ಬೆಳಗಾವಿ: ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲಿನ ಸಿಬ್ಬಂದಿ ಮಧ್ಯಾಹ್ನದ ಊಟವನ್ನ ಬೆಳಗ್ಗೆಯೇ ನೀಡಿದ್ದರಿಂದ ಶಾಕ್ ಆಗಿದ್ದಾರೆ.
ಜೈಲಿನ ನಿಯಮದಂತೆ ಮಧ್ಯಾಹ್ನದ ಊಟವನ್ನು ಇಂದು ಬೆಳಗ್ಗೆ 10.30ಕ್ಕೆ ಕೊಟ್ಟಿದ್ದಾರೆ. ಈ ವೇಳೆ, ಊಟದ ತಟ್ಟೆ ನೋಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಶಾಕ್ ಆಗಿದ್ದಾರೆ. ಬೆಳಗಿನ ಊಟದಲ್ಲಿ ಚಪಾತಿ, ಕಾಳು ಪಲ್ಯ, ಅನ್ನ - ಸಾಂಬಾರ್ ನೀಡಲಾಗಿದೆ.
ಈಗಾಗಲೇ ಹಿಂಡಲಗಾ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿನಯ್ ಕುಲಕರ್ಣಿ ವಿಚಾರಣೆ ನಡೆಸಲಾಗುತ್ತಿದೆ.