ಬೆಳಗಾವಿ: ಜಿಲ್ಲೆಯ ಗಡಿ ಭಾಗದಲ್ಲಿ ಸರಿಯಾದ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ, ಮಹಾರಾಷ್ಟ್ರದ ಆಸ್ಪತ್ರೆಗೆ ತೆರಳಬೇಕಾದ ರಾಜ್ಯದ ಜನರಿಗೆ ತೊಂದರೆ ಉಂಟಾಗಿದ್ದು, ಜನರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ವೇಳೆ ಮಾತನಾಡಿದ ಕನ್ನಡಿಗನೊಬ್ಬ, ದೊಡ್ಡವರು ಬಂದರೆ ಸೆಲ್ಯೂಟ್ ಹೊಡೆದು ಮಹಾರಾಷ್ಟ್ರ ಪ್ರವೇಶಕ್ಕೆ ಅವಕಾಶ ಕೊಡ್ತಾರೆ. ನಮ್ಮಂಥ ಬಡವರು ಬಂದರೆ ನಿಲ್ಲಿಸಿ ವಿಚಾರಣೆ ಮಾಡ್ತಾರೆ. ಇದೆಂಥಾ ಸರ್ಕಾರ?, ಇವರೆಂಥಾ ನಿಯಮ ಮಾಡ್ತಾರೆ? ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್‌ಪೊಸ್ಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ರೋಗಿಯೊಬ್ಬ ಮೀರಜ್ನಲ್ಲಿ ಅಡ್ಮಿಟ್ ಮಾಡಿದ್ದೇನೆ. ನಾನು ಅಲ್ಲಿಗೆ ಹೋಗಬೇಕಿದೆ. ಕೇವಲ 10 ಕಿ.ಮೀ ಪ್ರಯಾಣಕ್ಕೆ ಆಟೋದವರು ನೂರಾರು ರೂಪಾಯಿ ವಸೂಲಿ ಮಾಡ್ತಾರೆ. ನಮ್ಮಂಥವರು ಎಲ್ಲಿಗೆ ಹೋಗ್ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಮಾಗಡಿ ಶಾಸಕ ಮಂಜುನಾಥ್ 'ಭೂ ಕಬಳಿಕೆ' ಆರೋಪ
ಬಸ್ ಇಲ್ಲದೇ ಗಡಿಯಲ್ಲಿ ಪ್ರಯಾಣಿಕರ ಪರದಾಟ, ಬಸ್ ಸಿಗದೇ ರೋಗಿಗಳ ಬಳಿ ಹೋಗಲು ಆಗುತ್ತಿಲ್ಲ. ಇದೆಲ್ಲ ರಾಜಕಾರಣಿಗಳ ಕೈವಾಡ. ನಮ್ಮಂಥ ಬಡವರಿಗೆ ಮಾತ್ರ ಈ ಕಷ್ಟಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.