ETV Bharat / city

ಬಿಜೆಪಿಗೆ ಲಖನ್​ ಜಾರಕಿಹೊಳಿ ಅಗತ್ಯವಿಲ್ಲ: ಉಮೇಶ್ ಕತ್ತಿ

ಲಖನ್ ಜಾರಕಿಹೊಳಿ ಬಿಜೆಪಿಗೆ ಸೇರಿಲ್ಲ, ಹೀಗಾಗಿ ಪಕ್ಷಕ್ಕೆ ಅವರ ಅಗತ್ಯವಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರು ಹಾಗೂ ಸಮರ್ಪಕ ಕಾರ್ಯಕರ್ತರು ಇರುವುದರಿಂದ ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಲಖನ್ ಪ್ರಚಾರ ಆಗತ್ಯವಿಲ್ಲವೆಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದರು.

ಉಮೇಶ್ ಕತ್ತಿ
ಉಮೇಶ್ ಕತ್ತಿ
author img

By

Published : May 28, 2022, 12:51 PM IST

ಅಥಣಿ(ಬೆಳಗಾವಿ): ಲಖನ್ ಜಾರಕಿಹೊಳಿ ಪಕ್ಷೇತರ ಬೆಂಬಲಿತ ವಿಧಾನ ಪರಿಷತ್ ಸದಸ್ಯರು. ಭಾರತೀಯ ಜನತಾ ಪಕ್ಷಕ್ಕೆ ಅವರ ಅಗತ್ಯವಿಲ್ಲ, ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರು ಹಾಗೂ ಸಮರ್ಪಕ ಕಾರ್ಯಕರ್ತರು ಇರುವುದರಿಂದ ಈ ಬಾರಿಯ ವಿಧಾನ ಪರಿಷತ್ ಚುನಾವಣೆಗೆ ಅವರ ಪ್ರಚಾರ ಆಗತ್ಯವಿಲ್ಲವೆಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದರು.

ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಅವರು, ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಬರಲಿ, ಬರೋರಿಗೆ ಬೇಡ ಎನ್ನಲ್ಲ. ಅವರು ಪಕ್ಷಕ್ಕೆ ಬರುವುದರಿಂದ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅವರು ಬಿಜೆಪಿಗೆ ಸೇರಿಲ್ಲ, ಹೀಗಾಗಿ ಅವರ ಬೆಂಬಲದ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ, ಯಾರ ಬೆಂಬಲವೂ ನಮಗೆ ಬೇಡ ಎಂದು ಟಾಂಗ್ ನೀಡಿದರು.

ಲಖನ್​ ಜಾರಕಿಹೊಳಿಗೆ ಟಾಂಗ್​ ಕೊಟ್ಟ ಆಹಾರ ಸಚಿವ ಉಮೇಶ್ ಕತ್ತಿ

ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಆರ್ಯರಾ, ದ್ರಾವಿಡರಾ ಅನ್ನೋದನ್ನು ಹೇಳಲಿ: ಸಿಎಂ ಬೊಮ್ಮಾಯಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.