ETV Bharat / city

ಬೆಳಗಾವಿ: ಅನ್ಯಕೋಮಿನ ಸ್ನೇಹಿತೆಯರ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಯತ್ನ - belagavi latest news

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಅನ್ಯಕೋಮಿನ ಯುವತಿಯರ ಜೊತೆ ಮಾತನಾಡುತ್ತಾ ನಿಂತಿದ್ದ ಯುವಕನ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಇದೇ ವೇಳೆ ಯುವತಿಯರನ್ನು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

some are Attempt assault on young boy who talking with girls at belagavi
ಅನ್ಯಕೋಮಿನವರ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆಗೆ ಯತ್ನ: ಯುವತಿಯರಿಗೆ ತರಾಟೆ!
author img

By

Published : Oct 19, 2021, 1:14 PM IST

Updated : Oct 19, 2021, 4:02 PM IST

ಬೆಳಗಾವಿ: ತರಗತಿ ಮುಗಿದ ಬಳಿಕ ಬಸ್ ನಿಲ್ದಾಣದಲ್ಲಿ ಸ್ನೇಹಿತೆಯರ ಜೊತೆಗೆ ಮಾತ‌ನಾಡುತ್ತಾ ನಿಂತಿದ್ದ ಯುವಕನ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಅನ್ಯಕೋಮಿನ ಯುವತಿಯರ ಜೊತೆಗೆ ಯುವಕನೋರ್ವ ಮಾತನಾಡುತ್ತಾ ನಿಂತಿದ್ದ. ಇದನ್ನು ಗಮನಿಸಿ ಸ್ಥಳಕ್ಕೆ ಬಂದ ಕೆಲವರು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದೇ ವೇಳೆ, ಯುವಕ ಹಾಗೂ ಯುವತಿಯರ ಜೊತೆಗೂ ವಾಗ್ವಾದ ನಡೆಸಿದ್ದಾರೆ.

ಅನ್ಯಕೋಮಿನ ಸ್ನೇಹಿತೆಯರ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಯತ್ನ

ಒಂದೆಡೆ ಯುವಕನಿಗೆ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಯುವತಿಯರಿಬ್ಬರನ್ನು ತರಾಟೆಗೆ ತೆಗೆದುಕೊಂಡರು. ಮುಖಕ್ಕೆ ಕಟ್ಟಿದ್ದ ಶಾಲ್​​ ತೆಗೆಸಿ ನಿನ್ನ ಹೆಸರೇನು? ಅಡ್ರಸ್ ಏನು? ಎಂದೆಲ್ಲಾ ಕೇಳಿದ್ದಾರೆ. 'ನಾವು ಸ್ನೇಹಿತರು' ಎಂದು ಹೇಳಿದರೂ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ: ರಾಯಚೂರು: ಮುಂಜಾನೆ ವಾಕಿಂಗ್‌ ವೇಳೆ ವಾಹನ‌ ಡಿಕ್ಕಿಯಾಗಿ ವ್ಯಕ್ತಿ ಸಾವು

ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಾಜಿಸಂಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Last Updated : Oct 19, 2021, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.