ETV Bharat / city

ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಎಸ್​ಡಿಆರ್​ಎಫ್ ಸಿಬ್ಬಂದಿ - ಹುಕ್ಕೇರಿ ತಾಲೂಕು ಶಂಕೇಶ್ವರ ಪಟ್ಟಣ

ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಬೆಳಗಾವಿಯ ಎಸ್​ಡಿಆರ್​ಎಫ್ ಸಿಬ್ಬಂದಿ ಮಾನವೀಯತೆ ಮೆರೆದರು.

Belgaum
ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಎಸ್​ಡಿಆರ್​ಎಫ್ ಸಿಬ್ಬಂದಿ
author img

By

Published : Jun 23, 2021, 11:39 AM IST

ಬೆಳಗಾವಿ: ವಾಯುವಿಹಾರಕ್ಕೆ ಹೋದ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಎಸ್​ಡಿಆರ್​ಎಫ್ ಸಿಬ್ಬಂದಿ ಮಾನವೀಯತೆ ಮೆರೆದರು.

ರಸ್ತೆ ಮೇಲೆ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಎಸ್​ಡಿಆರ್​ಎಫ್ ಸಿಬ್ಬಂದಿ

ಹುಕ್ಕೇರಿ ತಾಲೂಕಿನ ಶಂಕೇಶ್ವರ ಪಟ್ಟಣದ ನಿವಾಸಿ ರಾಜು ಮಟ್ಟೇಕರ ಬೆಳಗಾವಿಯ ಶಹಾಪುರದ ಸಂಬಂಧಿಯ ಮನೆಗೆ ಬಂದಿದ್ದರು. ಇಂದು ಬೆಳಗ್ಗೆ 5 ಗಂಟೆಯ ಹೊತ್ತಿಗೆ ವಾಯುವಿಹಾರಕ್ಕೆ ಹೋದಾಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಾಜು ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ದಾಖಲಿಸಿರಲಿಲ್ಲ.

ಈ ವೇಳೆ ರಾತ್ರಿ ಪಾಳಿ ಮುಗಿಸಿ ಬೆಳಗ್ಗೆ ಮನೆಗೆ ತೆರಳುತ್ತಿದ್ದ ಬೆಳಗಾವಿಯ ಎಸ್​ಡಿಆರ್​ಎಫ್ ನೌಕರ ಬಸಪ್ಪ ಬರಬಳ್ಳಿ ರಸ್ತೆ ಮೇಲೆ ನರಳಾಡುತ್ತಿದ್ದ ರಾಜು ಅವರನ್ನು ಗಮನಿಸಿದ್ದಾರೆ. ತಕ್ಷಣ ಅವರಿಗೆ ನೀರು ಕುಡಿಸಿ, ನಂತರ ಆ್ಯಂಬುಲೆನ್ಸ್​​​​​​​ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಗಾಯಾಳು ರಾಜು ಮಟ್ಟೆಕರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಇದನ್ನೂ ಓದಿ: ಐಹೊಳೆಯ ಈ ಮನೆಯಲ್ಲಿವೆ 150 ವರ್ಷ ಹಳೇಯ ತಾಳೆ ಗರಿಯ ಗ್ರಂಥಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.