ಚಿಕ್ಕೋಡಿ : ರಾಯಬಾಗ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಬೇಜವಾಬ್ದಾರಿತನಕ್ಕೆ ರಾಯಬಾಗ ಪೊಲೀಸರು ಹೈರಾಣಾಗಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಹಶೀಲ್ದಾರ್ ಕಚೇರಿಯಲ್ಲಿ ನೋಂದಣಿ, ಖಜಾನೆ, ಆಹಾರ ಇಲಾಖೆಯೂ ಸೇರಿ ಪ್ರಮುಖ ಕಚೇರಿಗಳಿವೆ. ರಾತ್ರಿಯಿಡೀ ಕಚೇರಿಗೆ ಬೀಗ ಹಾಕದೆ ಸಿಬ್ಬಂದಿ ಬೇಜವಾಬ್ದಾರಿ ತೋರುತ್ತಿದ್ದಾರೆ.
ರಾತ್ರಿ ವೇಳೆ ತಹಶೀಲ್ದಾರ್ ಕಚೇರಿ ಬಳಿ ಪೊಲೀಸರು ಗಸ್ತು ಹೋದಾಗ ಕಚೇರಿಗೆ ಬೀಗ ಹಾಕದಿರುವುದನ್ನು ಗಮನಿಸಿ ಕೈದಿಗಳಿಗೆ ಹಾಕುವ ಬೇಡಿ ಹಾಕಿ ಲಾಕ್ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದೇ ರೀತಿ ಬೇಜವಾಬ್ದಾರಿ ತೋರುತ್ತಿದ್ದು, ಇನ್ನಾದ್ರೂ ತಹಶೀಲ್ದಾರ್ ನೇಮಿನಾಥ ಗೆಜ್ಜೆ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ.