆರೋಪ ಕೇಳಿಬಂದಿದೆ‌. ಚುನಾವಣಾ ಏಜೆಂಟರಿಗೆ ತೋರಿಸಿ ಮತ ಹಾಕಿದ ಮತದಾನ ಗೌಪ್ಯತೆ ಉಲ್ಲಂಘನೆ ಆರೋಪದಡಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಚುನಾವಣಾ ಏಜೆಂಟ್, ಮತಗಟ್ಟೆ ಸಿಬ್ಬಂದಿ ಸಮ್ಮುಖದಲ್ಲಿ ಆ ಎರಡು ಮತಪತ್ರಗಳನ್ನು ಅಸಿಂಧು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.